
ನವದೆಹಲಿ (ನ.23): ವಿಶ್ವಕಪ್‌ನ ಆಯಾಸ ಖಂಡಿತವಾಗಿಯೂ ನಿಜ. ಇದು ಆಟಗಾರರು ಹಾಗೂ ಟೀಮ್‌ನ ಸಹಾಯಕ ಸಿಬ್ಬಂದಿ ಮಾತ್ರವಲ್ಲ. ಕ್ರಿಕೆಟ್ ಪಂದ್ಯವನ್ನು ಕವರೇಜ್ ಮಾಡುವ ಪತ್ರಕರ್ತರಿಗೂ ಇದು ಬಹಳ ಆಯಾಸ ಉಂಟು ಮಾಡಿದೆ. ವಿಶ್ವಕಪ್ ಫೈನಲ್ ಮುಗಿದ ಬೆನ್ನಲ್ಲಿಯೇ ಭಾರತ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿದೆ. ಆದರೆ, ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರ ಇನ್ನೂ ವಿಶ್ವಕಪ್ ಸೋಲಿನಿಂದ ಹೊರಬಂದಿಲ್ಲ. ಇನ್ನು ಕ್ರೀಡಾ ಪತ್ರಕರ್ತರು ಕೂಡ ವಿಶ್ವಕಪ್ ಸೋಲಿನಿಂದ ಹೊರಬಂದಿಲ್ಲ ಅನ್ನೋದು ಪಂದ್ಯಪೂರ್ವ ನಡೆದ ಸುದ್ದಿಗೋಷ್ಠಿಯಲ್ಲಿ ಗೊತ್ತಾಗಿದೆ. ವಿಶಾಖಪಟ್ಟಣದಲ್ಲಿ ಗುರುವಾರ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಬುಧವಾರ ನಡೆದ ಪಂದ್ಯಪೂರ್ವ ಸುದ್ದಿಗೋಷ್ಠಿಗೆ ಬಂದಿದ್ದ ನಾಯಕ ಸೂರ್ಯಕುಮಾರ್ ಯಾದವ್‌ಗೆ ಅಚ್ಚರಿ ಕಾದಿತ್ತು. ಯಾಕೆಂದರೆ, ಸುದ್ದಿಗೋಷ್ಠಿಗೆ ಇಬ್ಬರು ರಿಪೋರ್ಟರ್‌ಗಳು ಮಾತ್ರವೇ ಹಾಜರಿದ್ದರು. ಈ ಬಗ್ಗೆ ಯಾವುದೇ ದಾಖಲೆಗಳು ಇಲ್ಲವಾದರೂ, ಟೀಮ್ ಇಂಡಿಯಾದ ಇತ್ತೀಚಿನ ತವರಿನ ಕ್ರಿಕೆಟ್ ಸರಣಿಯಲ್ಲಿ ಹಾಜರಾದ ಅತೀ ಕಡಿಮೆ ಪ್ರಮಾಣದ ರಿಪೋರ್ಟರ್‌ಗಳ ಸಂಖ್ಯೆ ಇದಾಗಿದೆ.
ಈ ಸರಣಿಗಾಗಿ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಅವರ ಸುದ್ದಿಗೋಷ್ಠಿಯನ್ನೂ ಬುಧವಾರ ಮಧ್ಯಾಹ್ನ ನಿಗದಿಪಡಿಸಲಾಗಿತ್ತು ಆದರೆ ಅದು ನಡೆಯಲಿಲ್ಲ.ಇದಕ್ಕೆ ಪತ್ರಕರ್ತರ ಕೊರತೆಯೇ ಕಾರಣವೇ ಎನ್ನುವುದು ಧೃಡಪಟ್ಟಿಲ್ಲ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್, ಸುದ್ದಿಗೋಷ್ಠಿಗೆ ಆಗಮಿಸಿದವರೇ, ಕೇವಲ ಇಬ್ಬರು ಪತ್ರಕರ್ತರು ಮಾತ್ರವೇ? ಎಂದು ಪ್ರಶ್ನೆ ಮಾಡಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಬಿಗ್ ಸ್ಮೈಲ್ ಇರಿಸಿದ್ದ ಸೂರ್ಯಕುಮಾರ್ ಯಾದವ್ ಕೇವಲ ನಾಲ್ಕೇ ನಿಮಿಷದಕ್ಕೆ ತಮ್ಮ ಮಾತನ್ನು ಮುಗಿಸಿದ್ದರು. ಸಾಮಾನ್ಯವಾಗಿ ಟೀಮ್ ಇಂಡಿಯಾದ ತವರಿನ ಕ್ರಿಕೆಟ್ ಪಂದ್ಯದಲ್ಲಿ ಪಂದ್ಯಪೂರ್ವ ಸುದ್ದಿಗೋಷ್ಠಿ ಕನಿಷ್ಠ ಅರ್ಧಗಂಟೆಗಳ ಕಾಲ ನಡೆಯುತ್ತಿದೆ. ಒಂದೊಂದು ಹಂತದಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಮೀಡಿಯಾ ಮ್ಯಾನೇಜರ್ ಪಿಕ್ ಮಾಡುವಂಥ ಸಂದರ್ಭವೂ ಬರುತ್ತದೆ. ಬಿಸಿಸಿಐ ಮೀಡಿಯಾ ಮ್ಯಾನೇಜರ್ ಈ ಹಂತದಲ್ಲಿ ರೊಟೇಷನ್ ಪದ್ಧತಿಯನ್ನು ಅನುಸರಿಸಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳುತ್ತಾರೆ. ಆದರೆ, ಹೆಚ್ಚಿನ ಸಮಯದಲ್ಲಿ ಕೆಲವು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಸಿಗೋದೇ ಇಲ್ಲ. ಆದರೆ, ಬುಧವಾರ ಮಾತ್ರ ಹಾಗಾಗಲಿಲ್ಲ. ಉತ್ತರಿಸೋಕೆ ಟೀಮ್ ಇಂಡಿಯಾ ಕ್ಯಾಪ್ಟನ್ ಸಿದ್ದರಿದ್ದರೂ ಅವರಿಗೆ ಪ್ರಶ್ನೆಗಳೇ ಬಂದಿರಲಿಲ್ಲ.
ಮೂಲಗಳ ಪ್ರಕಾರ ಪಿಟಿಐ ಹಾಗೂ ಎಎನ್‌ಐ ಪತ್ರಕರ್ತರು ಇವರಾಗಿದ್ದರು. ಇವರೇ ಸೂರ್ಯಕುಮಾರ್ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಸೂರ್ಯಕುಮಾರ್ ಅವರ ಮುಖಭಾವದಿಂದ ಅವರು ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿದ್ದರು. ಆದರೆ, ಸುದ್ದಿಗೋಷ್ಠಿ ಆರಂಭವಾಗಿ ಕೆಲವು ಪ್ರಶ್ನೆಗಳಿಗೇ ಇದು ಮುಕ್ತಾಯವಾಯಿತು. ಇತ್ತೀಚಿನ ವರ್ಷಗಳಲ್ಲಿ ಬಹುಶಃ ಇದು ನಂಬಲು ಅಸಾಧ್ಯವಾದ ವಿಚಾರವಾಗಿತ್ತು.
Reports: ಐಪಿಎಲ್ ಕೋಚಿಂಗ್‌ನತ್ತ ಕಣ್ಣಿಟ್ಟ ದ್ರಾವಿಡ್, ಟೀಮ್ ಇಂಡಿಯಾಗೆ ವಿವಿಎಸ್ ಹೊಸ ಕೋಚ್?
ವಿಶ್ವಕಪ್ ಸಮಯದಲ್ಲಿ, ಭಾರತದ ಪ್ರತಿ ಪತ್ರಿಕಾಗೋಷ್ಠಿಯು 100 ಕ್ಕೂ ಹೆಚ್ಚು ಪತ್ರಕರ್ತರನ್ನು ಆಕರ್ಷಿಸಿತ್ತು.. ಕೆಲವು ಸಂದರ್ಭಗಳಲ್ಲಿ, ಸೆಮಿಫೈನಲ್ ಮತ್ತು ಫೈನಲ್ ವೇಳೆ ಈ ಸಂಖ್ಯೆ 200 ದಾಟಿತು. ಅರ್ಜಿದಾರರು ಇನ್ನೂ ಹೆಚ್ಚಿದ್ದರು. ICC ಈವೆಂಟ್‌ಗಳಿಗೆ ಇದು ತುಂಬಾ ಸ್ವಾಭಾವಿಕವಾಗಿದೆ ಏಕೆಂದರೆ ಪ್ರಪಂಚದ ವಿವಿಧ ಭಾಗಗಳ ವರದಿಗಾರರು ತಮ್ಮ ತಂಡಗಳನ್ನು ಕವರ್ ಮಾಡಲು ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ ಭಾರತದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದಂತೆ ದ್ವಿಪಕ್ಷೀಯವೂ ಸಹ ಭಾರಿ ಮಾಧ್ಯಮಗಳ ಗಮನವನ್ನು ಸೆಳೆಯುತ್ತದೆ.
ನಟಿ ಕೀರ್ತಿ ಸುರೇಶ್ ಮಹಿಳಾ ಕ್ರಿಕೆಟ್ನ ಬ್ರ್ಯಾಂಡ್ ಅಂಬಾಸಿಡರ್: ಭಾರತ vs ಆಸ್ಟ್ರೇಲಿಯಾ ಟಿಕೆಟ್ ಮಾರಾಟ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.