ಶ್ರೇಯಸ್ ಅಯ್ಯರ್ ಹಾಗೂ ಯುಜುವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಳ್ಳುತ್ತಿದ್ದಂತೆಯೇ ಚಹಲ್ ಪತ್ನಿ ಧನಶ್ರೀ ವರ್ಮಾ ಟ್ರೋಲ್ ಆಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಹಲವು ಅಚ್ಚರಿ ಹಾಗೂ ಅಪರೂಪದ ಸಂಗತಿಗಳಿಗೆ ಸಾಕ್ಷಿಯಾಯಿತು. ಲಖನೌ ಸೂಪರ್‌ ಜೈಂಟ್ಸ್‌ 27 ಕೋಟಿ ರುಪಾಯಿ ನೀಡಿ ಖರೀದಿಸಿದ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರನಾಗಿ ಹೊರಹೊಮ್ಮಿದರೆ, ಕೇವಲ 13 ವರ್ಷದ ವೈಭವ್ ಸೂರ್ಯವನ್ಶಿ ಅವರನ್ನು ರಾಜಸ್ಥಾನ ರಾಯಲ್ಸ್ 1.1 ಕೋಟಿ ರುಪಾಯಿ ನೀಡಿ ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಇನ್ನು ಇದೆಲ್ಲದರ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಮುಂಬೈ ಮೂಲದ ಬ್ಯಾಟರ್ ಶ್ರೇಯಸ್ ಅಯ್ಯರ್ ಹಾಗೂ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ದಾಖಲೆ ಮೊತ್ತಕ್ಕೆ ಖರೀದಿಸಿದೆ. ಇದರ ಬೆನ್ನಲ್ಲೇ ಯುಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ, ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಆಗಿದ್ದಾರೆ.

ಹೌದು, 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ಸ್ಥಾನ ಪಡೆದಿದ್ದ ಯುಜುವೇಂದ್ರ ಚಹಲ್, ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಚಹಲ್ ಎದುರು ನೋಡುತ್ತಿದ್ದಾರೆ. ಹೀಗಿರುವಾಗಲೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರುಪಾಯಿ ನೀಡಿ ಚಹಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್ ಹರಾಜಿನ ಇತಿಹಾಸದಲ್ಲೇ 18 ಕೋಟಿ ರುಪಾಯಿ ಪಡೆದ ಮೊದಲ ಸ್ಪಿನ್ನರ್ ಎನ್ನುವ ದಾಖಲೆ ಚಹಲ್ ಪಾಲಾಗಿದೆ. 

13 ವರ್ಷದ ವೈಭವ್ ಸೂರ್ಯವನ್ಶಿ 2025ರ ಐಪಿಎಲ್ ಆಡಲು ಅರ್ಹವೇ?

ಇನ್ನು ಮತ್ತೊಂದೆಡೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್ ಕೂಡಾ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಆರಂಭದಲ್ಲೇ 26.75 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಹೀಗಾಗಿ ಚಹಲ್ ಹಾಗೂ ಶ್ರೇಯಸ್ ಅಯ್ಯರ್ ಇದೀಗ ಒಂದೇ ತಂಡದಲ್ಲಿ ಐಪಿಎಲ್ ಆಡಲು ಸಜ್ಜಾಗಿದ್ದಾರೆ.

ಟ್ರೋಲ್ ಆದ ಧನಶ್ರೀ ವರ್ಮಾ:

ಶ್ರೇಯಸ್ ಅಯ್ಯರ್ ಹಾಗೂ ಯುಜುವೇಂದ್ರ ಚಹಲ್ ಇಬ್ಬರೂ ಅದ್ಭುತ ಆಟಗಾರರು. ಈ ಇಬ್ಬರೂ ಒಂದೇ ತಂಡದಲ್ಲಿ ಆಡುವುದರಿಂದ ಪಂಜಾಬ್‌ಗೆ ಒಳ್ಳೆಯ ಫಲಿತಾಂಶ ಸಿಗುವ ಸಾಧ್ಯತೆಯಿದೆ. ಹೀಗಾಗಿ ಇದರಲ್ಲಿ ಏನೂ ವಿಶೇಷ ಇಲ್ಲ. ಆದರೆ ಈ ಇಬ್ಬರೂ ಒಂದೇ ತಂಡದಲ್ಲಿ ಆಡುವುದರಿಂದ ಚಹಲ್ ಪತ್ನಿ ಧನಶ್ರೀ ವರ್ಮಾ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಯಾಕೆಂದರೆ ಕಳೆದ ಕೆಲ ವರ್ಷಗಳಿಂದ ಶ್ರೇಯಸ್ ಅಯ್ಯರ್ ಜತೆ ಧನಶ್ರೀ ವರ್ಮಾ ಅವರ ಹೆಸರು ಆಗಾಗ ಥಳುಕು ಹಾಕಿಕೊಳ್ಳುತ್ತಲೇ ಬಂದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. 

'ನಾನೇ ನಿಮ್ಮ ದೊಡ್ಡ...' ಯುಜುವೇಂದ್ರ ಚಹಲ್ ಬರ್ತ್‌ಡೇ ಸ್ಪಷೆಲ್ ವಿಶ್ ಮಾಡಿದ ಪತ್ನಿ ಧನಶ್ರೀ ವರ್ಮಾ..!

ಈ ಹಿಂದೆಯೂ ಶ್ರೇಯಸ್ ಅಯ್ಯರ್ ವಿಚಾರವಾಗಿ ಚಹಲ್ ಹಾಗೂ ಧನಶ್ರೀ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇದೀಗ ಮತ್ತೆ ಚಹಲ್ ಹಾಗೂ ಅಯ್ಯರ್ ಒಂದೇ ತಂಡದಲ್ಲಿ ಸೇರುತ್ತಿದ್ದಂತೆಯೇ ಧನಶ್ರೀ ವರ್ಮಾ ಅವರನ್ನು ನೆಟ್ಟಿಗರು ಕಾಲೆಳೆಯಲಾರಂಭಿಸಿದ್ದಾರೆ. 

Scroll to load tweet…

ಚಹಲ್ ಹಾಗೂ ಅಯ್ಯರ್ ಒಂದೇ ತಂಡದಲ್ಲಿರುವುದರಿಂದ ಧನಶ್ರೀ ವರ್ಮಾ ತನ್ನ ನೆಚ್ಚಿನ ತಂಡಕ್ಕೆ ಚಿಯರ್ ಮಾಡಲು ಯಾವುದೇ ತೊಂದರೆಯಾಗುವುದರಿಲ್ಲ ಎಂದು ಕಾಲೆಳೆದಿದ್ದಾರೆ. ಆದರೆ ವಿಚಾರ ಏನೆಂದರೆ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ಒಳ್ಳೆಯ ದಾಂಪತ್ಯ ಜೀವನ ನಡೆಸುತ್ತಿದ್ದು, ಶ್ರೇಯಸ್ ಅಯ್ಯರ್ ಕುರಿತಾದ ರೂಮರ್ಸ್ ಶುದ್ದ ಸುಳ್ಳು ಎನ್ನುವಂತಹ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿದೆ.