ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

By Suvarna News  |  First Published Apr 4, 2020, 10:00 AM IST

ಭಾರತ-ಆಸ್ಟ್ರೇಲಿಯಾ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲೇ ಬರೋಬ್ಬರಿ 90 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ ಹಳೆಯ ಎಲ್ಲಾ ದಾಖಲೆಗಳು ಧೂಳೀಪಟವಾಗಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ದುಬೈ(ಏ.04): ಕಳೆದ ತಿಂಗಳು ನಡೆದ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಭಾರತದಲ್ಲಿ 90 ಲಕ್ಷ ಮಂದಿ ವೀಕ್ಷಿಸಿದರು ಎಂದು ಐಸಿಸಿ ಗುರುವಾರ ಮಾಹಿತಿ ನೀಡಿದೆ. 

ಶಫಾಲಿ ಆಡಲಿಲ್ಲ, ಭಾರತ ಗೆಲ್ಲಲಿಲ್ಲ; ಆಸ್ಟ್ರೇಲಿಯಾಗೆ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ

Tap to resize

Latest Videos

undefined

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದಿತ್ತು. ಹೀಗಾಗಿ ಫೈನಲ್ ಪಂದ್ಯವು ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿತ್ತು.

ಮಹಿಳಾ ಟಿ20 ವಿಶ್ವಕಪ್‌ ತಂಡದಲ್ಲಿ ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ..!

ಇನ್ನು ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಆತಿಥ್ಯ ವಹಿಸಿತ್ತು. ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು  86,174 ಪ್ರೇಕ್ಷಕರು ಮೈದಾನಕ್ಕಾಗಮಿಸಿದ್ದರು.

click me!