Breaking: ಅಯ್ಯೋ ದೇವರೇ.. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಈ ಕ್ರಿಕೆಟಿಗ, ಐಸಿಯುಗೆ ದಾಖಲು..!

Published : Sep 05, 2024, 02:08 PM IST
Breaking: ಅಯ್ಯೋ ದೇವರೇ.. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಈ ಕ್ರಿಕೆಟಿಗ, ಐಸಿಯುಗೆ ದಾಖಲು..!

ಸಾರಾಂಶ

ಭಾರತೀಯ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ಆತನಿಗೆ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಐರ್ಲೆಂಡ್: ಭಾರತೀಯ ಮೂಲದ ಕ್ರಿಕೆಟಿಗರು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಪೌರತ್ವ ಪಡೆದು, ಆ ದೇಶದ ಕ್ರಿಕೆಟಿಗರಾಗಿರುವ ಹಲವರನ್ನು ನಾವು ಕಂಡಿದ್ದೇವೆ. ಇದೀಗ ಭಾರತೀಯ ಮೂಲದ ಐರ್ಲೆಂಡ್ ಕ್ರಿಕೆಟಿಗ ಸಿಮಿ ಸಿಂಗ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಕ್ರಿಕೆಟಿಗ ಅಕ್ಯೂಟ್ ಲಿವರ್ ಫೇಲ್ಯೂರ್‌ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

37 ವರ್ಷದ ಐರ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ ಆಗಿರುವ ಸಿಮಿ ಸಿಂಗ್, ಸದ್ಯ ಗುರುಗಾವ್‌ನಲ್ಲಿರುವ ಮೆದಾಂತ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಸಿಮ್ರನ್‌ಜೀತ್ ಸಿಂಗ್, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಪವರ್‌ ಪ್ಲೇನಲ್ಲಿ 113 ರನ್‌ ಸಿಡಿಸಿ ಆಸ್ಟ್ರೇಲಿಯಾ ಟಿ20 ವಿಶ್ವ ದಾಖಲೆ!

ಟೈಮ್ಸ್‌ ಆಫ್ ಇಂಡಿಯಾದ ವರದಿಯ ಪ್ರಕಾರ, ಸಿಮಿ ಸಿಂಗ್ ಕುಟುಂಬಸ್ಥರು ಈ ಕುರಿತಂತೆ ಮಾಹಿತಿ ನೀಡಿದ್ದಾರೆ. ಸಿಮಿ ಸಿಂಗ್, ಡುಬ್ಲಿನ್‌ನಲ್ಲಿದ್ದಾಗ 5-6 ತಿಂಗಳ ಹಿಂದೆಯೇ ಅವರಿಗೆ ವಿಚಿತ್ರ ರೀತಿಯ ಜ್ವರ ಕಾಣಿಸಿಕೊಂಡಿದೆ. ಈ ಜ್ವರ ಪದೇ ಪದೇ ಕಾಣಿಸಿಕೊಳ್ಳಲಾರಂಭಿಸಿತು. ಹೀಗಾಗಿ ಸಿಮಿ ಸಿಂಗ್, ಐರ್ಲೆಂಡ್‌ನಲ್ಲಿಯೇ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಆ ಬಳಿಕ ಜ್ವರ ಕಡಿಮೆಯಾಗಿತ್ತು. ಆದರೆ ಸಿಮಿ ಸಿಂಗ್ ಅವರನ್ನು ವೈದ್ಯರು ಸರಿಯಾಗಿ ಟೆಸ್ಟ್ ಮಾಡಿರಲಿಲ್ಲ. ಇನ್ನು ಜ್ವರದ ಪ್ರಮಾಣ ತೀವ್ರವಾದ ಹಿನ್ನೆಲೆಯಲ್ಲಿ ಮತ್ತೆ ತಪಾಸಣೆಗೊಳಗಾದರು. ಅಷ್ಟರಲ್ಲಾಗಲೇ ಸಿಮಿ ಸಿಂಗ್ ಅವರ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಅವರನ್ನು ಭಾರತಕ್ಕೆ ಕರೆ ತರಲಾಯಿತು ಎಂದು ಅವರ ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಭಾರತಕ್ಕೆ ಬಂದಿಳಿದ ಸಿಮಿ ಸಿಂಗ್ ಅವರಿಗೆ ಮೊದಲು ಮೊಹಾಲಿಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ ಅಲ್ಲಿನ ಚಿಕಿತ್ಸೆ ಅಷ್ಟೇನೂ ಪರಿಣಾಮಕಾರಿ ಎನಿಸಲಿಲ್ಲ. ಮೊಹಾಲಿಯಲ್ಲಿನ ಓರ್ವ ವೈದ್ಯರು ಸಿಮಿ ಸಿಂಗ್‌ಗೆ ಟಿಬಿ ತಗುಲಿದೆ ಎಂದು ತಿಳಿಸಿದರು. ಇದರ ಬೆನ್ನಲ್ಲೇ ದಿನದಿಂದ ದಿನಕ್ಕೆ ಸಿಮಿ ಸಿಂಗ್ ಅವರ ಆರೋಗ್ಯ ಬಿಗಡಾಯಿಸಲಾರಂಭಿಸಿತು. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಮೊಹಾಲಿಯಿಂದ ಸಿಮಿ ಸಿಂಗ್ ಅವರನ್ನು ಗುರುಗಾವ್‌ನಲ್ಲಿರುವ ಮೆದಾಂತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಫುಟ್ಬಾಲ್‌ನಂತೆ ಕ್ರಿಕೆಟ್‌ನಲ್ಲೂ ಇದೆ ರೆಡ್ ಕಾರ್ಡ್ ಬಳಕೆ..! ಯಾವ ಕಾರಣಕ್ಕೆ ಬಳಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಪಂಜಾಬ್ ಮೂಲದ ಕ್ರಿಕೆಟಿಗ: 

ಸಿಮಿ ಸಿಂಗ್ ಪಂಜಾಬ್‌ನ ಮೊಹಾಲಿಯಲ್ಲಿ ಜನಿಸಿದರು. ಸಿಮಿ ಸಿಂಗ್, ಐರ್ಲೆಂಡ್ ತಂಡವನ್ನು ಪ್ರತಿನಿಧಿಸುವ ಮುನ್ನ ಪಂಜಾಬ್ ಪರ ಅಂಡರ್-14 ಹಾಗೂ ಅಂಡರ್-17 ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಪಂಜಾಬ್ ಅಂಡರ್ 19 ತಂಡದಲ್ಲಿ ಸಿಮಿ ಸಿಂಗ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಇದಾದ ಬಳಿಕ 2005ರಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡುವ ಉದ್ದೇಶದಿಂದ ಐರ್ಲೆಂಡ್‌ಗೆ ತೆರಳಲು ನಿರ್ಧರಿಸಿದರು. ಆದರೆ ಅವರು ಕ್ರಿಕೆಟರ್ ಆಗಬೇಕೆನ್ನುವುದು ಅವರ ಹಣೆಯಲ್ಲಿ ಬರೆದಿತ್ತೋ ಏನೋ. ಕೊನೆಗೂ 2006ರಲ್ಲಿ ಸಿಮಿ ಸಿಂಗ್‌ ಐರ್ಲೆಂಡ್‌ನ ಕ್ರಿಕೆಟ್ ಕ್ಲಬ್ ಸೇರಿದರು. ಅಲ್ಲಿ ಉತ್ತಮ ಪ್ರದರ್ಶನ ತೋರಿ ಐರ್ಲೆಂಡ್ ಕ್ರಿಕೆಟ್ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌