ಇಂದಿನಿಂದ ವಿಜಯ್ ಹಜಾರೆ ಏಕದಿನ ಟೂರ್ನಿ ಆರಂಭ: ಕರ್ನಾಟಕಕ್ಕೆ ಜಮ್ಮು-ಕಾಶ್ಮೀರ ಎದುರಾಳಿ

By Naveen Kodase  |  First Published Nov 23, 2023, 9:14 AM IST

38 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಮುಂದಿನ 3 ವಾರಗಳಲ್ಲಿ ಒಟ್ಟು 135 ಪಂದ್ಯಗಳು ನಡೆಯಲಿವೆ. 3 ಗುಂಪುಗಳಲ್ಲಿ ತಲಾ 8, 2 ಗುಂಪುಗಳಲ್ಲಿ ತಲಾ 7 ತಂಡಗಳಿವೆ. ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕಕ್ಕೆ ಮೊದಲ ಎದುರಾಳಿ ಜಮ್ಮು-ಕಾಶ್ಮೀರ.


ಬೆಂಗಳೂರು(ನ.23): ಏಕದಿನ ವಿಶ್ವಕಪ್‌ ಮುಗಿದ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಏಕದಿನ ಟೂರ್ನಿ ಆರಂಭಗೊಳ್ಳುತ್ತಿದೆ. 2023-24ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಗೆ ಗುರುವಾರ ಚಾಲನೆ ಸಿಗಲಿದ್ದು, ಕಳೆದ 3 ಆವೃತ್ತಿಗಳಲ್ಲಿ 2 ಬಾರಿ ಸೆಮಿಫೈನಲ್‌, 1 ಬಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದ ಕರ್ನಾಟಕ, 2019-20ರ ಬಳಿಕ ಮೊದಲ ಸಲ ಚಾಂಪಿಯನ್‌ ಆಗುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

38 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಮುಂದಿನ 3 ವಾರಗಳಲ್ಲಿ ಒಟ್ಟು 135 ಪಂದ್ಯಗಳು ನಡೆಯಲಿವೆ. 3 ಗುಂಪುಗಳಲ್ಲಿ ತಲಾ 8, 2 ಗುಂಪುಗಳಲ್ಲಿ ತಲಾ 7 ತಂಡಗಳಿವೆ. ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕಕ್ಕೆ ಮೊದಲ ಎದುರಾಳಿ ಜಮ್ಮು-ಕಾಶ್ಮೀರ.

Latest Videos

undefined

ಇಂದಿನಿಂದ ಭಾರತ vs ಆಸ್ಟ್ರೇಲಿಯಾ ಟಿ20 ಕದನ..!

ನ.23ರಿಂದ ಡಿ.5ರ ವರೆಗೂ ಬೆಂಗಳೂರು, ಮುಂಬೈ, ಜೈಪುರ, ಚಂಡೀಗಢ ಹಾಗೂ ಅಹಮದಾಬಾದ್‌ನಲ್ಲಿ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು, ಡಿ.9ರಿಂದ 16ರ ವರೆಗೂ ರಾಜ್‌ಕೋಟ್‌ನಲ್ಲಿ ನಾಕೌಟ್‌ ಪಂದ್ಯಗಳು ನಿಗದಿಯಾಗಿವೆ. ಕರ್ನಾಟಕ ತನ್ನ ಗುಂಪು ಹಂತದ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡಲಿದೆ.

ರಾಜ್ಯಕ್ಕೆ ಮಯಾಂಕ್‌ ಅಗರ್‌ವಾಲ್ ನಾಯಕ

2019-20ರಲ್ಲಿ ತನ್ನ 3ನೇ ಟ್ರೋಫಿ ಗೆದ್ದಿದ್ದ ಕರ್ನಾಟಕ, 2020-21, 2022-23ರಲ್ಲಿ ಸೆಮಿಫೈನಲ್‌ನಲ್ಲಿ ಸೋಲುಂಡಿತ್ತು. 2021-22ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ರಾಜ್ಯ ತಂಡದ ಅಭಿಯಾನ ಕೊನೆಗೊಂಡಿತ್ತು. ಈ ಬಾರಿಯೂ ಕರ್ನಾಟಕವನ್ನು ಮಯಾಂಕ್‌ ಅಗರ್‌ವಾಲ್‌ ಮುನ್ನಡೆಸಲಿದ್ದು, ಮನೀಶ್‌ ಪಾಂಡೆ, ದೇವದತ್‌ ಪಡಿಕ್ಕಲ್‌, ಆರ್‌.ಸಮರ್ಥ್‌, ವಿದ್ವತ್‌ ಕಾವೇರಪ್ಪ, ಮನೋಜ್‌ ಭಾಂಡ್ಗೆ, ವಿ.ಕೌಶಿಕ್‌ ಸೇರಿ ಇನ್ನೂ ಹಲವು ತಾರಾ ಆಟಗಾರರು ತಂಡದಲ್ಲಿದ್ದಾರೆ.

ವಿಶ್ವಕಪ್ ಸೋಲಿನ ಬೆನ್ನಲ್ಲೇ ಮತ್ತೊಂದು ಶಾಕ್, ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ಸಾಧ್ಯತೆ!

ಹಾಲಿ ಚಾಂಪಿಯನ್ ಸೌರಾಷ್ಟ್ರ ಗುರುವಾರ ತನ್ನ ಮೊದಲ ಪಂದ್ಯವನ್ನು ಕೇರಳ ವಿರುದ್ಧ ಕೆಎಸ್‌ಸಿಎ ಆಲೂರು ಕ್ರೀಡಾಂಗಣದಲ್ಲಿ ಆಡಲಿದ್ದು, ಟೂರ್ನಿಯ ಶ್ರೇಷ್ಠ ತಂಡ ಎನಿಸಿರುವ 5 ಬಾರಿಯ ಚಾಂಪಿಯನ್‌ ತಮಿಳುನಾಡು ನ.25ರಂದು ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಮುಂಬೈನಲ್ಲಿ ಆಡಲಿದೆ.

ಕರ್ನಾಟಕದ ವೇಳಾಪಟ್ಟಿ

ದಿನಾಂಕ ಎದುರಾಳಿ

ನ.23 ಜಮ್ಮು-ಕಾಶ್ಮೀರ

ನ.25 ಉತ್ತರಾಖಂಡ

ನ.27 ದೆಹಲಿ

ನ.29 ಬಿಹಾರ

ಡಿ.1 ಚಂಡೀಗಢ

ಡಿ.3 ಹರ್ಯಾಣ

ಡಿ.5 ಮಿಜೋರಾಮ್‌

* ಎಲ್ಲಾ ಪಂದ್ಯಗಳು ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿವೆ

click me!