T20 ವಿಶ್ವಕಪ್ ಭವಿಷ್ಯ ನಿರ್ಧರಿಸಲು ಐಸಿಸಿ ಸಭೆ; BCCIನಲ್ಲಿ ಗರಿಗೆದರಿದ ಚಟುವಟಿಕೆ!

Published : Jul 19, 2020, 09:20 PM IST
T20 ವಿಶ್ವಕಪ್ ಭವಿಷ್ಯ ನಿರ್ಧರಿಸಲು ಐಸಿಸಿ ಸಭೆ;  BCCIನಲ್ಲಿ ಗರಿಗೆದರಿದ ಚಟುವಟಿಕೆ!

ಸಾರಾಂಶ

ಕೊರೋನಾ ವೈರಸ್ ಕಾರಣ ಕ್ರಿಕೆಟ್ ಸರಣಿಗಳೆಲ್ಲಾ ರದ್ದಾಗಿದೆ. ವೇಳಾಪಟ್ಟಿ ತಲೆಕೆಳಗಾಗಿದೆ. ಐಪಿಎಲ್ ಆಯೋಜನೆ ಇನ್ನು ಸ್ಪಷ್ಟವಾಗಿಲ್ಲ. ಇದೀಗ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಸಭೆ ಸೇರುತ್ತಿದೆ. ಇತ್ತ ಐಸಿಸಿ ಸಭೆ ಮೇಲೆ ಬಿಸಿಸಿಐ ಚಿತ್ತ ನೆಟ್ಟಿದೆ. ಟಿ20 ವಿಶ್ವಕಪ್ ಟೂರ್ನಿ ನಿರ್ಧಾರದ ಮೇಲೆ ಐಪಿಎಲ್ ಟೂರ್ನಿ ಭವಿಷ್ಯ ನಿಂತಿದೆ.

ದುಬೈ(ಜು.19): ಕೊರೋನಾ ವೈರಸ್ ಕಾರಣ 2 ಪ್ರಮುಖ ಟೂರ್ನಿಗಳ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ವಿಶ್ವಕಪ್ ಟೂರ್ನಿ ಕುರಿತು ಐಸಿಸಿ ಸ್ಪಷ್ಟ ನಿರ್ಧಾರ ಹೊರ ಹಾಕದ ಕಾರಣ ಬಿಸಿಸಿಐ ಗರಂ ಆಗಿದೆ. ಬಿಸಿಸಿಐ ಒತ್ತಡದ ಬೆನ್ನಲ್ಲೇ ಐಸಿಸಿ ನಾಳೆ(ಜು.20)ಕ್ಕೆ ಸಭೆ ಸೇರುತ್ತಿದೆ. ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಅಧೀಕೃತ ಪ್ರಕಟಣೆ ಹೊರಡಿಸಲಿದೆ.

ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!

ಆಕ್ಟೋಬರ್ 18 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಿದೆ. ಆದರೆ ಕೊರೋನಾ ವೈರಸ್ ಕಾರಣ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಆಯೋಜನೆ ಕಷ್ಟ ಎಂದು ಆತಿಥ್ಯ ವಹಿಸಿದ ಆಸ್ಟ್ರೇಲಿಯಾ ಹೇಳಿತ್ತು. ಕೊರೋನಾ ವೈರಸ್ ಗಂಭೀರವಾಗುತ್ತಿರುವ ಕಾರಣ ಇದೀಗ ಐಸಿಸಿ ವಿಡಿಯೋ ಕಾನ್ಫೆರನ್ಸ್ ಮೂಲಕ ಸಬೆ ಸೇರುತ್ತಿದೆ. ನಾಳಿನ ಸಭೆಯಲ್ಲಿ ಟಿ20 ವಿಶ್ವಕಪ್ ಟೂರ್ನಿ ಭವಿಷ್ಯ ನಿರ್ಧಾರವಾಗಲಿದೆ.

ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?.

ಕೊರೋನಾ ಕಾರಣ ಟಿ20 ವಿಶ್ವಕಪ್ ಟೂರ್ನಿ ರದ್ದಾಗುವ ಸಾಧ್ಯತೆ ಹೆಚ್ಚು ಎಂದು ಬಿಸಿಸಿಐ ಹೇಳುತ್ತಿದೆ. ಟಿ20 ವಿಶ್ವಕಪ್ ಭವಿಷ್ಯ ರದ್ದಾದರೆ, ಐಪಿಎಲ್ ಟೂರ್ನಿ ಆಯೋಜನೆ ಖಚಿತವಾಗಲಿದೆ. ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ರೆಡಿಯಾಗಿದೆ. ದುಬೈನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 

ಬಿಸಿಸಿಐಗೆ ಟಿ20 ವಿಶ್ವಕಪ್ ಟೂರ್ನಿ ಅಡ್ಡಿಯಾಗಿತ್ತು. 2020ರ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವ ಸಾಧ್ಯತೆ ಕಡಿಮೆ ಇದೆ. ಕಾರಣ ಇತರ ಟೂರ್ನಿಗಳಿಗೆ ಅಡ್ಡಿಯಾಗಲಿದೆ. ಮೊದಲೇ ಸಂಕಷ್ಟದಲ್ಲಿರುವ ಪ್ರತಿ ದೇಶದ ಕ್ರಿಕೆಟ್ ಮಂಡಳಿಗಳು ಯಾವ ದ್ವಿಪಕ್ಷೀಯ ಟೂರ್ನಿ ರದ್ದು ಮಾಡಲು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ರದ್ದಾಗುವ ಸಾಧ್ಯತೆ ಹೆಚ್ಚು. ಹೀಗಾದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಚಟುವಟಿಕೆ ಗರಿಗೆದರಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?