ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

Published : Oct 16, 2019, 09:45 AM IST
ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಂಧನಾ

ಸಾರಾಂಶ

ಐಸಿಸಿ ಮಹಿಳಾ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಿದೆ. ಏಕದಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದ ಸ್ಮೃತಿ ಮಂಧನಾಗೆ ಕೊಂಚ ನಿರಾಸೆಯಾಗಿದೆ. ರ‍್ಯಾಂಕಿಂಗ್‌ ಪಟ್ಟಿ ಇಲ್ಲಿದೆ.

ದುಬೈ(ಅ.16): ಭಾರತ ಮಹಿಳಾ ಕ್ರಿಕೆಟ್‌ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ನೂತ​ನ​ವಾಗಿ ಬಿಡು​ಗಡೆಯಾಗಿ​ರುವ ಐಸಿಸಿ ಏಕ​ದಿನ ರಾರ‍ಯಂಕಿಂಗ್‌ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ ಕಳೆ​ದು​ಕೊಂಡಿ​ದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರು​ದ್ಧದ ಸರ​ಣಿ​ಯಲ್ಲಿ ಆಡಿರ​ಲಿಲ್ಲ. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

ಸ್ಮೃತಿ​ಯನ್ನು ಹಿಂದಿ​ಕ್ಕಿ​ರುವ ನ್ಯೂಜಿ​ಲೆಂಡ್‌ನ ಏಮಿ ಸ್ಯಾಥರ್‌ವೈಟ್‌ ಅಗ್ರ​ಸ್ಥಾ​ನ​ಕ್ಕೇ​ರಿ​ದ್ದಾರೆ. ಸ್ಮೃತಿ 2ನೇ ಸ್ಥಾನದಲ್ಲಿದ್ದರೆ, ನಾಯಕಿ ಮಿಥಾಲಿ ರಾಜ್‌ 7ನೇ ಸ್ಥಾನದಲ್ಲಿ ಮುಂದು​ವ​ರಿದಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಜುಲನ್ ಗೋಸ್ವಾಮಿ 6ನೇ ಸ್ಥಾನದಲ್ಲಿದ್ದಾರೆ. ಎಕದಿನ ಆಲ್ರೌಂಡರ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ 3ನೇ ಸ್ಥಾನ ಅಲಂಕರಿಸಿದ್ದಾರೆ.

ಟಿ20 ರ‍್ಯಾಂಕಿಂಗ್‌ನಲ್ಲಿ ಸ್ಮೃತಿ ಮಂಧನಾ 6ನೇ ಸ್ಥಾನದಲ್ಲಿದ್ದಾರೆ. ಇನ್ನು ಹರ್ಮನ್‌ಪ್ರೀತ್ ಕೌರ್ ಹಾಗೂ ಜೇಮಿ ರೋಡ್ರಿಗ್ರಸ್ 8 ಮತ್ತು 9ನೇ ಸ್ಥಾನ ಅಲಂಕರಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?