ರಾಜಸ್ಥಾನ ರಾಯಲ್ಸ್‌ಗೆ ಐಪಿಎಲ್‌ ಟ್ರೋಫಿ ಗೆಲ್ಲಿಸಲು ರಾಹುಲ್ ದ್ರಾವಿಡ್ ಸಜ್ಜು..! ಹೆಡ್‌ಕೋಚ್ ಮೇಲೆ ಸಾಕಷ್ಟು ನಿರೀಕ್ಷೆ

By Kannadaprabha News  |  First Published Sep 5, 2024, 10:59 AM IST

ಟೀಂ ಇಂಡಿಯಾಗೆ ಐಸಿಸಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಹೆಡ್ ಕೋಚ್ ರಾಹುಲ್ ದ್ರಾವಿಡ್, ಇದೀಗ ರಾಜಸ್ಥಾನ ರಾಯಲ್ಸ್‌ ತಂಡದ ನೂತನ ಹೆಡ್‌ ಕೋಚ್ ಆಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌, 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಫ್ರಾಂಚೈಸಿಯೊಂದಿಗೆ ಈಗಾಗಲೇ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಭಾರತ ತಂಡಕ್ಕೆ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ದ್ರಾವಿಡ್‌, ಪ್ರಧಾನ ಕೋಚ್‌ ಹುದ್ದೆ ತ್ಯಜಿಸಿದ್ದರು. ಅವರನ್ನು ಕೆಕೆಆರ್‌ ಸೇರಿ ಕೆಲ ಐಪಿಎಲ್‌ ತಂಡಗಳು ಕೋಚ್‌ ಆಗಿ ಸೇವೆ ಸಲ್ಲಿಸುವಂತೆ ಸಂಪರ್ಕಿಸಿದ್ದವು ಎನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ಇಂಗ್ಲೆಂಡ್‌ ತಂಡ ಸಹ ದ್ರಾವಿಡ್‌ರನ್ನು ಕೋಚ್‌ ಆಗಿ ನೇಮಿಸಿಕೊಳ್ಳಲು ಇಚ್ಛಿಸಿತ್ತು ಎನ್ನುವ ಸುದ್ದಿಗಳೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ದ್ರಾವಿಡ್‌ ಈ ಹಿಂದೆ ಐಪಿಎಲ್‌ನಲ್ಲಿ ತಾವು ಆಡಿದ್ದ ತಂಡಕ್ಕೇ ಮಾರ್ಗದರ್ಶನ ಮಾಡಲು ನಿರ್ಧರಿಸಿದ್ದಾರೆ.

Tap to resize

Latest Videos

undefined

ಫುಟ್ಬಾಲ್‌ನಂತೆ ಕ್ರಿಕೆಟ್‌ನಲ್ಲೂ ಇದೆ ರೆಡ್ ಕಾರ್ಡ್ ಬಳಕೆ..! ಯಾವ ಕಾರಣಕ್ಕೆ ಬಳಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ದ್ರಾವಿಡ್‌ 2012, 2013ರಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಬಳಿಕ 2 ವರ್ಷ ಕಾಲ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ರಾಯಲ್ಸ್‌ ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡಕ್ಕೆ ಹೋಗಿದ್ದ ದ್ರಾವಿಡ್‌ ಅಲ್ಲೂ ಮಾರ್ಗದರ್ಶಕನ ಪಾತ್ರ ನಿರ್ವಹಿಸಿದ್ದರು.

2019ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ದ್ರಾವಿಡ್‌, 2021ರಲ್ಲಿ ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೇರಿದ್ದರು.

ಇನ್ನು, ಈ ಹಿಂದಿನ ಆವೃತ್ತಿಗಳಲ್ಲಿ ರಾಜಸ್ಥಾನ ತಂಡದ ಕೋಚ್‌ ಆಗಿದ್ದ ಶ್ರೀಲಂಕಾದ ಕುಮಾರ್‌ ಸಂಗಕ್ಕರ, ಫ್ರಾಂಚೈಸಿಯೊಂದಿಗೇ ಉಳಿಯಲಿದ್ದು, ವಿದೇಶಿ ಲೀಗ್‌ಗಳಲ್ಲಿರುವ ತನ್ನ ತಂಡಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ

ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಹುದ್ದೆ ರೇಸಲ್ಲಿ ಯುವರಾಜ್‌

ನವದೆಹಲಿ: ರಿಕಿ ಪಾಂಟಿಂಗ್‌ ನಿರ್ಗಮನದಿಂದ ತೆರವಾಗಿರುವ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಹುದ್ದೆಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಕೋಚ್‌ ಹುದ್ದೆ ಬಗ್ಗೆ ಫ್ರಾಂಚೈಸಿಯುವ ಯುವರಾಜ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಗೊತ್ತಾಗಿದೆ. ಭಾರತ 400ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಯುವರಾಜ್‌ ಈ ವರೆಗೂ ಯಾವುದೇ ತಂಡಕ್ಕೂ ಕೋಚ್‌ ಆದ ಅನುಭವವಿಲ್ಲ. ಆದರೆ ಯುವ ತಾರೆಗಳಾದ ಶುಭ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ ಸೇರಿ ಕೆಲ ಆಟಗಾರರಿಗೆ ಯುವರಾಜ್‌ ತರಬೇತಿ ನೀಡಿದ್ದಾರೆ. ಯುವಿ 132 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ.

click me!