'ಈ ಟ್ಯಾಲೆಂಟೆಡ್‌ ಆಟಗಾರನ ಕ್ರಿಕೆಟ್‌ ಬದುಕಿಗೆ ಎಳ್ಳು ನೀರು ಬಿಡುತ್ತಿರುವ ಕ್ಯಾಪ್ಟನ್ ರೋಹಿತ್ ಶರ್ಮಾ'..!

By Naveen Kodase  |  First Published Jul 28, 2023, 4:04 PM IST

* ವೆಸ್ಟ್ ಇಂಡೀಸ್ ಎದುರು ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
* ಬ್ಯಾಟಿಂಗ್& ಬೌಲಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಆಟಗಾರರು
* ಗೆಲುವಿನ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ ಟ್ರೋಲ್ ಮಾಡಿದ ನೆಟ್ಟಿಗರು


ಬಾರ್ಬಡೋಸ್‌(ಜು.28): ವೆಸ್ಟ್‌ ಇಂಡೀಸ್ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಟೀಂ ಇಂಡಿಯಾ, ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.  ರವೀಂದ್ರ ಜಡೇಜಾ ಹಾಗೂ ಕುಲ್ದೀಪ್‌ ಯಾದವ್‌ರ ಸ್ಪಿನ್‌ ದಾಳಿಗೆ ನಿರುತ್ತರವಾದ ವೆಸ್ಟ್‌ಇಂಡೀಸ್ ವಿರುದ್ಧ ಭಾರತ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್‌ ಜಯ ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಆತಿಥೇಯರನ್ನು 23 ಓವರಲ್ಲಿ 114 ರನ್‌ಗೆ ಆಲೌಟ್‌ ಮಾಡಿತು.

Latest Videos

undefined

ಸುಲಭ ಗುರಿ ಬೆನ್ನತ್ತಿದ ಭಾರತ, 5 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಶುಭ್‌ಮನ್‌ ಗಿಲ್‌(07) ದೊಡ್ಡ ಇನ್ನಿಂಗ್ಸ್‌ ಆಡಲಿಲ್ಲ. ಸೂರ್ಯಕುಮಾರ್‌ ಏಕದಿನ ಮಾದರಿಯಲ್ಲಿ ಮತ್ತೊಮ್ಮೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. 25 ಎಸೆತ ಎದುರಿಸಿ ಕೇವಲ 19 ರನ್‌ಗೆ ಔಟಾದರು. ಹಾರ್ದಿಕ್‌ ಪಾಂಡ್ಯ(05) ರನೌಟ್‌ ಆಗಿ ಹೊರನಡೆದರು. ಆದರೆ ಕಿಶನ್‌ ಕೆಲ ಆಕರ್ಷಕ ಹೊಡೆತಗಳ ಮೂಲಕ ತಮ್ಮ ಖಾತೆಗೆ ಮತ್ತೊಂದು ಅರ್ಧಶತಕ ಸೇರಿಸಿಕೊಂಡರು. ಇಶಾನ್ ಕಿಶನ್‌ 46 ಎಸೆತದಲ್ಲಿ 7 ಬೌಂಡರಿ,1 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ರವೀಂದ್ರ ಜಡೇಜಾ(16) ಹಾಗೂ ನಾಯಕ ರೋಹಿತ್ ಶರ್ಮಾ(12) ಅಜೇಯ ಬ್ಯಾಟಿಂಗ್ ನಡೆಸುವ ಮೂಲಕ ಇನ್ನೂ 27.1 ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. 

4ನೇ ಕ್ರಮಾಂಕದಲ್ಲಿ ಆಡಿದ್ರೆ ದಿಗ್ಗಜ ಕ್ರಿಕೆಟರ್ ಆಗ್ತಾರಾ..? 4ನೇ ಕ್ರಮಾಂಕದಲ್ಲಿ ರಾಜನಂತೆ ಮೆರೆದ 4 ಬ್ಯಾಟರ್‌..!

ರೋಹಿತ್ ಶರ್ಮಾ ಟ್ರೋಲ್ ಮಾಡಿದ ಸಂಜು ಸ್ಯಾಮ್ಸನ್ ಫ್ಯಾನ್ಸ್‌:

ಇನ್ನು ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಿಂದಲೇ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಇನ್ನು ಇದೇ ವೇಳೆ ಸಂಜು ಸ್ಯಾಮ್ಸನ್‌ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ರೋಹಿತ್ ಶರ್ಮಾ ಮೇಲೆ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

Is he ready to give chances to atleast for next game?

— Hisham (@Hisham_701)

Is bcci waiting to cement SKY at no.4 even after failing for 22 Odis? Why do unfair and discrimination with ?

— Krish Frank (@krishraj54)

Suryakumar Yadav in last 5 ODIs:

19(25)
0(1)
0(1)
0(1)
14(9)

Does he deserve ODI Spot ❓ pic.twitter.com/TeK5SwRdfX

— SODARI SALOMAN (@SALUSAL19288938)

Surya Kumar Yadav's scores in last 3 ODI he played - 0,0,0

Sanju Samson's scores in last 3 ODI he played - 86*,30*,36

But Rohit Sharma is selecting Surya in his team and treating Sanju as a water boy because Sanju is not from Mumbai

Shame on Rohit Sharma pic.twitter.com/1CX6X28yfD

— Yash Choudhary (@YashCho55375254)

Sky in last 4 ODIs innings :

0
0
0
19

Sanju Samson in last 3 innings:

83*
30*
2*

Rohit Sharma destroying Sanju Samson talent , he deserves better captain !!!!! pic.twitter.com/NsKy2llRjV

— ANUSHKA (@Anushka_JAT29)

ಐಪಿಎಲ್‌ಗೂ ಮುನ್ನ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಇದರ ಹೊರತಾಗಿಯೂ ವಿಂಡೀಸ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ನೀಡಲಾಗಿತ್ತು. ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಇನ್ನೊಂದೆಡೆ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಅದರಲ್ಲೂ ರಿಷಭ್‌ ಪಂತ್, ಏಕದಿನ ವಿಶ್ವಕಪ್‌ಗೆ ಅನುಮಾನ ಎನಿಸಿರುವ ಬೆನ್ನಲ್ಲೇ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಂಜು ಎದುರು ನೋಡುತ್ತಿದ್ದಾರೆ. ಹೀಗಿದ್ದೂ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Breaking News: ವಿಶ್ವಕಪ್‌ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ

4ನೇ ಕ್ರಮಾಂಕದಲ್ಲಿ 22 ಪಂದ್ಯಗಳನ್ನಾಡಿಯೂ ಸೂರ್ಯಕುಮಾರ್ ಯಾದವ್ ಪದೇ ಪದೇ ವಿಫಲವಾಗುತ್ತಿದ್ದರೂ, ಅವರಿಗೆ ಯಾಕೆ ಸ್ಥಾನ ನೀಡಲಾಗುತ್ತಿದೆ? ಸಂಜು ಸ್ಯಾಮ್ಸನ್ ಅವರಿಗೇಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಸಂಜು ಅವರು ಮುಂಬೈನವರು ಆಗಿಲ್ಲದ್ದಕ್ಕೆ ಅವರನ್ನು ವಾಟರ್‌ ಬಾಯ್ ಮಾಡಿಡಲಾಗಿದೆ ಹಾಘೂ ಸೂರ್ಯಕುಮಾರ್‌ಗೆ ಸ್ಥಾನ ನೀಡಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಗಿದ್ದಾರೆ.

ಇನ್ನು ಮತ್ತೋರ್ವ ನೆಟ್ಟಿಗ ಏಕದಿನ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್‌ ಅವರ ಕಳೆದ 4 ಪಂದ್ಯಗಳ ಅಂಕಿ-ಅಂಶದ ಜತೆಗೆ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಅವರ ಪ್ರತಿಭೆಯನ್ನು ಹಾಳು ಮಾಡುತ್ತಿದ್ದಾರೆ, ಅವರ ರೋಹಿತ್‌ ಗಿಂತ ಉತ್ತಮ ನಾಯಕನಡಿ ಆಡಲು ಅರ್ಹರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

click me!