ಹಠ ಕೈಬಿಟ್ಟ ಪಿಸಿಬಿ: ಹೈಬ್ರಿಡ್ ಮಾದರಿ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಒಪ್ಪಿಗೆ?

By Kannadaprabha News  |  First Published Nov 8, 2024, 7:59 AM IST

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಿಸಿಬಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.


ಕರಾಚಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆತಿಥ್ಯ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಂದಾಣಿಕೆ ಮಾಡಿ ಕೊಂಡಿದ್ದು, ಹೈಬ್ರಿಡ್ ಮಾದರಿ ಯಲ್ಲಿ ಟೂರ್ನಿ ನಡೆಸಲು ಒಪ್ಪಿಗೆ ನೀಡಿದೆ ಎಂದು ವರದಿಯಾಗಿವೆ. ಹೀಗಾದರೆ ಭಾರತದ ಪಂದ್ಯಗ ಳಿಗೆ ಯುಎಇ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆತಿಥ್ಯ ಹಕ್ಕು ಹೊಂದಿರುವ ಪಾಕ್, ಟೂರ್ನಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ಆಯೋಜಿಸಲಿದ್ದೇವೆ ಎಂದು ಪಟ್ಟು ಹಿಡಿದಿತ್ತು. ಆದರೆ ಪಾಕ್‌ಗೆ ತೆರಳಲು ಭಾರತ ಕಾರಣ, ಟೂರ್ನಿಯ ಕೆಲ ಪಂದ್ಯಗಳನ್ನು ಬೇರೆ ದೇಶದಲ್ಲಿ ನಡೆಸಲು ಪಿಸಿಬಿ ಸಮ್ಮತಿಸಿದೆ ಎಂದು ಹೇಳಲಾಗುತ್ತಿದೆ. ಟೂರ್ನಿ 2025ರ ಫೆ.19ರಿಂದ ಮಾ.9ರ ನಿಗದಿಯಾಗಿದೆ.

Tap to resize

Latest Videos

undefined

ಸ್ಮೃತಿ, ಪೆರ್ರಿ, ಶ್ರೇಯಾಂಕ ಸೇರಿ 14 ಮಂದಿಯನ್ನು ಹಾಲಿ ಚಾಂಪಿಯನ್ ಆರ್‌ಸಿಬಿಗೆ ರಿಟೈನ್‌

2023ರ ಏಷ್ಯಾಕಪ್ ಆತಿಥ್ಯ ಕೂಡಾ ಪಾಕ್ ಬಳಿ ಇತ್ತು. ಆದರೆ ಭಾರತ ಪಾಕ್‌ಗೆ ತೆರಳದ ಕಾರಣ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಪಾಕ್ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು.

ತನ್ನಿಚ್ಛೆಯಂತೆ ಫೀಲ್ಡ್ ಸೆಟ್‌ ಮಾಡದ ನಾಯಕ: ಸಿಟ್ಟಾಗಿ ಮೈದಾನ ತೊರೆದ ಅಲ್ಜಾರಿ!

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಪರೂಪದ ಪ್ರಸಂಗವೊಂದು ನಡೆಯಿತು. ಇಂಗ್ಲೆಂಡ್‌ ಇನ್ನಿಂಗ್ಸ್‌ನ 4ನೇ ಓವರಲ್ಲಿ ವೇಗಿ ಅಲ್ಜಾರಿ ಜೋಸೆಫ್‌ ತನ್ನಿಚ್ಛೆಯಂತೆ ಕ್ಷೇತ್ರರಕ್ಷಕರನ್ನು ನಿಲ್ಲಿಸಲಿಲ್ಲ ಎಂದು ಸಿಟ್ಟಾಗಿ, ನಾಯಕ ಶಾಯ್‌ ಹೋಪ್‌ ಮೇಲೆ ಕೂಗಾಡಿದರು. ಅದೇ ಓವರಲ್ಲಿ ಜೊರ್ಡನ್‌ ಕಾಕ್ಸ್‌ರನ್ನು ಔಟ್‌ ಮಾಡಿದ್ದಲ್ಲದೇ ಮೇಡನ್‌ ಓವರ್‌ ಸಹ ಎಸೆದ ಅಲ್ಜಾರಿ, ಕೋಪ ಮಾಡಿಕೊಂಡು ಡಗೌಟ್‌ಗೆ ಹೋಗಿ ಕೂತರು. 

ಹೀಗಾಗಿ ವಿಂಡೀಸ್‌ ಕೇವಲ 10 ಆಟಗಾರರೊಂದಿಗೆ 1 ಓವರ್‌ ಫೀಲ್ಡ್‌ ಮಾಡಿತು. ಈ ನಡುವೆ ಜೋಸೆಫ್‌ರನ್ನು ಸಮಾಧಾನಪಡಿಸುವ ಕೋಚ್‌ ಡ್ಯಾರೆನ್‌ ಸ್ಯಾಮಿಯ ಪ್ರಯತ್ನವೂ ಫಲ ನೀಡಲಿಲ್ಲ. ಡಗೌಟ್‌ನಲ್ಲಿ ತಮ್ಮ ಸಹ ಆಟಗಾರ ಹೇಡನ್‌ ವಾಲ್ಶ್‌ರೊಂದಿಗೆ ಬೇಸರ ತೋಡಿಕೊಂಡ ಅಲ್ಜಾರಿ, 1 ಓವರ್‌ ಬಳಿಕ ಮೈದಾನಕ್ಕೆ ವಾಪಸಾದರು. ಈ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ರಣಜಿ ಟ್ರೋಫಿ: ಬಂಗಾಳ ವಿರುದ್ಧ ತವರಿನಲ್ಲೇ ಸಂಕಷ್ಟದಲ್ಲಿ ಕರ್ನಾಟಕ!

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ವಿಂಡೀಸ್‌

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ವೆಸ್ಟ್‌ಇಂಡೀಸ್‌ 2-1ರಲ್ಲಿ ತನ್ನದಾಗಿಸಿಕೊಂಡಿದೆ. ಬುಧವಾರ ನಡೆದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ತಂಡ 8 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡನ್ನು 50 ಓವರಲ್ಲಿ 8 ವಿಕೆಟ್‌ಗೆ 263 ರನ್‌ಗೆ ಕಟ್ಟಿಹಾಕಿದ ವಿಂಡೀಸ್‌, ಬ್ರ್ಯಾಂಡನ್‌ ಕಿಂಗ್‌ (102) ಹಾಗೂ ಕೇಸಿ ಕಾರ್ಟಿ (128*)ರ ಶತಕಗಳ ನೆರವಿನಿಂದ ಕೇವಲ 2 ವಿಕೆಟ್‌ ಕಳೆದುಕೊಂಡು, ಇನ್ನೂ 7 ಓವರ್‌ ಬಾಕಿ ಇರುವಂತೆ 267 ರನ್‌ ಕಲೆಹಾಕಿ, ಜಯದ ಸಂಭ್ರಮ ಆಚರಿಸಿತು.

click me!