ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ರೋಹಿತ್ ಪುತ್ರಿ ಸಮೈರಾ!

Published : Apr 03, 2020, 08:14 PM IST
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ರೋಹಿತ್ ಪುತ್ರಿ ಸಮೈರಾ!

ಸಾರಾಂಶ

ಕೊರೋನಾ ವೈರಸ್ ಲಾಕ್‍‌ಡೌನ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯ ಕೆಳೆಯಲು ಅವಕಾಶ ಸಿಕ್ಕಿದೆ.  ಪತ್ನಿ ಹಾಗೂ ತನ್ನ ಮುದ್ದಿನ ಮಗಳೊಂದಿಗೆ ರೋಹಿತ್ ಶರ್ಮಾ ಕಾಲ ಕಳೆಯುತ್ತಿದ್ದಾರೆ. ಇತ್ತ ವೇಗಿ ಜಸ್ಪ್ರೀತ್ ಬುಮ್ರಾ ರೋಹಿತ್ ಶರ್ಮಾ ಪುತ್ರಿ ವಿಡಿಯೋ ಪೋಸ್ಟ್ ಮಾಡಿದ್ದು, ಕ್ಷಣಾರ್ಧಲ್ಲೇ ಲಕ್ಷಕ್ಕೂ ಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಏನಿದೆ? ಇಲ್ಲಿದೆ.  

ಮುಂಬೈ(ಏ.03): ಕೊರೋನಾ ವೈರಸ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ತಮ್ಮ ಮನೆಗಳಲ್ಲಿ ಸೇರಿಕೊಂಡಿದ್ದಾರೆ. ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ವಿಶ್ರಾಂತಿಯಲ್ಲಿದ್ದಾರೆ. ಈ ವೇಳೆ ಜಸ್ಪ್ರೀತ್ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಗಮನಸೆಳೆದಿದೆ. ಜಸ್ಪ್ರೀತ್ ಬುಮ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಪುತ್ರಿ ಮುದ್ದಿನ ಆ್ಯಕ್ಷನ್ ಇದೀಗ ಚರ್ಚೆಯಾಗುತ್ತಿದೆ.

ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

ರೋಹಿತ್ ಶರ್ಮಾ ಜೊತೆ ಆಟವಾಡುತ್ತಿದ್ದ ಪುತ್ರಿ ಸಮೈರಾ ಬಳಿ, ರಿತಿಕಾ ಸಜ್ದೆ ಬುಂ ಬುಂ ಆ್ಯಕ್ಷನ್ ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಬುಮ್ರಾ ಬೌಲಿಂಗ್ ಶೈಲಿಯನ್ನು ಸಮೈರಾ ಮಾಡಿ ತೋರಿಸಿದ್ದಾಳೆ. ಈ ವಿಡಿಯೋವನ್ನು ಬುಮ್ರಾ ಶೇರ್ ಮಾಡಿದ್ದು, ನನಗಿಂತ ಚೆನ್ನಾಗಿದೆ. ನಾನು ಸಮೈರಳ ದೊಡ್ಡ ಅಭಿಮಾನಿ ಎಂದು ಬುಮ್ರಾ ಹೇಳಿದ್ದಾರೆ.

 

ಧೋನಿ ವಿಶ್ವಕಪ್ ಸಿಕ್ಸರ್, ರವಿ ಶಾಸ್ತ್ರಿ ಕಮೆಂಟರಿ ಮೂಲಕ ಪೊಲೀಸರಿಂದ ಕೊರೋನಾ ಜಾಗೃತಿ!

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಇತರರಿಗೆ ಅನುಕರಣೆ ಮಾಡುವುದು ಕಷ್ಟ. ಇಷ್ಟೇ ಅಲ್ಲ ಬುಮ್ರಾ ಬೌಲಿಂಗ್ ಆ್ಯಕ್ಷನ್ ಬ್ಯಾಟ್ಸ್‌ಮನ್‌ಗಳಿಗೆ ರೀಡ್ ಮಾಡುವುದು ಕೂಡ ಕಷ್ಟ ಹೀಗಿರುವಾಗಿ ರೋಹಿತ್ ಶರ್ಮಾ 15 ತಿಂಗಳ ಪುತ್ರಿ ಸಮೈರಾ ಬುಮ್ರಾ ಬೌಲಿಂಗ್ ಶೈಲಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ