IND vs NZ ಮೊದಲ ಟಿ20 ಪಂದ್ಯ, ಟಾಸ್ ಗೆದ್ದ ಭಾರತ, ಪೃಥ್ವಿ ಚಹಾಲ್‌ಗೆ ನೋ ಚಾನ್ಸ್!

By Suvarna NewsFirst Published Jan 27, 2023, 6:57 PM IST
Highlights

ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆೆ ಮಾಡಿಕೊಂಡಿದೆ. ತಂಡದಲ್ಲಿ ಯಾರು ಚಾನ್ಸ್ ಪಡೆದಿದ್ದಾರೆ. ಇಲ್ಲಿದ ವಿವರ.

ರಾಂಚಿ(ಜ.27):  ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.  ಏಕದಿನ ಟೂರ್ನಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ಟಿ20 ಯಲ್ಲಿ ಶುಭಾರಂಭದ ವಿಶ್ವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಸಮತೋಲಿತ ತಂಡ ಆಯ್ಕೆ ಮಾಡಿ ಕಣಕ್ಕಿಳಿದೆ. ಆದರೆ ಪೃಥ್ವಿ ಶಾ, ಯುಜುವೇಂದ್ರ ಚಹಾಲ್, ಮುಕೇಶ್ ಕುಮಾರ್ ಹಾಗೂ ಜಿತೇಶ್ ಶರ್ಮಾ ತಂಡದಿಂದ ಹೊರಗುಳಿದಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ವಾಶಿಂಗ್ಟನ್ ಸುಂದರ್, ಶಿವಂ ಮಾವಿ, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಶೀದೀಪ್ ಸಿಂಗ್ 

IND vs NZ ಟಿ20 ಸರಣಿಗೂ ಮುನ್ನ ಪಾಂಡ್ಯ ಸೈನ್ಯಕ್ಕೆ ಅಚ್ಚರಿ, ಡ್ರೆಸ್ಸಿಂಗ್ ರೂಂಗೆ ಧೋನಿ ಭೇಟಿ!

ನ್ಯೂಜಿಲೆಂಡ್ ಪ್ಲೇಯಿಂಗ್ 11
ಫಿನ್ ಅಲೆನ್, ಡೆವೋನ್ ಕೊನ್ವೋ, ಮಾರ್ಕ್ ಚಾಂಪ್‌ಮಾನ್, ಡರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮಿಚೆಲ್ ಬ್ರೇಸ್‌ವೆಲ್, ಜಾಕೋಬ್ ಡಫಿ, ಐಶ್ ಸೋಧಿ, ಲ್ಯೂಕಿ ಫರ್ಗ್ಯೂಸನ್, ಬ್ಲೈರ್ ಟಿಕ್ನರ್ 

ರಾಂಚಿ ಪಿಚ್‌ನಲ್ಲಿ ಸೆಕೆಂಡ್ ಬ್ಯಾಟಿಂಗ್ ಗೆಲುವಿಗೆ ಸಹಕಾರಿಯಾಗಿದೆ. ಇದರಿಂದ ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಡ್ಯೂ ಫ್ಯಾಕ್ಟರ್ ಪಂದ್ಯದ ಗತಿ ಬದಲಿಸಲಿದೆ. ಹೀಗಾಗಿ ಚೇಸಿಂಗ್ ಕೊಂಚು ಸುಲಭವಾಗಲಿದೆ. ಆದರೆ ನ್ಯೂಜಿಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬೇಕು. ಇಷ್ಟೇ ಅಲ್ಲ ಈಗಾಗಲೇ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಭಾರತ ಪ್ರಯಾಸದ ಗೆಲುವು ದಾಖಲಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಈ ರೀತಿಯ ಗೆಲುವು ಅಸಾಧ್ಯವಾಗಿದೆ. ಹೀಗಾಗಿ ಕಿವೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬೇಕಾದ ಅನಿವಾರ್ಯತೆ ಭಾರತಕ್ಕಿದೆ.

ಇಶಾನ್ ಕಿಶನ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದು ಟೀಂ ಇಂಡಿಯಾಗೆ ಬಲ ಹೆಚ್ಚಿಸಿದೆ. ಆರಂಭಿಕ ಹಂತದಲ್ಲೇ ಭಾರತಕ್ಕೆ ರನ್ ಹರಿದು ಬರಲಿದೆ. ಇದರ ಜೊತೆಗೆ ಹಾರ್ದಿಕ್ ಪಾಂಡ್ಯ ಸಾಧ್ ನೀಡಲಿದ್ದಾರೆ. ಬೌಲಿಂಗ್‌ನಲ್ಲೂ ಭಾರತ ದಿಟ್ಟ ಹೋರಾಟ ನೀಡಿದೆ. ಉಮ್ರಾನ್ ಮಲಿಕ್, ಶಿವಂ ಮಾವಿ ಹಾಗೂ ಅರ್ಶದೀಪ್ ಸಿಂಗ್ ವೇಗದ ವಿಭಾಗ ಎದುರಾಳಿಗೆ ಶಾಕ್ ನೀಡುವ ಸಾಮರ್ಥ್ಯ ಹೊಂದಿದೆ. 

ಮತ್ತೆ ಬರ್ತಿದೆಯಾ ಶೋಲೆ: ಜೈ ಹಾಗೂ ವೀರೂ ಆಗಿ ಬದಲಾದ ಧೋನಿ & ಪಾಂಡ್ಯ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ದಿಟ್ಟ ಹೋರಾಟ ನೀಡಿ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಇದೇ ರೀತಿ ಟಿ20 ಸರಣಿ ಕೈವಶ ಮಾಡಲು ಭಾರತ ಸಜ್ಜಾಗಿದೆ. ಹೀಗಾಗಿ ರಾಂಚಿಯಲ್ಲಿ ಕಠಿಣ ಹೋರಾಟದ ನಿರೀಕ್ಷೆ ಅಭಿಮಾನಿಗಳಿಗಿದೆ. ಎಂ.ಎಸ್.ಧೋನಿ ತವರಲ್ಲಿ ಪಂದ್ಯ ನಡೆಯುತ್ತಿದೆ. ಈಗಾಗಲೇ ಧೋನಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ತೆರಳಿ ಆಟಾಗಾರರ ಜೊತೆ ಮಾತುಕತೆ ನಡೆಸಿದ್ದರು. ಯುವ ಆಟಗಾರರಿಗೆ ಧೋನಿ ಮಾರ್ಗದರ್ಶನ ನೀಡಿದ್ದರು. ಇದೀಗ ರಾಂಚಿಯಿಂದ ಟಿ20 ಸರಣಿ ಆರಂಭಿಸುತ್ತಿರುವ ಟೀಂ ಇಂಡಿಯಾ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದೆ.

 

click me!