ಮೊದಲ ಸಲ ಐಸಿಸಿ ವಿಶ್ವ ಟೆಸ್ಟ್‌ ಫೈನಲ್‌ನಿಂದ ಟೀಂ ಇಂಡಿಯಾ ಔಟ್! ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದು ಹೇಗೆ?

By Naveen Kodase  |  First Published Jan 6, 2025, 10:29 AM IST

ಟೀಂ ಇಂಡಿಯಾ ಮೊದಲ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಲುಪಲು ವಿಫಲವಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಲಿವೆ.


ಸಿಡ್ನಿ: ಟೀಂ ಇಂಡಿಯಾ ಇದೇ ಮೊದಲ ಬಾರಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ವಿಫಲವಾಗಿದೆ. 2019-21 ಹಾಗೂ 2021-23ರಲ್ಲಿ ಫೈನಲ್‌ ಪ್ರವೇಶಿಸಿದ್ದ ತಂಡ, 2023-25ರಲ್ಲಿ ಲೀಗ್‌ ಹಂತದಿಂದಲೇ ನಿರ್ಗಮಿಸಿದೆ. ಈ ಬಾರಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಜೂನ್‌ 11ರಿಂದ ನಡೆಯಲಿರುವ ಪಂದ್ಯಕ್ಕೆ ಇಂಗ್ಲೆಂಡ್‌ನ ಲಾರ್ಡ್ಸ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇತ್ತೀಚೆಗೆ ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ 0-3 ಸೋಲುವ ಮೂಲಕ ಭಾರತ ಫೈನಲ್‌ ರೇಸ್‌ನಿಂದ ಒಂದು ಹೆಜ್ಜೆ ಹಿಂದಿಟ್ಟಿತ್ತು. ಇದರ ಹೊರತಾಗಿಯೂ, ಆಸೀಸ್‌ ವಿರುದ್ಧ ಸರಣಿಯಲ್ಲಿ ಭಾರತ 3 ಪಂದ್ಯ ಗೆದ್ದಿದ್ದರೆ ಫೈನಲ್‌ಗೇರಬಹುದಿತ್ತು. ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ಸಿಡ್ನಿ ಟೆಸ್ಟ್‌ನಲ್ಲಿ ಗೆದ್ದಿದ್ದರೆ, ಭಾರತ ರೇಸ್‌ನಲ್ಲಿ ಉಳಿದುಕೊಂಡು ಫೈನಲ್‌ ಸ್ಥಾನದ ಅದೃಷ್ಟಕ್ಕಾಗಿ ಕಾಯಬಹುದಿತ್ತು. ಆದರೆ ಭಾರತ ಅಲ್ಲೂ ಗೆಲ್ಲಲಿಲ್ಲ.

Tap to resize

Latest Videos

10ರಲ್ಲಿ 6 ಟೆಸ್ಟ್‌ ಸೋತ ಗಂಭೀರ್‌ ಹುದ್ದೆ ಮೇಲೆ ತೂಗುಗತ್ತಿ: ರಣಜಿ ಆಡಲು ಆಟಗಾರರಿಗೆ ಖಡಕ್ ವಾರ್ನಿಂಗ್‌!

ಆಸೀಸ್‌ ಈ ಪಂದ್ಯದಲ್ಲಿ ಜಯಗಳಿಸುವ ಮೂಲಕ ಒಟ್ಟಾರೆ ಗೆಲುವಿನ ಪ್ರತಿಶತವನ್ನು ಶೇ.63.73ಕ್ಕೆ ಹೆಚ್ಚಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಭಾರತ ಶೇ.50.00 ಗೆಲುವಿನ ಪ್ರತಿಶತದೊಂದಿಗೆ 3ನೇ ಸ್ಥಾನಕ್ಕೆ ಕುಸಿಯಿತು. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಗೆಲ್ಲುವ ಮೂಲಕ ದ.ಆಫ್ರಿಕಾ(ಶೇ.66.67) ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿತ್ತು. ಆಸ್ಟ್ರೇಲಿಯಾಕ್ಕೆ ಇನ್ನು ಶ್ರೀಲಂಕಾ ವಿರುದ್ಧ 2 ಪಂದ್ಯಗಳಿದ್ದು, ಅದರಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

2019-21ರ ಫೈನಲ್‌ನಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ಗೆದ್ದಿದ್ದರೆ, 2021-23ರಲ್ಲಿ ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು.

ಫೈನಲ್‌ ರೇಸ್‌ನಿಂದ ಭಾರತ ಹೊರ ಬಿದ್ದಿದ್ದು ಹೇಗೆ?

ಭಾರತ ಈ ಬಾರಿಯೂ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿತ್ತು. 2024 ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿ ಆರಂಭಗೊಂಡಾಗ ಭಾರತಕ್ಕೆ 10 ಟೆಸ್ಟ್‌ಗಳಲ್ಲಿ ಕನಿಷ್ಠ 5 ಜಯ, 1 ಡ್ರಾ ಬೇಕಿತ್ತು. ಬಾಂಗ್ಲಾ ವಿರುದ್ಧ 2ರಲ್ಲಿ ಗೆದ್ದಾಗ ತಂಡದ ಫೈನಲ್‌ ಹಾದಿ ಸುಲಭವಾಗಿತ್ತು. ಆದರೆ ಆ ಬಳಿಕ ನಡೆದಿದ್ದೇ ಬೇರೆ. ನ್ಯೂಜಿಲೆಂಡ್‌ ವಿರುದ್ಧ 0-3 ಅನಿರೀಕ್ಷಿತ ಸೋಲು, ಆಸ್ಟ್ರೇಲಿಯಾ ವಿರುದ್ಧ 1-3 ಆಘಾತಕಾರಿ ಸೋಲಿನಿಂದಾಗಿ ಭಾರತ ರೇಸ್‌ನಿಂದಲೇ ಹೊರಬಿತ್ತು.

ಭಾರತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿದ್ದೇ ಈ 6 ಪ್ರಮುಖ ಕಾರಣಗಳಿಂದ! ನೀವೇನಂತೀರಾ?

ಟೆಸ್ಟ್‌ನಲ್ಲಿ ಮೊಹಮ್ಮದ್‌ ಸಿರಾಜ್‌ಗೆ 100 ವಿಕೆಟ್‌

ಸಿಡ್ನಿ: ಭಾರತದ ತಾರಾ ವೇಗಿ ಮೊಹಮ್ಮದ್‌ ಸಿರಾಜ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪೂರ್ಣಗೊಳಿಸಿದರು. ಭಾನುವಾರ ಆಸ್ಟ್ರೇಲಿಯಾದ ಉಸ್ಮಾನ್‌ ಖವಾಜ ವಿಕೆಟ್‌ ಪಡೆಯುವ ಮೂಲಕ 100ರ ಮೈಲುಗಲ್ಲು ಸಾಧಿಸಿದರು. ಸಿರಾಜ್‌ ಈ ಸಾಧನೆ ಮಾಡಿದ ಭಾರತದ 10ನೇ ವೇಗಿ, ಒಟ್ಟಾರೆ 24ನೇ ಬೌಲರ್‌. ಅವರು 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಟೆಸ್ಟ್‌ ಪಾದಾರ್ಪಣೆ ಮಾಡಿದ್ದರು. ಈ ವರೆಗೂ ದೇಶದ ಪರ 36 ಟೆಸ್ಟ್‌ ಆಡಿದ್ದಾರೆ.

click me!