ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ವಿಕೆಟ್ ಕಬಳಿಸಿ ದಾಖಲೆ ಬರೆದ 'ವೇಗಿ' ಶಾಹೀನ್ ಅಫ್ರಿದಿ..!

By Naveen Kodase  |  First Published Oct 31, 2023, 5:48 PM IST

ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಬಲಿಪಡೆಯುವುದರ ಮೂಲಕ ಶಾಹೀನ್ ಅಫ್ರಿದಿ, ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಶಾಹೀನ್ ಅಫ್ರಿದಿ ಕೇವಲ 51ನೇ ಪಂದ್ಯವನ್ನಾಡಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ 52 ಪಂದ್ಯಗಳನ್ನಾಡಿ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.


ಕೋಲ್ಕತಾ(ಅ.31): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಡುತ್ತಿವೆ. ಈ ಪಂದ್ಯಕ್ಕೆ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಇದೇ ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ, ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ವಿಕೆಟ್ ಕಬಳಿಸಿದ ವೇಗಿ ಎನ್ನುವ ಅಪರೂಪದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಬಲಿಪಡೆಯುವುದರ ಮೂಲಕ ಶಾಹೀನ್ ಅಫ್ರಿದಿ, ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಶಾಹೀನ್ ಅಫ್ರಿದಿ ಕೇವಲ 51ನೇ ಪಂದ್ಯವನ್ನಾಡಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ 52 ಪಂದ್ಯಗಳನ್ನಾಡಿ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

Tap to resize

Latest Videos

"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್

ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ಕಬಳಿಸಿದ ಟಾಪ್ 5 ವೇಗಿಗಳಿವರು

1. ಶಾಹೀನ್ ಅಫ್ರಿದಿ: 51 ಪಂದ್ಯ
2. ಮಿಚೆಲ್ ಸ್ಟಾರ್ಕ್‌: 54 ಪಂದ್ಯ
3. ಶೇನ್ ಬಾಂಡ್: 54 ಪಂದ್ಯ
4. ಮುಸ್ತಾಫಿಜುರ್ ರೆಹಮಾನ್: 54 ಪಂದ್ಯ
5. ಬ್ರೆಟ್‌ ಲೀ: 55 ಪಂದ್ಯ

ಇನ್ನು ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಹಿರಿಮೆ ಕೂಡಾ ಶಾಹೀನ್ ಅಫ್ರಿದಿ ಪಾಲಾಗಿದೆ. ಶಾಹೀನ್ ಅಫ್ರಿದಿಗೂ ಮುನ್ನ ನೇಪಾಳದ ಸಂದೀಪ್ ಲಾಮಿಚ್ಚಾನೆ ಹಾಗೂ ಆಫ್ಘಾನಿಸ್ತಾನದ ರಶೀದ್ ಖಾನ್ ಅತಿವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಸಂದೀಪ್ ಲಾಮಿಚ್ಚಾನೆ 42 ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 44 ಪಂದ್ಯಗಳನ್ನಾಡಿ 100 ವಿಕೆಟ್ ಕಬಳಿಸಿದ್ದಾರೆ. ಲಾಮಿಚ್ಚಾನೆ ಹಾಗೂ ರಶೀದ್ ಖಾನ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ಪಾತ್ರರಾಗಿದ್ದಾರೆ.

'ಇದೇ ತಂಡ ವಿಶ್ವಕಪ್ ಗೆಲ್ಲಲಿದೆ': 2023ರ ಒನ್‌ಡೇ ವಿಶ್ವಕಪ್ ಫೈನಲ್ ಫಲಿತಾಂಶ ಭವಿಷ್ಯ ನುಡಿದ ನೇಥನ್ ಲಯನ್..!

ಇನ್ನು ಬಾಂಗ್ಲಾ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಆದರೆ ಬಾಂಗ್ಲಾದೇಶ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಬಾಂಗ್ಲಾ ಕೇವಲ 23 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. 

ಇದಾದ ಬಳಿಕ ಲಿಟನ್ ದಾಸ್(45), ಮೊಹಮದುಲ್ಲಾ(56) ಹಾಗೂ ನಾಯಕ ಶಕೀಬ್ ಅಲ್ ಹಸನ್(43) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಗೌರವಾನ್ವಿತ ಮೊತ್ತ ಕಲೆಹಾಕಿದೆ. ಬಾಂಗ್ಲಾದೇಶ 45.1 ಓವರ್‌ಗಳಲ್ಲಿ 204 ರನ್ ಗಳಿಸಿ ಸರ್ವಪತನ ಕಂಡಿದೆ. 

ಪಾಕಿಸ್ತಾನ ತಂಡದ ಪರ ಶಾಹೀನ್ ಅಫ್ರಿದಿ ಹಾಗೂ ಮೊಹಮ್ಮದ್ ವಾಸೀಂ ತಲಾ 3 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಹ್ಯಾರಿಸ್ ರೌಫ್ 2 ವಿಕೆಟ್ ಪಡೆದರು. ಇನ್ನು ಇಫ್ತಿಕಾರ್ ಅಹಮದ್ ಹಾಗೂ ಉಸ್ಮಾನ್ ಮಿರ್ ತಲಾ ಒಂದೊಂದು ವಿಕೆಟ್ ಪಡೆದರು.

click me!