ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ಆತಿಥ್ಯವಹಿಸುತ್ತಿರುವ ಈ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ.
ದುಬೈ(ಜೂ.27): ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ. ಭಾರತ ಆತಿಥ್ಯವಹಿಸುತ್ತಿರುವ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಇಂದು ಐಸಿಸಿ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಟೂರ್ನಿ ನಡೆಯಲಿದೆ. ಅಕ್ಟೋಬರ್ 15 ರಂದು ಬದ್ಧವೈರಿಗಳಾದ ಭಾರತ ಹಾೂ ಪಾಕಿಸ್ತಾನ ಹೋರಾಟ ನಡಸಲಿದೆ. ಅಹಮ್ಮದಾಬಾದ್‌ನಲ್ಲಿ ಇಂಡೋ-ಪಾಕ್ ಪಂದ್ಯ ಆಯೋಜಿಸಲಾಗಿದೆ. ನವೆಂಬರ್ 19 ರಂದು ಅಹಮ್ಮದಾಬಾದ್‌ನಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ.
ಉದ್ಘಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಲಿದೆ. ಅಕ್ಟೋಬರ್ 5 ರಂದು ಅಹಮ್ಮಾದಾಬಾದ್‌ನಲ್ಲಿ ಈ ಪಂದ್ಯ ನಡೆಯಲಿದೆ. ಏಕದನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಚೆನ್ನನಲ್ಲಿ ನಡೆಯಲಿದೆ
ನಿಶ್ಚಿತಾರ್ಥವಾದ ಬೆನ್ನಲ್ಲಿಯೇ ಕುದುರಿದ ಅದೃಷ್ಟ, ಟೀಮ್ ಇಂಡಿಯಾಗೆ ಸೆಲೆಕ್ಷನ್
ಏಕದಿನ ವಿಶ್ವಕಪ್ ವೇಳಾಪಟ್ಟಿ ರಿಲೀಸ್
ಅಕ್ಟೋಬರ್ 5: ಇಂಗ್ಲೆಂಡ್-ನ್ಯೂಜಿಲೆಂಡ್( ಅಹಮ್ಮದಾಬಾದ್)
ಅಕ್ಟೋಬರ್ 6: ಪಾಕಿಸ್ತಾನ-ಕ್ವಾಲಿಫೈಯರ್ 1 ತಂಡ(ಹೈದರಾಬಾದ್)
ಅಕ್ಟೋಬರ್ 7: ಬಾಂಗ್ಲಾದೇಶ-ಆಫ್ಘಾನಿಸ್ತಾನ (ಧರ್ಮಶಾಲಾ)
ಅಕ್ಟೋಬರ್ 7: ಸೌತ್ ಆಫ್ರಿಕಾ-ಕ್ವಾಲಿಫೈಯರ್ 2 ತಂಡ(ದೆಹಲಿ)
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ(ಚೆನ್ನೈ)
ಅಕ್ಟೋಬರ್ 9: ನ್ಯೂಜಿಲೆಂಡ್-ಕ್ವಾಲಿಫೈಯರ್(ಹೈದರಾಬಾದ್)
ಅಕ್ಟೋಬರ್ 10: ಇಂಗ್ಲೆಂಡ್ -ಬಾಂಗ್ಲಾದೇಶ(ದರ್ಮಶಾಲಾ)
ಅಕ್ಟೋಬರ್ 11: ಭಾರತ-ಅಪ್ಘಾನಿಸ್ತಾನ(ದೆಹಲಿ)
ಅಕ್ಟೋಬರ್ 12: ಪಾಕಿಸ್ತಾನ-ಕ್ವಾಲಿಫೈಯರ್ 2 ತಂಡ(ಹೈದರಾಬಾದ್)
ಅಕ್ಟೋಬರ್ 13: ಆಸ್ಟ್ರೇಲಿಯಾ-ಸೌತ್ ಆಫ್ರಿಕಾ(ಲಖನೌ)
ಅಕ್ಟೋಬರ್ 14: ಇಂಗ್ಲೆಂಡ್-ಆಫ್ಘಾನಿಸ್ತಾನ(ದೆಹಲಿ)
ಅಕ್ಟೋಬರ್ 14:ನ್ಯೂಜಿಲೆಂಡ್-ಬಾಂಗ್ಲಾದೇಶ(ಚೆನ್ನೈ)
ಅಕ್ಟೋಬರ್15: ಭಾರತ-ಪಾಕಿಸ್ತಾನ( ಅಹಮ್ಮದಾಬಾದ್)
ಅಕ್ಟೋಬರ್ 16: ಆಸ್ಟ್ರೇಲಿಯಾ-ಕ್ವಾಲಿಫೈಯರ್ 2 ತಂಡ( ಲಖನೌ)
ಅಕ್ಟೋಬರ್ 17: ಸೌತ್ ಆಫ್ರಿಕಾ-ಕ್ವಾಲಿಫೈಯರ್ 1 ತಂಡ(ದರ್ಮಶಾಲಾ)
ಅಕ್ಟೋಬರ್ 18: ನ್ಯೂಜಿಲೆಂಡ್-ಆಫ್ಘಾನಿಸ್ತಾನ(ಚೆನ್ನೈ)
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ( ಪುಣೆ)
ಅಕ್ಟೋಬರ್ 20: ಆಸ್ಟ್ರೇಲಿಯಾ-ಪಾಕಿಸ್ತಾನ(ಬೆಂಗಳೂರು)
ಅಕ್ಟೋಬರ್ 21:ಇಂಗ್ಲೆಂಡ್-ಸೌತ್ ಆಫ್ರಿಕಾ(ಮುಂಬೈ)
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್(ಧರ್ಮಶಾಲಾ)
ಅಕ್ಟೋಬರ್ 23: ಪಾಕಿಸ್ತಾನ-ಆಫ್ಘಾನಿಸ್ತಾನ(ಚೆನ್ನೈ)
ಅಕ್ಟೋಬರ್ 24: ಸೌತ್ ಆಫ್ರಿಕಾ-ಬಾಂಗ್ಲಾದೇಶ(ಮುಂಬೈ)
ಅಕ್ಟೋಬರ್ 25: ಆಸ್ಟ್ರೇಲಿಯಾ-ಕ್ವಾಲಿಫೈಯರ್ 1 ತಂಡ(ದೆಹಲಿ)
ಅಕ್ಟೋಬರ್ 26: ಇಂಗ್ಲೆಂಡ್-ಕ್ವಾಲಿಫೈಯರ್ 2 ತಂಡ(ಬೆಂಗಳೂರು)
ಅಕ್ಟೋಬರ್ 27: ಪಾಕಿಸ್ತಾನ-ಸೌತ್ ಆಫ್ರಿಕಾ(ಚೆನ್ನೈ)
ಅಕ್ಟೋಬರ್ 28: ಕ್ವಾಲಿಫೈರ್ 1 ತಂಡ -ಬಾಂಗ್ಲಾದೇಶ( ಕೋಲ್ಕತಾ)
ಅಕ್ಟೋಬರ್ 28: ಆಸ್ಟ್ರೇಲಿಯಾ-ನ್ಯೂಜಿಲೆಂಡ್(ಧರ್ಮಶಾಲಾ)
ಅಕ್ಟೋಬರ್ 29: ಭಾರತ-ಇಂಗ್ಲೆಂಡ್ (ಲಖನೌ)
ಅಕ್ಟೋಬರ್ 30: ಆಫ್ಘಾನಿಸ್ತಾನ-ಕ್ವಾಲಿಯಫೈರ್ 1 (ಪುಣೆ)
ಅಕ್ಟೋಬರ್ 31: ಪಾಕಿಸ್ತಾನ-ಬಾಂಗ್ಲಾದೇಶ(ಕೋಲ್ಕತಾ)
ನವೆಂಬರ್ 1: ನ್ಯೂಜಿಲೆಂಡ್-ಸೌತ್ ಆಫ್ರಿಕಾ(ಪುಣೆ)
ನವೆಂಬರ್ 2: ಭಾರತ-ಕ್ವಾಲಿಫೈಯರ್(ಮುಂಬೈ)
ನವೆಂಬರ್ 3: ಕ್ವಾಲಿಫೈಯರ್ 1-ಆಫ್ಘಾನಿಸ್ತಾನ(ಲಖನೌ)
ನವೆಂಬರ್ 4:ನ್ಯೂಜೆಲೆಂಡ್-ಪಾಕಿಸ್ತಾನ(ಬೆಂಗಳೂರು)
ನವೆಂಬರ್ 5: ಕೋಲ್ಕತ್ತಾದಲ್ಲಿ ಭಾರತ-ಆಫ್ರಿಕಾ ಪಂದ್ಯ
ನವೆಂಬರ್ 6: ಬಾಂಗ್ಲಾದೇಶ-ಕ್ವಾಲಿಫೈಯರ್ (ದೆಹಲಿ)
ನವೆಂಬರ್ 7: ಆಸ್ಟ್ರೇಲಿಯಾ-ಆಫ್ಘಾನಿಸ್ತಾನ(ಮುಂಬೈ)
ನವೆಂಬರ್ 8: ಇಂಗ್ಲೆಂಡ್-ಕ್ವಾಲಿಫೈಯರ್ 1(ಪುಣೆ)
ನವೆಂಬರ್ 9: ನ್ಯೂಜಿಲೆಂಡ್-ಕ್ವಾಲಿಫೈಯರ್ 2(ಬೆಂಗಳೂರು)
ನವೆಂಬರ್ 10:ಸೌತ್ ಆಫ್ರಿಕಾ-ಅಫ್ಘಾನಿಸ್ತಾನ(ಅಹಮ್ಮಾದಾಬಾದ್)
ನವೆಂಬರ್ 11: ಭಾರತ-ಕ್ವಾಲಿಫೈಯರ್ 1(ಬೆಂಗಳೂರು)
ನವೆಂಬರ್ 12: ಇಂಗ್ಲೆಂಡ್-ಪಾಕಿಸ್ತಾನ(ಕೋಲ್ಕತಾ)
ನವೆಂಬರ್ 12: ಆಸ್ಟ್ರೇಲಿಯಾ-ಬಾಂಗ್ಲಾದೇಶ(ಪುಣೆ)
ನವೆಂಬರ್ 15: ಮುಂಬೈನಲ್ಲಿ ಮೊದಲ ಸೆಮಿಫೈನಲ್
ನವೆಂಬರ್ 16: ಕೋಲ್ಕತ್ತಾದಲ್ಲಿ 2ನೇ ಸೆಮಿಫೈನಲ್
ನವೆಂಬರ್ 19: ಅಹ್ಮದಾಬಾದ್ನಲ್ಲಿ ಫೈನಲ್ ಫೈಟ್
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೆ ಎಲ್ ರಾಹುಲ್ ಭೇಟಿ; ಟೆಂಪಲ್ ರನ್ ಟ್ರೋಲ್ ಮಾಡಿದ ನೆಟ್ಟಿಗರು..!