ಐಸಿಸಿ ವಿಶ್ವಕಪ್ ಟೂರ್ನಿ ನಡುವಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ದೆಹಲಿ ಹಾಗೂ ಮುಂಬೈ ಪಂದ್ಯಗಳಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಿದೆ. ಈ ಕುರಿತು ಐಸಿಸಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದೆ.
ಮುಂಬೈ(ನ.01) ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯದ ಬಳಿಕ ಬಾನಂಗಣಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಸಾಮಾನ್ಯ. ಇದು ಅಭಿಮಾನಿಗಳಿಗೆ ಹಬ್ಬದ ಅನುಭವ ನೀಡುತ್ತಿದೆ. ಐಸಿಸಿ ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಗೆಲುವಿನ ಬಳಿಕ ಪಟಾಕಿ ಸಿಡಿಸಲಾಗುತ್ತದೆ. ಇದರಂತೆ ಭಾರತದ ಎಲ್ಲಾ ಕ್ರೀಡಾಂಗಣದಲ್ಲಿ ಗೆಲುವು ದಾಖಲಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಗುತ್ತದೆ. ಆದರೆ ಈ ನಿಯಮದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಐಸಿಸಿ ಜೊತೆ ಚರ್ಚಿಸಿರುವ ಬಿಸಿಸಿಐ ಮಾಲಿನ್ಯದ ಕಾರಣ ದೆಹಲಿ ಹಾಗೂ ಮುಂಬೈ ಪಂದ್ಯಗಳಿಗೆ ಯಾವುದೇ ರೀತಿಯ ಪಟಾಕಿ, ಸಿಡಿ ಮದ್ದುಗಳ ಪ್ರದರ್ಶನ ನಿರ್ಬಂಧಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಕುರಿತು ಐಸಿಸಿ ಜೊತೆ ಚರ್ಚಿಸಿ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿ ಹಾಗೂ ವಾಂಖೆಡೆ ಕ್ರೀಡಾಂಗಣ ಮುಂಬೈನಲ್ಲಿ ಯಾವುದೇ ಸಿಡಿಮದ್ದು ಪ್ರದರ್ಶನಗಳು ಇರುವುದಿಲ್ಲ. ಈಗಾಗಲೇ ಈ ಎರಡು ನಗರಗಳಲ್ಲಿ ಮಾಲಿನ್ಯ ವಿಪರೀತವಾಗಿದ್ದು, ನಿಯಂತ್ರಣಕ್ಕೆ ಸರ್ಕಾರಗಳು ಹೆಣಗಾಡುತ್ತಿದೆ.
undefined
ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ, ಪಾಕಿಸ್ತಾನಕ್ಕಿದೆಯಾ ಸೆಮಿಫೈನಲ್ ಚಾನ್ಸ್?
ದೆಹಲಿ ಹಾಗೂ ಮುಂಬೈನಲ್ಲಿ ವಾಯು ಗುಣಮಟ್ಟ ಕುಸಿತ ಕಂಡಿದೆ. ಈಗಾಗಲೇ ಸುಪ್ರೀಂ ಕೋರ್ಟ್ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ದೆಹಲಿ ಸೇರಿದಂತೆ ನೆರೆಯ ರಾಜ್ಯಗಳಿಗೂ ನೋಟಿಸ್ ನೀಡಿದೆ. ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಇಂದಿನಿಂದ ಡೀಸೆಲ್ ಬಸ್ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ದೀಪಾವಳಿ ಹಬ್ಬಕ್ಕೂ ಪಟಾಕಿ ಸಿಡಿಸಲು ದೆಹಲಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಬಿಸಿಸಿಐ ಕ್ರೀಡಾಂಗಣದಲ್ಲಿ ಗೆಲುವಿನ ಬಳಿಕ ಸಿಡಿಸುವ ಪಟಾಕಿಗೆ ನಿರ್ಬಂಧ ಹಾಕಿದೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಇನ್ನೊಂದು ಗೆಲುವು ಭಾರತದ ಸೆಮಿಫೈನಲ್ ಸ್ಥಾನ ಖಚಿತಪಡಿಸಲಿದೆ. ನವೆಂಬರ್ 2 ರಂದು ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಯಾವುದೇ ಪಟಾಕಿ ಸಂಭ್ರಮ ಇಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ 6 ಪಂದ್ಯದಲ್ಲಿ 6 ಗೆಲುವು ದಾಖಲಿಸಿ 12 ಅಂಕ ಸಂಪಾಸಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತ ಸೌತ್ ಆಫ್ರಿಕ 6ರಲ್ಲಿ 5 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ.
"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್