BJP ಸೇರ್ತಾರ ಗಂಗೂಲಿ? ಅಮಿತ್ ಶಾ ಭೇಟಿಯಾದ ನೂತನ BCCI ಅಧ್ಯಕ್ಷ!

By Web DeskFirst Published Oct 16, 2019, 11:43 AM IST
Highlights

ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ದಿಢೀರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ಗಂಗೂಲಿ ಹಾಗೂ ಶಾ ಭೇಟಿ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಗಂಗೂಲಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.

ನವದೆಹಲಿ(ಅ.16): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ಅ.23ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗಂಗೂಲಿ ಜೊತೆ ಬಿಸಿಸಿಐ ಕಾರ್ಯದರ್ಶಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಗಂಗೂಲಿ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ.

ಇದನ್ನೂ ಓದಿ: Bigg boss ಗಂಗೂಲಿಗೆ CM ಮಮತಾ ಬ್ಯಾನರ್ಜಿ ಅಭಿ​ನಂದನೆ!

ಗಂಗೂಲಿ ಹಾಗೂ ಅಮಿತ್ ಶಾ ಭೇಟಿ ಬೆನ್ನಲ್ಲೇ ರಾಜಕೀಯ ಉದ್ದೇಶ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಗಂಗೂಲಿ ಬಿಜೆಪಿ ಸೇರಿಕೊಳ್ಳಲಿದ್ದಾರೆ, ಇದೇ ಕಾರಣಕ್ಕೆ ಅಮಿತ್ ಶಾ ಭೇಟಿಯಾಗಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಆದರೆ ಸೌರವ್ ಗಂಗೂಲಿ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿ​ರುವ ಸವಾ​ಲು​ಗಳೇ​ನು?

ಅಮಿತ್ ಶಾ ಭೇಟಿಯಲ್ಲಿ ಕ್ರಿಕೆಟ್ ಮಾತುಕತೆ ಮಾಡಿದ್ದೇನೆ. ಬಿಜೆಪಿ ಸೇರುವ ಯಾವುದೇ ಯೋಚನೆ ನನ್ನಲ್ಲಿಲ್ಲ. ಇಷ್ಟೇ ಅಲ್ಲ ಈ ಭೇಟಿ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ನಡುವಿನ ಉತ್ತಮ ಭಾಂದವ್ಯಕ್ಕಾಗಿ. ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾದಾಗ ಇದೇ ಪ್ರಶ್ನೆ ಉದ್ಭವಿಸುತ್ತೆ ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಗಂಗೂಲಿಗೆ BCCI ಅಧ್ಯಕ್ಷ ಪಟ್ಟ ಖಚಿತ; ಮೊದಲ ಪ್ರತಿಕ್ರಿಯೆ ನೀಡಿದ ದಾದಾ!

ಬಿಸಿಸಿಐ ಅಧ್ಯಕ್ಷನಾಗಿ ಗಂಗೂಲಿ ಅವಧಿ ಕೇವಲ 9 ತಿಂಗಳು ಮಾತ್ರ. ಬಳಿಕ ಲೋಧ ಸಮಿತಿ ಶಿಫಾರಸಿನ ಪ್ರಕಾರ ಗಂಗೂಲಿ ಯಾವುದೇ ಆಡಳಿತದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಇನ್ನು 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 42ರಲ್ಲಿ 18 ಸ್ಥಾನ ಗೆದ್ದಿರುವ ಬಿಜೆಪಿ, ಮುಂದಿನ ಬಾರಿ ಬಂಗಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಸಜ್ಜಾಗಿದೆ. ಇದಕ್ಕಾಗಿ ಪ.ಬಂಗಾಳಕ್ಕೆ ಗಂಗೂಲಿಯನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಚಿಂತನೆ ನಡೆಸಿದೆ. ಹೀಗಾಗಿ ಗಂಗೂಲಿ ಹಾಗೂ ಅಮಿತ್ ಶಾ ಭೇಟಿ ರಾಜಕೀಯ ಬಣ್ಣ ಪಡೆದುಕೊಂಡಿತ್ತು.

click me!