ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆರ್‌ಸಿಬಿ ಫ್ರಾಂಚೈಸಿಯು 14 ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಎಲ್ಲಾ 5 ಫ್ರಾಂಚೈಸಿಗಳು ಹರಾಜಿಗೂ ಮುನ್ನ ತಂಡದಲ್ಲೇ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಗುರುವಾರ ಪ್ರಕಟಿಸಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ನಾಯಕಿ ಸ್ಮೃತಿ ಮಂಧನಾ ಸೇರಿ 14 ಮಂದಿಯನ್ನು ರಿಟೈನ್‌ ಮಾಡಿಕೊಂಡಿದೆ.

ಕರ್ನಾಟಕದ ಶ್ರೇಯಾಂಕ ಪಾಟೀಲ್‌, ಆಸ್ಟ್ರೇಲಿಯಾದ ಎಲೈಸಿ ಪೆರ್ರಿ, ನ್ಯೂಜಿಲೆಂಡ್‌ನ ಸೋಫಿ ಡಿವೈನ್‌, ರಿಚಾ ಘೋಷ್, ರೇಣುಕಾ ಸಿಂಗ್‌, ರಿಚಾ ಘೋಷ್ ಕೂಡಾ ರಿಟೈನ್‌ ಆಗಿದ್ದಾರೆ. ಆದರೆ ಕರ್ನಾಟಕದ ಶುಭಾ ಸತೀಶ್‌ ಸೇರಿ 7 ಮಂದಿ ಹೊರಬಿದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 14 ಆಟಗಾರ್ತಿಯರನ್ನು ರೀಟೈನ್ ಮಾಡಿಕೊಳ್ಳಲು 11.75 ಕೋಟಿ ರುಪಾಯಿ ಖರ್ಚು ಮಾಡಿದೆ. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿಗೆ 3.25 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಆರ್‌ಸಿಬಿ ಫ್ರಾಂಚೈಸಿಯು ಇದೀಗ ಹರಾಜಿನಲ್ಲಿ 4 ಆಟಗಾರ್ತಿಯರನ್ನು ಖರೀದಿಸಲು ಅವಕಾಶ ಇದೆ.

Scroll to load tweet…

ಭಾರತ 46ಕ್ಕೆ ಆಲೌಟಾಗಿದ್ದ ಬೆಂಗಳೂರು ಪಿಚ್‌ಗೆ ಅಚ್ಚರಿ ರೇಟಿಂಗ್ ನೀಡಿದ ಐಸಿಸಿ!

ಇನ್ನು, ಮುಂಬೈ ಇಂಡಿಯನ್ಸ್‌ ಹರ್ಮನ್‌ಪ್ರೀತ್‌ ಕೌರ್‌, ಯಸ್ತಿಕಾ ಭಾಟಿಯಾ, ಪೂಜಾ, ಡೆಲ್ಲಿ ಕ್ಯಾಪಿಟಲ್ಸ್‌ ಜೆಮಿಮಾ, ಶಫಾಲಿ, ರಾಧಾ, ಮೆಗ್‌ ಲ್ಯಾನಿಂಗ್‌, ಯುಪಿ ವಾರಿಯರ್ಸ್‌ ತಂಡ ಕರ್ನಾಟಕದ ವೃಂದಾ ದಿನೇಶ್‌, ದೀಪ್ತಿ, ಅಲೀಸಾ ಹೀಲಿ, ಗುಜರಾತ್‌ ಜೈಂಟ್ಸ್‌ ತಂಡ ಆ್ಯಶ್ಲೆ ಗಾರ್ಡ್ನರ್‌, ಬೆಥ್‌ ಮೂನಿ ಸೇರಿ ಪ್ರಮುಖರನ್ನು ಉಳಿಸಿಕೊಂಡಿವೆ.

ಸದ್ಯ ಗುಜರಾತ್ ಜೈಂಟ್ಸ್‌ ಮಹಿಳಾ ತಂಡವು 14 ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡ ಬಳಿಕ ಹರಾಜಿಗೆ ಗರಿಷ್ಠ 4.4 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇನ್ನುಳಿದಂತೆ ಯುಪಿ ವಾರಿಯರ್ಸ್‌ 3.9 ಕೋಟಿ ರುಪಾಯಿ, ಆರ್‌ಸಿಬಿ 3.25 ಕೋಟಿ ರುಪಾಯಿ, ಮುಂಬೈ ಇಂಡಿಯನ್ಸ್‌ 2.65 ಕೋಟಿ ರುಪಾಯಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2.5 ಕೋಟಿ ರುಪಾಯಿಗಳನ್ನು ಹರಾಜಿಗೆ ಉಳಿಸಿಕೊಂಡಿದೆ.

ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರ್ತಿಯರ ವಿವರ:

ಸ್ಮೃತಿ ಮಂಧನಾ(ನಾಯಕ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲೈಸಿ ಪೆರ್ರಿ, ಜಾರ್ಜಿಯಾ ವಾರ್‌ಹ್ಯಾಮ್, ಶ್ರೇಯಾಂಕ ಪಾಟೀಲ್, ಆಶಾ ಶೋಭನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೋಲಿನ್ಯುಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್(ಯುಪಿ ವಾರಿಯರ್ಸ್‌ನಿಂದ ಟ್ರೇಡ್ ಮಾಡಿದ್ದು).