Reports: ಐಪಿಎಲ್‌ ಕೋಚಿಂಗ್‌ನತ್ತ ಕಣ್ಣಿಟ್ಟ ದ್ರಾವಿಡ್‌, ಟೀಮ್‌ ಇಂಡಿಯಾಗೆ ವಿವಿಎಸ್‌ ಹೊಸ ಕೋಚ್‌?

By Santosh NaikFirst Published Nov 23, 2023, 1:15 PM IST
Highlights

Team India New Coach Role ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಸೋಲು ಕಂಡ ಬೆನ್ನಲ್ಲಿಯೇ ಕೋಚ್ ರಾಹುಲ್‌ ದ್ರಾವಿಡ್‌ ಅವರ ಒಪ್ಪಂದ ಕೂಡ ಅಂತ್ಯವಾಗಿದೆ. ಮೂಲಗಳ ಪ್ರಕಾರ, ರಾಹುಲ್‌ ದ್ರಾವಿಡ್‌ ತಮ್ಮ ಒಪ್ಪಂದವನ್ನು ಮುಂದುವರಿಸುವುದು ಅನುಮಾನ ಎನ್ನಲಾಗಿದೆ.
 

ನವದೆಹಲಿ (ನ.23): ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್‌ ನಿರಾಸಕ್ತಿ ತೋರಿದಿದ್ದಾರೆ ಎಂದು ವರದಿಯಾಗಿದೆ. ವಿಶ್ವಕಪ್‌ ಫೈನಲ್‌ನಲ್ಲಿ ಟೀಮ್‌ ಇಂಡಿಯಾ ಸೋಲು ಕಂಡ ಬೆನ್ನಲ್ಲಿಯೇ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಸ್ಥಾನದ ಒಪ್ಪಂದ ಕೂಡ ಅಂತ್ಯವಾಗಿದೆ. ಆದರೆ, ಮುಂದಿನ ಟಿ20 ವಿಶ್ವಕಪ್‌ವರೆಗೆ ದ್ರಾವಿಡ್‌ ಕೋಚ್‌ ಆಗಿ ಮುಂದುವರಿಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ರಾಹುಲ್‌ ದ್ರಾವಿಡ್‌ ಮಾತ್ರ ಕೋಚ್‌ ಸ್ಥಾನದಲ್ಲಿ ಮುಂದುವರಿಯಲು ನಿರಾಸಕ್ತಿ ಹೊಂದಿದ್ದು, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿರುವ ವಿವಿಎಸ್‌ ಲಕ್ಷ್ಮಣ್‌ ಟೀಮ್‌ ಇಂಡಿಯಾ ಹೊಸ ಕೋಚ್‌ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. 2021ರಲ್ಲಿ ಬಿಸಿಸಿಐ ಎರಡು ವರ್ಷದ ಅವಧಿಗೆ ರಾಹುಲ್‌ ದ್ರಾವಿಡ್‌ ಅವರನ್ನು ಟೀಮ್‌ ಇಂಡಿಯಾ ಕೋಚ್‌ ಆಗಿ ನೇಮಕ ಮಾಡಿತ್ತು. ಫೈನಲ್‌ ಪಂದ್ಯ ಹೊರತಾಗಿ ಇಡೀ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ನಿರ್ವಹಣೆ ಉತ್ತಮವಾಗಿದ್ದ ಕಾರಣಕ್ಕೆ ದ್ರಾವಿಡ್‌ ಅವರ ಒಪ್ಪಂದ ವಿಸ್ತರಣೆ ಮಾಡುವ ಇರಾದೆಯಲ್ಲಿ ಬಿಸಿಸಿಐ ಇತ್ತು. ಆದರೆ, ದ್ರಾವಿಡ್‌ ಇದಕ್ಕೆ ಒಪ್ಪಿಲ್ಲ ಎಂದು ಹೇಳಲಾಗಿದೆ.

ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಜೊತೆಯಾಗಿ ಬಹಳ ವರ್ಷಗಳ ಕಾಲ ಆಡಿದ್ದ ವಿವಿಎಸ್‌ ಲಕ್ಷ್ಮಣ್‌ ಟೀಮ್‌ ಇಂಡಿಯಾದ ನೂತನ ಮುಖ್ಯ ಕೋಚ್‌ ಆಗಲಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಲಕ್ಷ್ಮಣ್‌ ತಂಡದ ಮುಖ್ಯ ಕೋಚ್‌ ಆಗಿದ್ದಾರೆ. 2020ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಆರಂಭಿಕ ಹಂತದಲ್ಲಿಯೇ ನಿರ್ಗಮನ ಕಂಡ ಬಳಿಕ, ಎನ್‌ಸಿಎ ಕೋಚ್‌ ಆಗಿದ್ದ ದ್ರಾವಿಡ್‌ ಟೀಮ್‌ ಇಂಡಿಯಾದ ಉಸ್ತುವಾರಿ ನೀಡಲಾಗಿತ್ತು.

ಪೂರ್ಣಾವಧಿ ಕೋಚ್ ಆಗಿ ಮುಂದುವರಿಯಲು ತಾವು ಉತ್ಸುಕರಾಗಿಲ್ಲ ಎಂದು ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದಾರೆ. ಸುಮಾರು 20 ವರ್ಷಗಳ ಕಾಲ, ಅವರು ಭಾರತೀಯ ತಂಡದೊಂದಿಗೆ ಆಟಗಾರರಾಗಿ ವಿಶ್ವದ ಎಲ್ಲೆಡೆ ಪ್ರಯಾಣ ಮಾಡಿದ್ದೇನೆ. ಕಳೆದ ಎರಡು ವರ್ಷಗಳಿಂದ ಅವರು ಮತ್ತೆ ಅದೇ ಜಂಜಾಟವನ್ನು ಅನುಭವಿಸಿದರು. ಇನ್ನು ಮುಂದೆ ಕೂಡ ಇದೇ ರೀತಿ ಪ್ರಯಾಣ ಮುಂದುವರಿಸಲು ತಾವು ಬಯಸೋದಿಲ್ಲ' ಎಂದು ದ್ರಾವಿಡ್‌ ತಿಳಿಸಿದ್ದಾರೆ.

ಎನ್‌ಸಿಎಯಲ್ಲಿ ಮುಖ್ಯಸ್ಥ ಹುದ್ದೆ (ಹಿಂದೆ ಅವರು ಸೇವೆ ಸಲ್ಲಿಸಿದ ಪಾತ್ರ) ನೀಡಿದಲ್ಲಿ ಮುಂದುವರಿಯುವ ಇರಾದೆ ಇದೆ ಎಂದಿದ್ದಾರೆ. ಇದಾದಲ್ಲಿ ಅವರು ತಮ್ಮ ತವರು ಬೆಂಗಳೂರಿನಲ್ಲಿ ಉಳಿಯಲು ಅನುವು ಮಾಡಿಕೊಡುತ್ತದೆ. ಮೊದಲಿನಂತೆಯೇ, ಅವರು ತಂಡಕ್ಕೆ ಸಾಂದರ್ಭಿಕವಾಗಿ ತರಬೇತಿ ನೀಡುವುದಕ್ಕೆ ಸಿದ್ಧ ಎಂದಿದ್ದಾರೆ. ಆದರೆ ಪೂರ್ಣ ಸಮಯದ ತರಬೇತುದಾರರಾಗಿ ಮತ್ತೆಎ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ ಎಂದು ದ್ರಾವಿಡ್‌ ತಿಳಿಸಿದ್ದಾರೆ.

Latest Videos

ರಾಹುಲ್ ದ್ರಾವಿಡ್‌ಗಾಗಿ ಈ ವಿಶ್ವಕಪ್ ಗೆಲ್ಲಬೇಕು, ನಾಯಕ ರೋಹಿತ್ ಮಾತಿಗೆ ಫ್ಯಾನ್ಸ್ ಪ್ರತಿಕ್ರಿಯೆ!

ಐಪಿಎಲ್‌ ಕೋಚಿಂಗ್‌ ಮೇಲೆ ದ್ರಾವಿಡ್‌ ಕಣ್ಣು: ಎರಡು ವರ್ಷಗಳ ಕಾಲ ಟೀಮ್ ಇಂಡಿಯಾಗೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಚ್ ಆಗಲು ಉತ್ಸುಕರಾಗಿದ್ದಾರೆ. ಭಾರತದ ಮಾಜಿ ನಾಯಕ ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ. "ಅವರು ಎರಡು ವರ್ಷಗಳ ದೊಡ್ಡ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ" ಎಂದು ಮೂಲವು ಬಹಿರಂಗಪಡಿಸಿದೆ. ರಾಹುಲ್ ದ್ರಾವಿಡ್ ಐಪಿಎಲ್ ತಂಡಕ್ಕೆ ಕೋಚ್ ಆಗುವುದು ಹೊಸದಲ್ಲ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುವಾಗ ಅವರು ಕೋಚ್ ಮತ್ತು ಮಾರ್ಗದರ್ಶಕನ ಪಾತ್ರವನ್ನು ನಿರ್ವಹಿಸಿದ್ದರು.

ರಟ್ಟಾಯ್ತು ಭಾರತೀಯರ ಬ್ಯಾಟಿಂಗ್ ಗುಟ್ಟು..! ರೋಹಿತ್-ಗಿಲ್-ಶ್ರೇಯಸ್‌ಗೆ ದ್ರಾವಿಡ್ ಕೊಟ್ಟ ಟಾಸ್ಕ್ ಏನು ಗೊತ್ತಾ?

click me!