ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಗೇಟ್ ಪಾಸ್ ನೀಡಿದ ಬಿಸಿಸಿಐ!

By Suvarna NewsFirst Published Jul 19, 2020, 3:27 PM IST
Highlights

ಕೊರೋನಾ ವೈರಸ್ ಹೊಡೆತ ನಡುವೆ ಬಿಸಿಸಿಐ ಐಪಿಎಲ್ 2020 ಟೂರ್ನಿ ಆಯೋಜಿಸಲು ಕರಸತ್ತು ನಡೆಸುತ್ತಿದೆ. ಈ ಮೂಲಕ ಸಾವಿರಾರು ಕೋಟಿ ರೂಪಾಯಿ ನಷ್ಟ ಸರಿದೂಗಿಸಲು ಚಿಂತಿಸುತ್ತಿದೆ. ಇದರ ನಡುವೆ ಬಿಸಿಸಿಐ ದಿಢೀರ್ ಆಗಿ ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಗೇಟ್ ಪಾಸ್ ನೀಡಿದೆ.

ಮುಂಬೈ(ಜು.19):  ಕೊರೋನಾ ವೈರಸ್ ಹೊಡೆತಕ್ಕೆ ನಲುಗಿದ ಬಿಸಿಸಿಐ ಇದೀಗ ನಷ್ಟದ ಮೊತ್ತ ಕಡಿಮೆ ಮಾಡಿಕೊಳ್ಳುವ ಕಸರತ್ತಿನಲ್ಲಿದೆ. ಐಪಿಎಲ್ ಟೂರ್ನಿ ಮೂಲಕ ಕೊಂಚ ಮಟ್ಟಿಗಿನ ನಷ್ಟ ಸರಿದೂಗಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಇದರ ನಡುವೆ ಹಲವು ಬೆಳೆವಣಿಗೆಗಳು ನಡೆಯುತ್ತಿದೆ. ಇದೀಗ ಬಿಸಸಿಐ ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಹುದ್ದೆಯಿಂದ ಕೆಳಗಿಳಿಯುವಂತೆ ಬಿಸಿಸಿಐ ಸೂಚಿಸಿದೆ.

ದುಬೈನಲ್ಲೇ ಐಪಿಎಲ್ ಫಿಕ್ಸ್: ಸಕಲ ಸಿದ್ಧತೆಗಳು ಆರಂಭ..!...

2017ರಲ್ಲಿ ಸಾಬಾ ಕರೀಮ್ ಅವರನ್ನು ಬಿಸಿಸಿಐ ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಬಾ ಕರೀಮ್ ರಣಜಿ ಟೂರ್ನಿ ಸೇರಿದಂತೆ ದೇಸಿ ಕ್ರಿಕೆಟ್ ಚಟುವಟಿಕೆಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದರೆ ಪ್ರತಿ ವರ್ಷ ಡಿಸೆಂಬರ್‌ನಿಂದ ಆರಂಭವಾಗಬೇಕಿದ್ದ ದೇಸಿ ಕ್ರಿಕೆಟ್ ಟೂರ್ನಿ ಕುರಿತು ಸಾಬಾ ಕರೀಮ್ ಇನ್ನೂ ಯಾವುದೇ ಪ್ಲಾನ್ ರೂಪಿಸಿಲ್ಲ. ಹೀಗಾಗಿ ಕರೀಮ್ ಕೆಲಸದ ಕುರಿತು ಬಿಸಿಸಿಐ ಅಸಮಧಾನ ವ್ಯಕ್ತಪಡಿಸಿದೆ. 

ಕೊರೋನಾ ವೈರಸ್ ಕಾರಣ ಕ್ರಿಕೆಟ್ ಪುನರ್ ಆರಂಭಿಸಲು ಬಿಸಿಸಿಐ ಪದಾಧಿಕಾರಿಗಳು, ಅಧಿಕಾರಿಗಳು ಪ್ಲಾನ್ ರೆಡಿ ಮಾಡಿ ಬಿಸಿಸಿಐಗೆ ನೀಡಿದ್ದಾರೆ. ಆದರೆ ದೇಸಿ ಕ್ರಿಕೆಟ್ ಕುರಿತು ಸಾಬಾ ಕರೀಮ್ ಯಾವುದೇ ಆಕ್ಷನ್ ಪ್ಲಾನ್ ರೆಡಿ ಮಾಡಿಲ್ಲ. ಹೀಗಾಗಿ ಅಸಮಧಾನಗೊಂಡಿರುವ ಬಿಸಿಸಿಐ ಸಾಬಾ ಕರೀಮ್‌ಗೆ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದೆ.

click me!