ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಅಭ್ಯಾಸ ಪಂದ್ಯ!

By Web DeskFirst Published Oct 16, 2019, 12:19 PM IST
Highlights

ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಇತ್ತ ಆಸಿಸಿ ಟೂರ್ನಿ ಆಯೋಜನೆಗೆ ರೆಡಿಯಾಗಿದೆ. ಇದೀಗ ಟೂರ್ನಿಯ ಆರಂಭಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಆಡಿಸಲು ಐಸಿಸಿ ನಿರ್ಧರಿಸಿದೆ.

ದುಬೈ(ಅ.16):  ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. 2020ರ ಅಕ್ಟೋಬರ್ 18 ರಿಂದ ಚುಟುಕ ಸರಣಿ ಆರಂಭಗೊಳ್ಳಲಿದೆ. ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡಕ್ಕೆ ಅಭ್ಯಾಸ ಪಂದ್ಯ ಆಯೋಜಿಸಲು ಐಸಿಸಿ ಮುಂದಾಗಿದೆ. ಐಸಿಸಿ ನಿರ್ಧಾರ ಇಂಡೋ-ಪಾಕ್ ಪಂದ್ಯಕ್ಕಾಗಿ ಕಾತರಗೊಂಡಿರುವ ಅಭಿಮಾನಿಗಳಿಗೆ ಸಂತಸ ತಂದಿದೆ.

ಇದನ್ನೂ ಓದಿ: ಇನ್ಮುಂದೆ ಪ್ರತಿ ವರ್ಷ ICC ವಿಶ್ವಕಪ್; BCCIನಿಂದ ವಿರೋಧ!

ಇಂಡೋ-ಪಾಕಿಸ್ತಾನ ಅಭ್ಯಾಸ ಪಂದ್ಯಕ್ಕಾಗಿ ಐಸಿಸಿ, ಈಗಾಗಲೇ ಬಿಸಿಸಿಐ ಜೊತೆ ಮಾತುಕತೆ ನಡೆಸಿದೆ. ಆದರೆ ಬಿಸಿಸಿಐ ಚುನಾವಣೆ ಹಿನ್ನಲೆಯಲ್ಲಿ ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಇದೀಗ ಸೌರವ್ ಗಂಗೂಲಿ ಅ.23 ರಂದು ನೂತನ ಅಧ್ಯಕ್ಷರಾಗಿ ಬಿಸಿಸಿಐ ಗದ್ದುಗೆ ಏರಲಿದ್ದಾರೆ. ಹೀಗಾಗಿ ಗಂಗೂಲಿ ಈ ಕುರತು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: 2020ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಮುಂದಿರುವ ಸವಾಲುಗಳೇನು..?

2020ರ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಅತಿಥ್ಯ ವಹಿಸುತ್ತಿದೆ. ಈಗಾಗಲೇ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ಇದೀಗ ಧೀಡಿರ್ ಐಸಿಸಿ ಇಂಡೋ-ಪಾಕ್ ಅಭ್ಯಾಸ ಪಂದ್ಯಕ್ಕೆ ಯೋಜನೆ ರೂಪಿಸುತ್ತಿದೆ. ಇದರ ಹಿಂದೆ ಐಸಿಸಿ ಆರ್ಥಿಕ ಲಾಭದ ಉದ್ದೇಶ ಮಾತ್ರ ಇದೆ ಅನ್ನೋ ಮಾತುಗಳು ಕೇಳಿ ಬಂದಿದೆ.

ಟಿ20 ವಿಶ್ವಕಪ್ ವೇಳಾಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತಿಲ್ಲ. ಇದರಿಂದ ಟಿ20 ವಿಶ್ವಕಪ್ ಜನಪ್ರಿಯತೆ ಹಾಗೂ ಐಸಿಸಿ ಆದಾಯ ಕೂಡ ಕುಗ್ಗಲಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಅಭ್ಯಾಸ ಪಂದ್ಯ ಆಡಿಸಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದೆ ಅನ್ನೋ ಮಾತುಗಳು ಇವೆ.

click me!