4ನೇ ಕ್ರಮಾಂಕದಲ್ಲಿ ಆಡಿದ್ರೆ ದಿಗ್ಗಜ ಕ್ರಿಕೆಟರ್ ಆಗ್ತಾರಾ..? 4ನೇ ಕ್ರಮಾಂಕದಲ್ಲಿ ರಾಜನಂತೆ ಮೆರೆದ 4 ಬ್ಯಾಟರ್‌..!

By Suvarna News  |  First Published Jul 28, 2023, 1:40 PM IST

ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕ ಮಹತ್ವದ ಸ್ಥಾನ
ಈ ಕ್ರಮಾಂಕದಲ್ಲಿ ಆಡಿದ ಆಟಗಾರರು ಬಹುತೇಕ ಲೆಜೆಂಡ್ಸ್‌
ಲೆಜೆಂಡ್ಸ್ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ವಿರಾಟ್ ಕೊಹ್ಲಿ


ಬೆಂಗಳೂರು(ಜು.28) ಇಂಟರ್ ನ್ಯಾಷನಲ್ ಕ್ರಿಕೆಟ್​ಗೆ ಎಂಟ್ರಿಕೊಟ್ಟ ಆಟಗಾರರಿಗೆ ಇಂತಹದ್ದೇ ಸ್ಲಾಟ್​ನಲ್ಲಿ ಆಡಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ತಂಡದ ಅನಿವಾರ್ಯಕ್ಕೆ ತಕ್ಕಂತೆ ಆಡುವುದು ಅನಿವಾರ್ಯವಾಗಿ ಬಿಡುತ್ತೆ. ಹೀಗಾಗಿ ಯಾವ ಪ್ಲೇಯರ್​ಗೆ ಯಾವ ಸ್ಲಾಟ್ ಸಿಗುತ್ತೋ ಗೊತ್ತಾಗಲ್ಲ. ಆದ್ರೆ ಕೆಲವೊಂದಿಷ್ಟು ಪ್ಲೇಯರ್ಸ್ ತಮಗೆ ಇಷ್ಟವಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡುತ್ತಾರೆ. ಕೊನೆಗೆ ಅದೇ ಸ್ಥಾನ ಅವರಿಗೆ ಕನ್ಫರ್ಮ್​ ಆಗುತ್ತೆ. ಅಲ್ಲಿಯೇ ವಿಶ್ವದಾಖಲೆಯನ್ನೂ ನಿರ್ಮಿಸ್ತಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 4 ಸ್ಲಾಟ್​ ವೆರಿ ವೆರಿ ಇಂಪಾಡೆಂಟ್ ಸ್ಲಾಟ್​. 4ನೇ ಕ್ರಮಾಂಕದಲ್ಲಿ ಆಡಿದ ಈ ಆಟಗಾರರು ವಿಶ್ವವಿಖ್ಯಾತರಾಗಿದ್ದಾರೆ. ಕ್ರಿಕೆಟ್​​ ಜಗತ್ತಿನಲ್ಲೇ 4ನೇ ಸ್ಥಾನದಲ್ಲಿ ರಾಜರಂತೆ ಮೆರಿದಿರುವವರು ಕೇವಲ ನಾಲ್ಕೇ ಮಂದಿ. ಅದರಲ್ಲಿ ಇಬ್ಬರು ಭಾರತೀಯರಿದ್ದಾರೆ. ಅದರಲ್ಲಿ ಒಬ್ಬರು ಕೊಹ್ಲಿ.

Latest Videos

undefined

ನಂ. 4 ಸ್ಲಾಟ್​ನಲ್ಲಿ ಸಚಿನ್ ಮಾಸ್ಟರ್ ಬ್ಲಾಸ್ಟರ್

ಆಡು ಮುಟ್ಟದ ಸೊಪ್ಪಿಲ್ಲ. ಸಚಿನ್ ತೆಂಡುಲ್ಕರ್​ ಮಾಡದ ದಾಖಲೆಗಳಿಲ್ಲ ಅನ್ನೋ ಮಾತಿದೆ. ಅದರಲ್ಲಿ ಕೆಲವೊಂದಿಷ್ಟು ದಾಖಲೆಗಳನ್ನ ಅವರು ಮಾಡಿರೋದು ನಂ. 4 ಸ್ಲಾಟ್​ನಲ್ಲೇ. ಒನ್​ಡೇ ಕ್ರಿಕೆಟ್​ನಲ್ಲಿ ಓಪನರ್ ಆಗಿದ್ದ ಕ್ರಿಕೆಟ್​ ದೇವರು, ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ನಂ. 4 ಸ್ಲಾಟ್​ನಲ್ಲಿ ತೆಂಡುಲ್ಕರ್​,13,492 ರನ್ ಹೊಡೆದಿದ್ದಾರೆ. ಈ ಸ್ಲಾಟ್​ನಲ್ಲಿ ಅತ್ಯಧಿಕ ರನ್ ಹೊಡೆದಿರುವ ಅಗ್ರಜ ಸಚಿನ್. 200 ಟೆಸ್ಟ್​​ಗಳ ಪೈಕಿ 177 ಟೆಸ್ಟ್​ಗಳಲ್ಲಿ ನಂಬರ್ 4 ಸ್ಲಾಟ್​ನಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. 51ರಲ್ಲಿ 44 ಸೆಂಚುರಿಗಳನ್ನ ಹೊಡೆದಿರುವುದು 4ನೇ ಕ್ರಮಾಂಕದಲ್ಲೇ.

ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌, ಬುಮ್ರಾ ಕಮ್‌ಬ್ಯಾಕ್‌ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜಯ್‌ ಶಾ

ಸಚಿನ್​ಗಿಂತ ಬಹಳ ದೂರ ತ್ರಿಮೂರ್ತಿಗಳು:

ಶ್ರೀಲಂಕಾದ ಮಹೇಲ ಜಯವರ್ಧನೆ ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 4 ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡಿ 9,509 ರನ್​​ ಬಾರಿಸಿದ್ದಾರೆ. ಈ ಮೂಲಕ 4ನೇ ಸ್ಥಾನದಲ್ಲಿ ಆಡಿ ಅತಿಹೆಚ್ಚು ರನ್​ ಬಾರಿಸಿದ 2ನೇ ಆಟಗಾರರಾಗಿದ್ದಾರೆ. ಸೌತ್ ಆಫ್ರಿಕಾದ ಜಾಕ್ ಕಾಲಿಸ್ 9,033 ರನ್ ಹೊಡೆದು, 3ನೇ ಸ್ಥಾನದಲ್ಲಿದ್ದರೆ, ವಿಂಡೀಸ್​ನ ಬ್ರಿಯಾನ್​​​ ಲಾರಾ 7,535 ರನ್​​ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಈ ನಾಲ್ವರು 4ನೇ ಕ್ರಮಾಂಕದಲ್ಲಿ ರಾಜರಂತೆ ಆಳ್ವಿಕೆ ಮಾಡಿದ್ದಾರೆ. 

4ನೇ ಕ್ರಮಾಂಕದಲ್ಲಿ ಕೊಹ್ಲಿ ಹೊಡೆದಿರುವ ರನ್​ಗಳೆಷ್ಟು..?

ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ಸಚಿನ್ ರೆಕಾರ್ಡ್​ಗಳನ್ನ ಒಂದೊಂದಾಗಿ ಬ್ರೇಕ್ ಮಾಡಿಕೊಂಡು ಬರ್ತಿದ್ದಾರೆ. ಒನ್​ಡೇ ಮತ್ತು ಟಿ20 ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಆಡುವ ಕಿಂಗ್ ಕೊಹ್ಲಿ, ಟೆಸ್ಟ್​ನಲ್ಲಿ ಮಾತ್ರ ನಂ.​ 4 ಸ್ಲಾಟ್​ಗೆ ಫಿಕ್ಸ್ ಆಗಿದ್ದಾರೆ. ಅಲ್ಲಿಯೇ ಅವರು ರನ್ ಹೊಳೆ ಹರಿಸಿರೋದು, ಶತಕದ ಮೇಲೆ ಶತಕ ಬಾರಿಸಿರೋದು.

Breaking News: ವಿಶ್ವಕಪ್‌ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ

ಕೊಹ್ಲಿ ಟೆಸ್ಟ್​ ಫಾರ್ಮೆಟ್​​ನಲ್ಲಿ 4ನೇ ಸ್ಥಾನದಲ್ಲಿ ಆಡಿ 7,097 ರನ್ ಹೊಡೆದಿದ್ದಾರೆ. 29 ಟೆಸ್ಟ್​ ಶತಕಗಳ ಪೈಕಿ 25 ಶತಕಗಳನ್ನ ನಂಬರ್ 4 ಸ್ಲಾಟ್​ನಲ್ಲೇ ಸಿಡಿಸಿರುವುದು. 4ನೇ ಕ್ರಮಾಂಕದಲ್ಲಿ ಆಡಿ ಅತಿಹೆಚ್ಚು ರನ್ ಹೊಡೆದಿರುವವರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ಸಚಿನ್ ರೆಕಾರ್ಡ್​ ಬ್ರೇಕ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಉಳಿದವರ ದಾಖಲೆಯಂತೂ ಮುರಿಯುವ ಹಾದಿಯಲ್ಲಿದ್ದಾರೆ.
 

click me!