WPL 2023 ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿಗೆ ಮೊದಲ ಗೆಲುವು, ಅಂಕಪಟ್ಟಿಯಲ್ಲಿ ಜಿಗಿತ!

Published : Mar 15, 2023, 11:05 PM IST
WPL 2023 ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿಗೆ ಮೊದಲ ಗೆಲುವು, ಅಂಕಪಟ್ಟಿಯಲ್ಲಿ ಜಿಗಿತ!

ಸಾರಾಂಶ

ಸೋಲನ್ನೇ ಹಾಸು ಹೊದ್ದು ಮಲಗಿದ್ದ ಆರ್‌ಸಿಬಿ ವುಮೆನ್ಸ್ ಗೆಲುವಿನ ಅಧ್ಯಾಯ ಆರಂಭಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಜಿಗಿತ ಕಂಡಿದೆ.

ಮುಂಬೈ(ಮಾ.15): ಒಂದಲ್ಲ, ಎರಡಲ್ಲ ಬರೋಬ್ಬರಿ 5 ಪಂದ್ಯ ಸೋತು ಕಂಗೆಟ್ಟು ಕೂತಿದ್ದ ಆರ್‌ಸಿಬಿ ವುಮೆನ್ಸ್ ಕೊನೆಗೂ ಗೆಲುವು ಸಾಧಿಸಿದೆ. 5 ಪಂದ್ಯದ ಬಳಿಕ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಸಿಹಿ ಕಂಡಿದೆ. ಯುಪಿ ವಾರಿಯರ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಆರ್‌ಸಿಬಿ ವುಮೆನ್ಸ್ 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಆರ್‌ಸಿಬಿ ಇದೀಗ ಒಂದು ಸ್ಥಾನ ಮೇಲಕ್ಕೆ ಜಿಗಿದು 4ನೇ ಸ್ಥಾನ ಆಕ್ರಮಿಸಿದೆ. 

ಯುಪಿ ವಾರಿಯರ್ಸ್ ವಿರುದ್ಧ 136 ರನ್ ಟಾರ್ಗೆಟ್ ಪಡೆದ ಆರ್‌ಸಿಬಿ ತಂಡದ ಆರಂಭ ಆತಂಕ ತಂದಿತ್ತು. ಸೋಫಿ ಡಿವೈನ್ 14 ರನ್ ಸಿಡಿಸಿ ಔಟಾದರೆ, ಇತ್ತ ನಾಯಕಿ ಸ್ಮೃತಿ ಮಂಧನಾ ಡಕೌಟ್ ಆದರು. 14 ರನ್‌ಗೆ 2 ವಿಕೆಟ್ ಕಳೆದುಕೊಂಡ ಆರ್‌ಸಿಬಿ ವುಮೆನ್ಸ್ ತಂಡಕ್ಕೆ ಎಲ್ಲಿಸ್ ಪೆರಿ ಹಾಗೂ ಹೀಥರ್ ನೈಟ್ ಆಸರೆಯಾದರು. ಆದರೆ ಪೆರಿ 10 ರನ್ ಸಿಡಿಸಿ ಔಟಾದರು. ನೈಟ್ 25 ರನ್ ಕಾಣಿಕ ನೀಡಿದರು.

ಪಂದ್ಯ ಮುಗಿದ ಬಳಿಕ ಡಗೌಟ್ ಸ್ವಚ್ಚಗೊಳಿಸಿದ ಎಲೈಸಿ ಪೆರ್ರಿ..! ನೆಟ್ಟಿಗರ ಮನಗೆದ್ದ ಆರ್‌ಸಿಬಿ ಆಟಗಾರ್ತಿ

ಕಾನಿಕಾ ಅಹುಜಾ ಹಾಗೂ ರಿಚಾ ಘೋಷ್ ಅದ್ಬುತ ಆಟದಿಂದ ಆರ್‌ಸಿಬಿ ತಂಡ ಮೊದಲ ಗೆಲುವು ದಾಲಿಸಿದೆ. ಕಾನಿಕ 30 ಎಸೆತದಲ್ಲಿ 46 ರನ್ ಸಿಡಿಸಿದರು. ಇತ್ತ ರಿಚಾ ಘೋಷ್ ಅಜೇಯ 31 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. 

ಯುಪಿ ವಾರಿಯರ್ಸ್ ಇನ್ನಿಂಗ್ಸ್
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಪ್ಲಾನ್ ಪ್ರಕಾರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿತು. ಯುಪಿ ವಾರಿಯರ್ಸ್ ತಂಡಕ್ಕೆ ಆರಂಭದಿಂದಲೇ ಶಾಕ್ ನೀಡಿತು. ಯುಪಿ ವಾರಿಯರ್ಸ್ ರನ್ ಖಾತೆ ತೆರೆದ ಬೆನ್ನಲ್ಲೇ ಮೊದಲ ವಿಕೆಟ್ ಪತನಗೊಂಡಿತು. ದೇವಿಕಾ ವೈದ್ಯ ರನ್‌ಗಳಿಸದೇ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನಾಯಕಿ ಅಲಿಸಾ ಹೀಲೆ 1 ರನ್ ಸಿಡಿಸಿ ಔಟಾದರು.

WPL 2023 5 ಪಂದ್ಯ ಸೋತ ಆರ್‌ಸಿಬಿ ವುಮೆನ್ಸ್‌ಗಿದೆ ಪ್ಲೇ ಆಫ್ ಚಾನ್ಸ್, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ತಹಿಲಾ ಮೆಗ್ರಾಥ್ 2 ರನ್ ಸಿಡಿಸಿ ಔಟಾದರು. ಆದರೆ ಕಿರನ್ ನವ್ಗೀರಿ ಹಾಗೂ ಗ್ರೇಸ್ ಹ್ಯಾರಿಸ್ ಜೊತೆಯಾಟ ಯುಪಿ ವಾರಿಯರ್ಸ್ ತಂಡಕ್ಕೆ ನೆರವಾಯಿತು. ಇವರಿಬ್ಬರ ಜೊತೆಯಾಟದಿಂದ ಯುಪಿ ವಾರಿಯರ್ಸ್ ಚೇತರಿಕೆ ಕಂಡಿತು. ಇದೇ ವೇಳೆ 22 ರನ್ ಸಿಡಿಸಿದ ಕಿರನ್ ನವ್ಗಿರಿ ವಿಕೆಟ್ ಪತನಗೊಂಡಿತು. ಇತ್ತ ಸಿಮ್ರಾನ್ ಶೇಖ್ ಕೇವಲ 2 ರನ್ ಸಿಡಿಸಿ ಔಟಾದರು.

ಒಂದು ಹಂತದಲ್ಲಿ ಆರ್‌ಸಿಬಿ ದಾಳಿಗೆ ಯುಪಿ ವಾರಿಯರ್ಸ್ ತತ್ತರಿಸಿತ್ತು. ಇಷ್ಟೇ ಅಲ್ಲ ಅಲ್ಪಮೊತ್ತಕ್ಕೆ ಅಲೌಟ್ ಆಗುವ ಭೀತಿ ಎದುರಿಸಿತ್ತು. 31 ರನ್‌ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಗ್ರೇಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಹೋರಾಟ ನೀಡಿದರು. ದೀಪ್ತಿ 19 ಎಸೆತದಲ್ಲಿ 22 ರನ್ ಸಿಡಿಸಿದರು. 32 ಎಸೆತದಲ್ಲಿ 46 ರನ್ ಸಿಡಿಸಿ ಗ್ರೇಸ್ ಹ್ಯಾರಿಸ್ ಔಟಾದರು. 

ಶ್ವೇತಾ ಶೆರಾವತ್ 6 ರನ್ ಸಿಡಿಸಿ ಔಟಾದರು. ಅಂಜಲಿ ಸರ್ವಾನಿ 8 ರನ್ ಸಿಡಿಸಿದರೆ, ಎಕ್ಲೆಲ್‌ಸ್ಟೋನ್ 12ರನ್ ಕಾಣಿಕೆ ನೀಡಿದರು. ಈ ಮೂಲಕ ಯುಪಿ ವಾರಿಯರ್ಸ್ 19.3 ಓವರ್‌ಗಳಲ್ಲಿ 135 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಕಠಿಣ ಹೋರಾಟ ನೀಡಿದ ಯುಪಿ ವಾರಿಯರ್ಸ್ ಸ್ಪರ್ಧಾತ್ಮಕ ಮೊತ್ತ ಸಿಡಿಸುವಲ್ಲಿ ಯಶಸ್ವಿಯಾಯಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ರ‍್ಯಾಂಕಿಂಗ್‌: ಟಿ20, ಏಕದಿನ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಿಯಾಗಿ ಹೊಸ ವರ್ಷಕ್ಕೆ ಕಾಲಿಟ್ಟ ಟೀಂ ಇಂಡಿಯಾ!
ಕೊಹ್ಲಿ ಹೊಸ ವರ್ಷದ ಪೋಸ್ಟ್‌ಗೆ 80 ಲಕ್ಷ ಲೈಕ್ಸ್; ವಿರುಷ್ಕಾ ಜೋಡಿ ನೋಡಿ ದೃಷ್ಟಿ ಆಗೋದು ಗ್ಯಾರಂಟಿ ಎಂದ ಫ್ಯಾನ್ಸ್