ಧೋನಿ ವಿಶ್ವಕಪ್ ಸಿಕ್ಸರ್, ರವಿ ಶಾಸ್ತ್ರಿ ಕಮೆಂಟರಿ ಮೂಲಕ ಪೊಲೀಸರಿಂದ ಕೊರೋನಾ ಜಾಗೃತಿ!

By Chethan KumarFirst Published Apr 3, 2020, 3:25 PM IST
Highlights

ಟೀಂ ಇಂಡಿಯಾ ವಿಶ್ವಕಪ್ ಸಂಭ್ರಮಕ್ಕೆ 9 ವರ್ಷ ಸಂದಿದೆ. ಪ್ರತಿ ವರ್ಷ ಎಪ್ರಿಲ್ 2 ರಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು 2011ರ ವಿಶ್ವಕಪ್ ಗೆಲುವಿನ ಸಂಭ್ರಮ ಆಚರಿಸುತ್ತಾರೆ. ಈ ಬಾರಿ ಕೋರನಾ ವೈರಸ್ ಕಾರಣ ಭಾರತ ಲಾಕ್‌ಡೌನ್ ಆಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಪೊಲೀಸರು 2011ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಸಿಡಿಸಿದ ವಿನ್ನಿಂಗ್ ಸಿಕ್ಸರ್ ಹಾಗೂ ರವಿ ಶಾಸ್ತ್ರಿ ಕಮೆಂಟರಿ ಮೂಲಕ ಕೊರೋನಾ ವೈರಸ್ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಹೇಗೆ? ಇಲ್ಲಿದೆ ನೋಡಿ.

ಮುಂಬೈ(ಏ.03): ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲುವಿನ ವರ್ಷಾಚಣರಣೆ ಸಂಭ್ರಮ ಈ ಬಾರಿ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿತ್ತು. ಕಾರಣ ಕೊರೋನಾ ಲಾಕ್‌ಡೌನ್. ಟೀಂ ಇಂಡಿಯಾ ಕ್ರಿಕೆಟಿಗರು, ಅಭಿಮಾನಿಗಳು ವಿಶ್ವಕಪ್ ಗೆಲುವಿನ ನೆನಪನ್ನು ಮೆಲುಕುಹಾಕಿದ್ದಾರೆ. ಈ ವೇಳೆ ಮುಂಬೈ ಪೊಲೀಸರು ಕೂಡ ಐತಿಹಾಸಿಕ ಗೆಲುವನ್ನು ನನೆಪಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಧೋನಿ ಸಿಡಿಸಿದ ಸಿಕ್ಸರ್ ಹಾಗೂ ರವಿ ಶಾಸ್ತ್ರಿ ಕಮೆಂಟರಿಯನ್ನು ಬಳಸಿ ಇದೀಗ ಮುಂಬೈ ಪೊಲೀಸರು ಕೊರೋನಾ ವೈರಸ್ ಜಾಗೃತಿ ಮೂಡಿಸುತ್ತಿದ್ದಾರೆ.

ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ! 

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕ ಎಂ.ಎಸ್.ಧೋನಿ ಭರ್ಜರಿ ಸಿಕ್ಸರ್ ಸಿಡಿಸಿ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಈ ವೇಳೆ ರವಿ ಶಾಸ್ತ್ರಿ, ಧೋನಿ ಫಿನೀಶ್ ಇಟ್ ಆಫ್ ಇನ್ ಸ್ಟೈಲ್. ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್, ಆಫ್ಟರ್ 28 ಇಯರ್(ತಮ್ಮ ಎಂದಿನ ಶೈಲಿಯಲ್ಲಿ ಧೋನಿ ಪಂದ್ಯ ಮುಗಿಸಿದ್ರು, ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು) ಎಂದು ಕಮೆಂಟರಿ ಹೇಳಿದ್ದರು. ಇದೀಗ ಧೋನಿ ಇದೇ ಸಿಕ್ಸರ್ ಚಿತ್ರ ಹಾಗೂ ಶಾಸ್ತ್ರಿ ಕಮೆಂಟರಿ ಮೂಲಕ ಭಾರತ ಒಗ್ಗಟ್ಟಿನಿಂದ ಕೊರೋನಾ ವೈರಸ್ ಮುಗಿಸೋಣ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

 

India, let's finish it off in style! pic.twitter.com/IYlGSiefGo

— Mumbai Police (@MumbaiPolice)

2011ರಲ್ಲಿ ಟೀಂ ಇಂಡಿಯಾ ಗುರಿ ಬೆನ್ನಟ್ಟಿದ ಬಳಿಕ ನಾವೆಲ್ಲ ಮನೆಯಿಂದ ಹೊರಬಂದು ಸಂಭ್ರಮಿಸಿದ್ದೇವೆ. 2020ರಲ್ಲಿ ನಾವೆಲ್ಲ ಮನೆಯಲ್ಲಿ ಕೂತ ಭಾರತ ಈ ಗುರಿ ಮುಟ್ಟುವ ತನಕ ಕಾಯೋಣ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಪೊಲೀಸರು ಈ ಟ್ವೀಟ್ ಮೂಲಕ ಎಲ್ಲರು ಸುರಕ್ಷಿತವಾಗಿರಿ. ಯಾರೂ ಕೂಡ ಮನೆಯಿಂದ ಹೊರಬರಬೇಡಿ. ಕೊರೋನಾ ವೈರಸ್ ವಿರುದ್ಧ ಎಲ್ಲರೂ ಜೊತೆಯಾಗಿ ಹೋರಾಡೋಣ ಗೆಲುವು ಸಾಧಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.  ಭಾರತದಲ್ಲಿ ಅತೀ ಹೆಚ್ಚು ಕೊರೋನಾ ಸೋಂಕು ಹರಡಿರುವುದು ಮಹಾರಾಷ್ಟ್ರದಲ್ಲಿ. ಮಹಾರಾಷ್ಟ್ರದಲ್ಲಿ ಕರೋನಾ ಸೋಂಕಿತರ ಸಂಖ್ಯೆ 350 ಗಡಿ ಸಮೀಪಿಸಿದೆ.

click me!