ICC Test Rankings: ನಂ.1 ಸ್ಥಾನಕ್ಕೆ ಜಿಗಿದ ಅಶ್ವಿನ್‌, ವಿರಾಟ್‌ ಕೊಹ್ಲಿ ಶೈನಿಂಗ್..!

By Naveen KodaseFirst Published Mar 16, 2023, 9:41 AM IST
Highlights

* ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ
* ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್
* ಅಹಮದಾಬಾದ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ 8 ಸ್ಥಾನ ಜಿಗಿತ

ದುಬೈ(ಮಾ.16): ಆಸ್ಪ್ರೇ​ಲಿಯಾ ವಿರುದ್ಧ 4ನೇ ಟೆಸ್ಟ್‌​ನಲ್ಲಿ ಅತ್ಯು​ತ್ತಮ ಪ್ರದ​ರ್ಶನ ತೋರಿದ್ದ ಭಾರ​ತದ ಸ್ಪಿನ್ನರ್‌ ಆರ್‌.​ಅ​ಶ್ವಿನ್‌ ಐಸಿಸಿ ಟೆಸ್ಟ್‌ ಬೌಲ​ರ್‌​ಗಳ ಪಟ್ಟಿ​ಯಲ್ಲಿ ನಂ.1 ಸ್ಥಾನ ಭದ್ರ​ಪ​ಡಿ​ಸಿಕೊಂಡಿ​ದ್ದಾ​ರೆ. ಬುಧವಾರ ಪ್ರಕಟಗೊಂಡ ಪರಿಷ್ಕೃತ ಪಟ್ಟಿಯಲ್ಲಿ 869 ರೇಟಿಂಗ್‌ ಅಂಕ ಪಡೆದಿರುವ ಅಶ್ವಿನ್‌, ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌(859)ಗಿಂತ 10 ಅಂಕ ಮುಂದಿದ್ದಾರೆ. ಕಳೆದ ವಾರ ಆ್ಯಂಡರ್‌ಸನ್‌ ಜೊತೆ ಅಶ್ವಿನ್‌ ಅಗ್ರಸ್ಥಾನ ಹಂಚಿಕೊಂಡಿದ್ದರು.

ಇನ್ನು ಅಹಮದಾಬಾದ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ 8 ಸ್ಥಾನ ಜಿಗಿತ ಕಂಡಿದ್ದು, 13ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಒಂದು ಸ್ಥಾನ ಮೇಲೇರಿ 10ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌​ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ ತಲಾ 1 ಸ್ಥಾನ ಕುಸಿದು ಕ್ರಮ​ವಾಗಿ 7 ಮತ್ತು 9ನೇ ಸ್ಥಾನ​ದ​ಲ್ಲಿದ್ದರೆ, ಆಲ್ರೌಂಡ​ರ್‌​ಗಳ ಪಟ್ಟಿ​ಯ ಅಗ್ರ 5ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಅಕ್ಷರ್‌ ಪಟೇಲ್‌ 4ನೇ ಸ್ಥಾನಕ್ಕೇರಿದ್ದು, ಜಡೇಜಾ ಹಾಗೂ ಅಶ್ವಿನ್‌ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇಂದೋರ್‌ ಪಿಚ್‌ ತೀರ್ಪು ಬಗ್ಗೆ ಬಿಸಿಸಿಐ ಮೇಲ್ಮನವಿ

ನವ​ದೆ​ಹ​ಲಿ: ಭಾರ​ತ-ಆಸ್ಪ್ರೇ​ಲಿಯಾ ನಡು​ವಿನ 3 ಟೆಸ್ಟ್‌ ಪಂದ್ಯಕ್ಕೆ ಆತಿ​ಥ್ಯ ವಹಿ​ಸಿದ್ದ ಇಂದೋ​ರ್‌ನ ಹೋಲ್ಕರ್‌ ಕ್ರೀಡಾಂಗ​ಣದ ಪಿಚ್‌ಗೆ ರೆಫ್ರಿ ನೀಡಿದ್ದ ಕಳಪೆ ರೇಟಿಂಗ್‌ ವಿರುದ್ಧ ಐಸಿ​ಸಿಗೆ ಬಿ​ಸಿ​ಸಿ​ಐ ಮೇಲ್ಮ​ನವಿ ಸಲ್ಲಿ​ಸಿದೆ. ಈ ಬಗ್ಗೆ ಮಧ್ಯ​ಪ್ರ​ದೇಶ ಕ್ರಿಕೆಟ್‌ ಸಂಸ್ಥೆ ಅಧಿ​ಕಾ​ರಿ​ಗಳು ಮಾಧ್ಯ​ಮ​ಗ​ಳಿಗೆ ಮಾಹಿತಿ ನೀಡಿ​ದ್ದಾರೆ ಎನ್ನ​ಲಾ​ಗಿದ್ದು, ತೀರ್ಪು ಮರು​ಪ​ರಿ​ಶೀ​ಲಿ​ಸು​ವಂತೆ ಮನವಿ ಸಲ್ಲಿ​ಸಿದೆ ಎಂದು ತಿಳಿ​ದು​ಬಂದಿದೆ. 

ಪಂದ್ಯ ಮುಗಿದ ಬಳಿಕ ಡಗೌಟ್ ಸ್ವಚ್ಚಗೊಳಿಸಿದ ಎಲೈಸಿ ಪೆರ್ರಿ..! ನೆಟ್ಟಿಗರ ಮನಗೆದ್ದ ಆರ್‌ಸಿಬಿ ಆಟಗಾರ್ತಿ

ಈ ಬಗ್ಗೆ ಐಸಿ​ಸಿಯ ಇಬ್ಬರು ಸದ​ಸ್ಯರ ಸಮಿತಿ ಪರಿ​ಶೀ​ಲನೆ ನಡೆ​ಸ​ಲಿದ್ದು, 14 ದಿನ​ಗ​ಳಲ್ಲಿ ವರದಿ ಸಲ್ಲಿ​ಸ​ಲಿದೆ. 3ನೇ ಪಂದ್ಯ 3ನೇ ದಿನದ ಮೊದಲ ಅವ​ಧಿ​ಯಲ್ಲೇ ಕೊನೆ​ಗೊಂಡಿತ್ತು. ಮೊದ​ಲೆ​ರಡು ದಿನ 30 ವಿಕೆಟ್‌ ಪತ​ನ​ಗೊಂಡಿತ್ತು. ಹೀಗಾಗಿ ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ಪಿಚ್‌ ‘ಕಳಪೆ’ ಎಂದು ರೇಟಿಂಗ್‌ ನೀಡಿದ್ದರು.

ಚೇತರಿಕೆ ಹಾದಿಯಲ್ಲಿ ಕ್ರಿಕೆಟಿಗ ರಿಷಭ್‌ ಪಂತ್‌

ಮುಂಬೈ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ ಚೇತರಿಕೆ ಹಾದಿಯಲ್ಲಿದ್ದು, ಎದ್ದು ಓಡಾಡಲು ಆರಂಭಿಸಿದ್ದಾರೆ. ಹೈಡ್ರೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಅವರು ಈಜುಕೊಳದೊಳಗೆ ನಡೆದಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ವೀಟರ್‌, ಇನ್‌ಸ್ಟಾಂಗ್ರಾಂ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ. ಶೀಘ್ರ ಸಂಪೂರ್ಣ ಚೇತರಿಕೆ ಕಾಣುವಂತೆ ಬಿಸಿಸಿಐ, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಪಂತ್‌ಗೆ ಶುಭ ಕೋರಿದ್ದಾರೆ.

50 ಓವರ್‌ ಕ್ರಿಕೆಟ್‌: 10 ವಿಕೆಟ್‌ ಕಿತ್ತ ಬೆಂಗ್ಳೂರಿನ ಶಹಾನ್‌ ಶದಾಬ್‌!

ಬೆಂಗಳೂರು: ಕೆಎಸ್‌ಸಿಎ ಬಿಟಿಆರ್‌ ಶೀಲ್ಡ್‌ ಅಂಡರ್‌-14 ಟೂರ್ನಿಯಲ್ಲಿ ಬೆಂಗಳೂರಿನ ಶ್ರೀರಾಮ್‌ ಗ್ಲೋಬ್ಲಲ್‌ ಶಾಲೆಯ ಶಹಾನ್‌ ಶದಾಬ್‌ 10 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದಾರೆ. ಫ್ರೀಡಂ ಇಂಟರ್‌ನ್ಯಾಷನಲ್‌ ಶಾಲೆ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀರಾಮ್‌ ಶಾಲೆ ಶಹಾನ್‌ರ ಶತಕ (88 ಎಸೆತದಲ್ಲಿ 115 ರನ್‌)ದ ನೆರವಿನಿಂದ 50 ಓವರಲ್ಲಿ 3 ವಿಕೆಟ್‌ಗೆ 399 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಫ್ರೀಡಂ ಶಾಲೆ 7 ಓವರಲ್ಲಿ 14 ರನ್‌ಗೆ ಆಲೌಟ್‌ ಆಯಿತು. ಶಹಾನ್‌ 8 ರನ್‌ಗೆ 10 ವಿಕೆಟ್‌ ಕಿತ್ತರು. ಶ್ರೀರಾಮ್‌ ಶಾಲೆ 385 ರನ್‌ಗಳ ಜಯ ಸಾಧಿಸಿತು.

click me!