
ರಾಜ್‌ಕೋಟ್(ಅ.04): 2023-24ರ ಇರಾನಿ ಕಪ್ ಪ್ರಥಮ ದರ್ಜೆ ಟ್ರೋಫಿಯನ್ನು ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ತಂಡ ಜಯಿಸಿದೆ. ಹಾಲಿ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ನಡೆದ ಪಂದ್ಯವನ್ನು ಶೇಷ ಭಾರತ ಕೇವಲ 3 ದಿನಗಳಲ್ಲಿ 175 ರನ್‌ಗಳಿಂದ ಜಯಿಸಿತು.
2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸಲ್ಲಿ 9 ವಿಕೆಟ್‌ಗೆ 212 ರನ್ ಗಳಿಸಿದ್ದ ಸೌರಾಷ್ಟ್ರ, 3ನೇ ದಿನ ಆ ಮೊತ್ತಕ್ಕೆ ಕೇವಲ 2 ರನ್ ಸೇರಿಸಿತು. 94 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಶೇಷ ಭಾರತ, 160 ರನ್‌ಗೆ ಆಲೌಟ್ ಆಯಿತು. ಆರಂಭಿಕರಾದ ಮಯಾಂಕ್ 49, ಸಾಯಿ ಸುದರ್ಶನ್ 43 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರಿಂದ ಹೋರಾಟ ಕಂಡು ಬರಲಿಲ್ಲ. ಸ್ಪಿನ್ನರ್‌ಗಳಾದ ಪಾರ್ಥ್ ಭುಟ್ 7, ಧರ್ಮೇಂದ್ರ ಜಡೇಜಾ 3 ವಿಕೆಟ್ ಕಿತ್ತರು.
Asian Games ಭಾರತ ಪರ ಪಾದಾರ್ಪಣೆ ಮಾಡಿ ರಾಷ್ಟ್ರಗೀತೆ ಹಾಡುವಾಗ ಆನಂದ ಭಾಷ್ಪ ಸುರಿಸಿದ ಆರ್ ಸಾಯಿ ಕಿಶೋರ್..!
ಗೆಲ್ಲಲು 255 ರನ್ ಗುರಿ ಬೆನ್ನತ್ತಿದ ಸೌರಾಷ್ಟ್ರ, 34.3 ಓವರಲ್ಲಿ 79 ರನ್‌ಗೆ ಸರ್ವಪತನ ಕಂಡಿತು. ಸ್ಪಿನ್ನರ್‌ಗಳಾದ ಸೌರಭ್ ಕುಮಾರ್ 6, ಶಮ್ಸ್ ಮುಲಾನಿ 3, ಪುಲ್ಕಿತ್ ನಾರಂಗ್ 1 ವಿಕೆಟ್ ಕಬಳಿಸಿದರು.
ಭಾರತದ 2ನೇ ಅಭ್ಯಾಸ ಪಂದ್ಯವೂ ಮಳೆಗಾಹುತಿ
ತಿರುವನಂತಪುರಂ: ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ನಡೆಸಬೇಕಿದ್ದ ಎರಡೂ ಪಂದ್ಯಗಳನ್ನು ಮಳೆ ಬಲಿ ಪಡೆದಿದೆ. ಇಲ್ಲಿ ಮಂಗಳವಾರ ನಿಗದಿಯಾಗಿದ್ದ ಭಾರತ-ನೆದರ್‌ಲೆಂಡ್ಸ್ ನಡುವಿನ ಪಂದ್ಯ ಟಾಸ್ ಕೂಡಾ ಕಾಣದೆ ರದ್ದಾಯಿತು. ನಗರದಲ್ಲಿ ಕೆಲ ದಿನಗಳಿಂದಲೂ ಮಳೆಯಾಗುತ್ತಿದ್ದು, ಮಂಗಳವಾರವೂ ಮಳೆ ಬಿಡುವು ನೀಡಲಿಲ್ಲ. ಹೀಗಾಗಿ ಸಂಜೆ 4 ಗಂಟೆ ವೇಳೆಗೆ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಶನಿವಾರ ಗುವಾಟಿಯಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯವೂ ಮಳೆಗೆ ಆಹುತಿಯಾಗಿತ್ತು. ಭಾರತ ವಿಶ್ವಕಪ್‌ನಲ್ಲಿ ಅ.8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಸೆಮೀಸ್‌ಗೇರಿದ ಟೀಂ ಇಂಡಿಯಾ
ಏಷ್ಯನ್ ಗೇಮ್ಸ್‌ನ ಕ್ರಿಕೆಟ್‌ನಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಭಾರತ ತಂಡ, ಸೆಮಿಫೈನಲ್ ಪ್ರವೇಶಿಸಿದೆ. ಯಶಸ್ವಿ ಜೈಸ್ವಾಲ್ ಅಬ್ಬರಕ್ಕೆ ಸಾಕ್ಷಿಯಾದ ನೇಪಾಳ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 23 ರನ್ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಜೈಸ್ವಾಲ್ 49 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ 100 ರನ್ ಸಿಡಿಸಿದರು. ಇದರೊಂದಿಗೆ ಭಾರತ ಪರ ಅಂ.ರಾ. ಟಿ20ಯಲ್ಲಿ ಶತಕ ಸಿಡಿಸಿದ ಅತಿಕಿರಿಯ ಎನಿಸಿಕೊಂಡರು.
ವಿಶ್ವ ಸಮರಕ್ಕೆ ಭಾರತದ ವೇದಿಕೆ; ವರ್ಷದ ಆರಂಭದಲ್ಲೇ ನಡೆಯಬೇಕಿದ್ದ ಟೂರ್ನಿ!
ಉಳಿದಂತೆ ರಿಂಕು ಸಿಂಗ್ 37 (15 ಎಸೆತ), ಶಿವಂ ದುಬೆ 25, ಋತುರಾಜ್ 25 ರನ್ ಗಳಿಸಿದರು. ಬೃಹತ್ ಗುರಿ ಬೆನ್ನತ್ತಿದ ನೇಪಾಳ ಅನಿರೀಕ್ಷಿತ ಹೋರಾಟ ಪ್ರದರ್ಶಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ತಂಡ 9 ವಿಕೆಟ್‌ಗೆ 179 ರನ್ ಗಳಿಸಿತು. ಮತ್ತೊಂದು ಕ್ವಾರ್ಟರ್‌ನಲ್ಲಿ ಹಾಂಕಾಂಗ್ ವಿರುದ್ಧ ಪಾಕಿಸ್ತಾನ 68 ರನ್ ಜಯಗಳಿಸಿತು. ಬುಧವಾರ ಮತ್ತೆರಡು ಕ್ವಾರ್ಟರ್ ಫೈನಲ್ ನಡೆಯಲಿದ್ದು, ಭಾರತದ ಸೆಮೀಸ್ ಎದುರಾಳಿ ಯಾರೆಂದು ನಿರ್ಧಾರವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.