ಭಾರತ 46ಕ್ಕೆ ಆಲೌಟಾಗಿದ್ದ ಬೆಂಗಳೂರು ಪಿಚ್‌ಗೆ ಅಚ್ಚರಿ ರೇಟಿಂಗ್ ನೀಡಿದ ಐಸಿಸಿ!

By Naveen Kodase  |  First Published Nov 8, 2024, 6:45 AM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಬೆಂಗಳೂರು ಪಿಚ್ ಸೇರಿದಂತೆ ಭಾರತದ ಪಿಚ್‌ಗಳಿಗೆ ಐಸಿಸಿ ರೇಟಿಂಗ್ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಇತ್ತೀಚೆಗೆ ಭಾರತ ತಂಡ ಬಾಂಗ್ಲಾದೇಶ, ನ್ಯೂಜಿಲೆಂಡ್ ವಿರುದ್ಧ ಆಡಲು ಉಪಯೋಗಿಸಿದ್ದ ಪಿಚ್‌ಗಳಿಗೆ ಐಸಿಸಿ ಗುರುವಾರ ರೇಟಿಂಗ್ ನೀಡಿದೆ. ನ್ಯೂಜಿಲೆಂಡ್ ಸರಣಿಯ 3 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಬೆಂಗಳೂರು, ಪುಣೆ ಹಾಗೂ ಮುಂಬೈ ಕ್ರೀಡಾಂಗಣದ ಪಿಚ್ ಗಳು 'ತೃಪ್ತಿಕರ'ವಾಗಿತ್ತು ಎಂದು ಐಸಿಸಿ ತಿಳಿಸಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಸರ್ವಪತನ ಕಂಡಿತ್ತು. ಹೀಗಿದ್ದೂ ಬೆಂಗಳೂರಿನ ಟೆಸ್ಟ್‌ಗೆ ಐಸಿಸಿ ಈ ಪಿಚ್ ತೃಪ್ತಿಕರವಾಗಿತ್ತು ಎಂದು ಐಸಿಸಿ ರೇಟಿಂಗ್ ನೀಡಿದೆ.. 

Tap to resize

Latest Videos

undefined

ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಚೆನ್ನೈ ಕ್ರೀಡಾಂಗಣದ ಪಿಚ್ ಅತ್ಯುತ್ತಮವಾಗಿತ್ತು ಎಂದಿರುವ ಐಸಿಸಿ, ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದ ಪಿಚ್‌ಗೆ ಅತೃಪ್ತಿಕರ ರೇಟಿಂಗ್ ನೀಡಿದೆ. ಇನ್ನು, ಬಾಂಗ್ಲಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಆತಿಥ್ಯ ವಹಿಸಿದ್ದ ಗ್ವಾಲಿಯರ್, ಡೆಲ್ಲಿ ಹೈದರಾಬಾದ್ ಪಿಚ್‌ಗಳು ಅತ್ಯುತ್ತಮವಾಗಿತ್ತು ಎಂದು ಐಸಿಸಿ ತಿಳಿಸಿದೆ.

ಮೆಲ್ಬರ್ನ್‌ನಲ್ಲಿ ಬೌನ್ಸಿ ಟೆಸ್ಟ್‌ ಫೇಲಾದ ಭಾರತ 'ಎ' ತಂಡ!

ಮೆಲ್ಬರ್ನ್: ಆಸ್ಟ್ರೇಲಿಯಾ 'ಎ' ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 'ಎ' ತಂಡ ಕೇವಲ 161 ರನ್‌ಗೆ ಆಲೌಟ್ ಆಗಿದೆ. ಆಸೀಸ್ ವೇಗಿಗಳಿಂದ ಎದುರಾದ ಬೌನ್ಸ್ ಪರೀಕ್ಷೆಯಲ್ಲಿ ಫೇಲಾದ ಭಾರತ, ಮೊದಲ ದಿನವೇ ಮತ್ತೊಂದು ಸೋಲಿನತ್ತ ಮುಖ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆ.ಎಲ್. ರಾಹುಲ್ ಕೇವಲ 4 ರನ್‌ಗೆ ಔಟಾದರೆ, ವಿಕೆಟ್ ಕೀಪರ್ ಧೃವ್ ಜುರೆಲ್ ಕಠಿಣ ಪರಿಸ್ಥಿತಿಯಲ್ಲಿ ಆಕರ್ಷಕ ಆಟವಾಡಿ 80 (186 ಎಸೆತ) ರನ್ ಗಳಿಸಿದರು. ಭಾರತ 'ಎ'ನ ಮೊದಲ ಇನ್ನಿಂಗ್ಸ್ ಕೇವಲ 57.1 ಓವರಲ್ಲೇ ಕೊನೆಗೊಂಡಿತು.

ರಣಜಿ ಟ್ರೋಫಿ: ಬಂಗಾಳ ವಿರುದ್ಧ ತವರಿನಲ್ಲೇ ಸಂಕಷ್ಟದಲ್ಲಿ ಕರ್ನಾಟಕ!

ರಾಹುಲ್ ವಿರುದ್ಧ ಬೌಲ್ ಮಾಡಲು ಕಾತರಿಸುತ್ತಿದ್ದೇನೆ ಎಂದಿದ್ದ ಆಸೀಸ್ ವೇಗಿ ಸ್ಕಾಟ್ ಬೋಲೆಂಡ್, ಕರ್ನಾಟಕ ಬ್ಯಾಟರ್‌ನ ವಿಕೆಟ್ ಕಬಳಿಸಿದ್ದು ಕಾಕತಾಳೀಯ ಎನಿಸಿತು. ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್ ಇಬ್ಬರೂ ಸೊನ್ನೆಗೆ ಔಟಾದರೆ, ನಾಯಕ ಋತುರಾಜ್ 4 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಆಟ 26 ರನ್‌ಗೆ ಕೊನೆಗೊಂಡಿತು. 

ತಿರುಗೇಟು ನೀಡಿದ ಭಾರತದ ವೇಗಿಗಳು: ಇನ್ನು ಭಾರತದ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆತಿಥೇಯ ಆಸ್ಟ್ರೇಲಿಯಾ 'ಎ' ತಂಡವು, ಭಾರತೀಯ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಹೋಗಿದೆ. ಎರಡನೇ ದಿನದಾಟದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಮುನ್ನ ಆಸ್ಟ್ರೇಲಿಯಾ 'ಎ' ತಂಡವು 89 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದು, ಇನ್ನೂ ಕಾಂಗರೂ ಪಡೆ 72 ರನ್‌ಗಳ ಹಿನ್ನಡೆಯಲ್ಲಿದೆ. ಸದ್ಯ ಮಾರ್ಕಸ್ ಹ್ಯಾರಿಸ್ 39 ಹಾಗೂ ಜಿಮ್ಮಿ ಪೀರ್‌ಸನ್ 1 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

 

ಭಾರತ 'ಎ' ತಂಡದ ಪರ ಮಾರಕ ದಾಳಿ ನಡೆಸಿದ ತ್ರಿವಳಿ ವೇಗಿಗಳ ಪೈಕಿ ಖಲೀಲ್ ಅಹಮದ್ ಹಾಗೂ ಮುಕೇಶ್ ಕುಮಾರ್ ತಲಾ 2 ವಿಕೆಟ್ ಪಡೆದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
 

click me!