ಭಾರತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 1-3 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಬ್ಯಾಟಿಂಗ್ ವೈಫಲ್ಯ, ಬೌಲಿಂಗ್‌ನಲ್ಲಿ ಬುಮ್ರಾ ಅವರನ್ನು ಹೊರತುಪಡಿಸಿ ಇತರರ ದುರ್ಬಲ ಪ್ರದರ್ಶನ, ಹೆಡ್‌ರ ಅಬ್ಬರ, ಕೊಹ್ಲಿ ಮತ್ತು ರೋಹಿತ್‌ರ ನಿರಾಸೆ ಹಾಗೂ ಸ್ಮಿತ್‌ರ ಶತಕಗಳು ಸೋಲಿಗೆ ಪ್ರಮುಖ ಕಾರಣಗಳು.
ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 1-3 ಅಂತರದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿ ದಶಕದ ಬಳಿಕ ಸರಣಿ ಕೈಚೆಲ್ಲಿದೆ. ಮೊದಲ ಪಂದ್ಯವಾದ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದಿದ್ದು ಬಿಟ್ಟರೇ ಉಳಿದ 4 ಪಂದ್ಯಗಳಲ್ಲೂ ಭಾರತದ ಎದುರು ಆತಿಥೇಯ ಆಸ್ಟ್ರೇಲಿಯಾ ಅಮೋಘ ಪ್ರದರ್ಶನವನ್ನೇ ತೋರಿತು.
ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ದಶಕದ ಬಳಿಕ 2ಕ್ಕಿಂತ ಹೆಚ್ಚು ಪಂದ್ಯದಲ್ಲಿ ಗೆಲುವು ಸಾಧಿಸಿತು. 2014ರಲ್ಲಿ ಆಸ್ಟ್ರೇಲಿಯಾ 2 ಪಂದ್ಯ ಗೆದ್ದಿತ್ತು. ಆ ಬಳಿಕ ಕಳೆದ 4 ಸರಣಿಗಳಲ್ಲೂ ತಲಾ 1 ಪಂದ್ಯದಲ್ಲಿ ಜಯಗಳಿಸಿತ್ತು. ಈ ಬಾರಿ ಸರಣಿಯಲ್ಲಿ 3-1ರಲ್ಲಿ ಗೆಲುವು ಸಾಧಿಸಿದೆ. ಅಷ್ಟಕ್ಕೂ ದಶಕದ ಬಳಿಕ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಲು ಕಾರಣವೇನು ಎನ್ನುವುದನ್ನು ನೋಡೋಣ ಬನ್ನಿ.
ಸಿಡ್ನಿ ಮೈದಾನದಲ್ಲಿ ಖಾಲಿ ಜೇಬು ತೋರಿಸಿ ಆಸೀಸ್ ಫ್ಯಾನ್ಸ್ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
1. ಬ್ಯಾಟರ್‌ಗಳ ದಯನೀಯ ವೈಫಲ್ಯ.
ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ಸೋಲಿಗೆ ಪ್ರಮುಖ ಕಾರಣ. ಕೆಲ ಉತ್ತಮ ವೈಯಕ್ತಿಕ ಪ್ರದರ್ಶನ ಕಂಡುಬಂದರೂ ತಂಡವಾಗಿ ಆಡಲಿಲ್ಲ. ಸರಣಿಯ 7 ಇನ್ನಿಂಗ್ಸ್‌ಗಳಲ್ಲಿ ಭಾರತ 200ಕ್ಕಿಂತ ಕಡಿಮೆಗೆ ಆಲೌಟ್ ಆಯಿತು.
2. ಬುಮ್ರಾ ಒನ್ ಮ್ಯಾನ್ ಆರ್ಮಿ
ಬುಮ್ರಾ ಇಲ್ಲದಿದ್ದರೆ ಭಾರತ 5ರಲ್ಲೂ ಸೋಲುತ್ತಿತ್ತು ಎಂಬುದು ಸದ್ಯದ ವಿಶ್ಲೇಷಣೆ. ಒನ್ ಮ್ಯಾನ್ ಶೋ ಎಂಬಂತೆ ಹೋರಾಡಿದರು. ಇತರ ಬೌಲರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಸಿರಾಜ್ 19 ವಿಕೆಟ್ ಕಿತ್ತರೂ ದುಬಾರಿಯಾದರು.
ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಸರಣಿ ಸೋತ ಭಾರತ: WTC ಫೈನಲ್‌ನಿಂದಲೂ ಔಟ್
3. ಸರಣಿಯುದ್ದಕ್ಕೂ ಭಾರತಕ್ಕೆ ಹೆಡ್ಡೇಕ್!
ಟ್ರ್ಯಾವಿಸ್ ಹೆಡ್ ಈ ಬಾರಿಯೂ ಭಾರತಕ್ಕೆ ತಲೆನೋವಾದರು. 9 ಇನ್ನಿಂಗ್ಸ್‌ಗಳಲ್ಲಿ 2 ಶತಕ, 1 ಅರ್ಧಶತಕ ಸೇರಿ 56ರ ಸರಾಸರಿಯಲ್ಲಿ ಹೆಡ್ 448 ರನ್ ಕಲೆಹಾಕಿದರು. ಅವರ 92.56 ಸ್ಟ್ರೈಕ್‌ರೇಟ್ ಭಾರತವನ್ನು ಮತ್ತಷ್ಟು ಕುಗ್ಗಿಸಿತು.
4. ಕೊಹ್ಲಿಯ ಆಫ್ ಸ್ಟಂಪ್ ಸಮಸ್ಯೆ
ಕೊಹ್ಲಿ ಸರಣಿಯುದ್ದಕ್ಕೂ ಆಫ್ ಸ್ಟಂಪ್‌ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕೊನೆ ಟೆಸ್ಟ್‌ವರೆಗೂ ಪರಿಹಾರ ಕಂಡುಕೊಳ್ಳಲಾಗಲಿಲ್ಲ. 9 ಇನ್ನಿಂಗ್ಸ್ ಪೈಕಿ 8ರಲ್ಲಿ ಸ್ಲಿಪ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್ ನೀಡಿದ್ದಾರೆ.
5. ರೋಹಿತ್ ಶರ್ಮಾ ಫ್ಲಾಪ್ ಶೋ
ನಾಯಕನಾಗಿ ರೋಹಿತ್ ತಮ್ಮ ಆಟದ ಮೂಲಕ ತಂಡಕ್ಕೆ ಮಾದರಿಯಾಗಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಅವರ ಫ್ಲಾಪ್ ಶೋ ತಂಡಕ್ಕೆ ಮುಳುವಾಯಿತು. 5 ಇನ್ನಿಂಗ್ಸ್‌ನಲ್ಲಿ ಕೇವಲ 31 ರನ್ ಗಳಿಸಿದರು. ನಾಯಕತ್ವದಲ್ಲೂ ವಿಫಲರಾದರು.
6. ಸ್ಟೀವ್ ಸ್ಮಿತ್‌ರ ‘ಡಬಲ್’ ಸೆಂಚುರಿ
ಆಸೀಸ್ ವೇಗಿಗಳ ಬಳಿಕ ಭಾರತವನ್ನು ಹೆಚ್ಚಾಗಿ ಕಾಡಿದ್ದು ಸ್ಟೀವ್ ಸ್ಮಿತ್. ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಸ್ಮಿತ್ ಸರಣಿಯಲ್ಲಿ ಅಬ್ಬರಿಸಿದರು. ಸತತ 2 ಶತಕ ಸೇರಿ 314 ರನ್ ಸಿಡಿಸಿ ಆಸೀಸ್ ಗೆಲುವಿನ ಪ್ರಮುಖ ರೂವಾರಿಯಾದರು.
