ಏಕದಿನ ವಿಶ್ವಕಪ್ ಟೂರ್ನಿಯ ಎರಡು ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಮುಗ್ಗರಿಸಿದೆ. ಆದರೆ ಈ ಸೋಲಿಗಿಂತ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಭಾರಿ ಟ್ರೋಲ್ ಆಗಿದೆ. ಇದೀಗ ಪಾಕಿಸ್ತಾನ ಕ್ರಿಕೆಟಿಗ ಶದಬ್ ಖಾನ್, ಕಳಪೆ ಫೀಲ್ಡಿಂಗ್‌ಗೆ ಹೈದರಾಬಾದ್ ಬಿರಿಯಾನಿ ಕಾರಣ ಎಂದಿದ್ದಾರೆ.
ಹೈದರಾಬಾದ್(ಅ.04) ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಎರಡು ಅಭ್ಯಾಸ ಪಂದ್ಯ ಆಡಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಎರಡೂ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಮುಗ್ಗರಿಸಿದೆ. ಆದರೆ ಎರಡೂ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ತೀವ್ರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪಾಕ್ ಫೀಲ್ಡಿಂಗ್ ಕುರಿತು ಮೀಮ್ಸ್ ಹರಿದಾಡುತ್ತಿದೆ. ಕಳಪೆ ಫೀಲ್ಡಿಂಗ್ ಕುರಿತು ಹರ್ಷಾ ಬೋಗ್ಲೆ ಶದಬ್ ಖಾನ್‌ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ಗೆ ಹೈದರಾಬಾದ್ ಬಿರಿಯಾನಿ ಕಾರಣ ಎಂದಿದ್ದಾರೆ. ಈ ಉತ್ತರ ಇದೀಗ ವೈರಲ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸದ ಪಂದ್ಯದ ಬಳಿಕ ಆಸ್ಟ್ರೇಲಿಯಾ ವಿರುದ್ದ ಪಾಕಿಸ್ತಾನ ಅಭ್ಯಾಸ ಪಂದ್ಯ ಆಡಿತ್ತು. ಈ ವೇಳೆ ಕಳಪೆ ಫೀಲ್ಡಿಂಗ್‌ನಿಂದ ಹಲವು ರನ್ ಎದುರಾಳಿ ತಂಡಕ್ಕೆ ವರವಾಗಿತ್ತು. ಅಭ್ಯಾಸ ಪಂದ್ಯದ ಸೋಲಿಗೆ ಕಳಪೆ ಫೀಲ್ಡಿಂಗ್ ಕೂಡ ಕಾರಣವಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಗೈರಾಗಿದ್ದರು. ಬಾಬರ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ ಶದಬ್ ಖಾನ್, ಪಂದ್ಯದ ಬಳಿಕ ಸೋಲಿನ ಕಾರಣಗಳನ್ನು ವವರಿಸುವಾಗ, ಹೈದರಾಬಾದ್ ಬಿರಿಯಾನಿಯನ್ನೇ ದೂಷಿಸಿದ್ದಾರೆ.
undefined
ಪ್ಲೀಸ್ ನನ್ನ ಬಳಿ ಟಿಕೆಟ್ ಕೇಳ್ಭೇಡಿ, ಮನೆಯಲ್ಲೇ ಮ್ಯಾಚ್ ಎಂಜಾಯ್ ಮಾಡಿ: ಕೊಹ್ಲಿ ಪೋಸ್ಟ್ ವೈರಲ್
ಪಂದ್ಯದ ಬಳಿಕ ಹರ್ಷಾ ಬೋಗ್ಲೆ, ತಂಡದ ಕಳಪೆ ಫೀಲ್ಡಿಂಗ್ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶದಬ್ ಖಾನ್, ಪಾಕಿಸ್ತಾನ ಆಟಗಾರರ ಕಳಪೆ ಫೀಲ್ಡಿಂಗ್‌ಗೆ ಹೈದರಾಬಾದ್ ಬಿರಿಯಾನಿ ಕಾರಣ. ಹೈದರಾಬಾದ್ ಬಿರಿಯಾನಿ ತಿಂದ ಆಟಗಾರರು ಫೀಲ್ಡಿಂಗ್‌ನಲ್ಲಿ ನಿಧಾನವಾಗಿದ್ದಾರೆ. ಪ್ರತಿ ದಿನ ನಾವು ಹೈದರಾಬಾದ್ ಬಿರಿಯಾನಿ ತಿನ್ನುತ್ತಿದ್ದೇವೆ. ಇದು ನಮ್ಮ ಫೀಲ್ಡಿಂಗ್ ನಿಧಾನಗೊಳಿಸಿದೆ ಎಂದು ಶದಬ್ ಖಾನ್ ಹೇಳಿದ್ದಾರೆ.
Roti Gang ko Biryani khila kr slow kia ja raha ..😭😄 pic.twitter.com/uWImzqcIJK
— ying U (@statpad_R)
ಏಕದಿನ ವಿಶ್ವಕಪ್ ಟೂರ್ನಿಗಾಗಿ ಸೆಪ್ಟೆಂಬರ್ 27 ರಂದು ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಪಾಕಿಸ್ತಾನಿ ಆಟಗಾರರನ್ನು ಸ್ವಾಗತಿಸಿದ್ದರು. ಬಳಿಕ ಹೋಟೆಲ್ ಬಳಿಯೂ ಹಲವರು ನೆರೆದಿದ್ದರು. ಇನ್ನ ಅಭಿಮಾನಿಗಳಿಂದ ಸಿಕ್ಕ ಪ್ರತಿಕ್ರಿಯೆಗೆ ಪಾಕ್ ಆಟಗಾರರು ಬೆರಗಾಗಿದ್ದು, ಬಾಬರ್, ರಿಜ್ವಾನ್ ಸೇರಿ ಹಲವರು ಸಾಮಾಜಿಕ ತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದರು.
ವಿಶ್ವಕಪ್ ಕಿರೀಟ ಗೆಲ್ಲಲು ಟೀಂ ಇಂಡಿಯಾ ರೆಡಿ: ಭಾರತ ತಂಡದ ಬಲಾಬಲವೇನು?
ಹೈದರಾಬಾದ್‌ನಲ್ಲಿ ಪಾಕಿಸ್ತಾನ ಕ್ರಿಕೆಟಿಗರಿಗೆ ಹೈದರಾಬಾದಿ ಬಿರಿಯಾನಿ ನೀಡಲಾಗಿದೆ. ಬಹುತೇಕ ಪಾಕ್ ಆಟಗಾರರು ಹೈದರಾಬಾದ್ ಬಿರಿಯಾನಿ ಮೆಚ್ಚಿಕೊಂಡಿದ್ದಾರೆ. ನಾಯಕ ಬಾಬರ್ ಅಜಮ್, ಹೈದರಾಬಾದ್ ಬಿರಿಯಾನಿ ಕೊಂಚ ಖಾರ ಜಾಸ್ತಿ. ಆದರೆ ಚೆನ್ನಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.