
ನವದೆಹಲಿ[ನ.04]: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ‘ನನ್ನ ಸುತ್ತಲು ಮ್ಯಾಚ್ ಫಿಕ್ಸರ್‌ಗಳೇ ತುಂಬಿಕೊಂಡಿದ್ದರು’ ಎನ್ನುವ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಕರಾಳ ಜಗತ್ತಿನ ಆ ದಿನಗಳ ಬಗ್ಗೆ ಮಾತನ್ನಾಡಿದ್ದಾರೆ.
ಡೇ ಅಂಡ್ ನೈಟ್ ಟೆಸ್ಟ್: ಕೇವಲ 3 ಸೆಕೆಂಡ್ ದಾದಾ ಮಾತಿಗೆ ಓಕೆ ಎಂದ ಕೊಹ್ಲಿ..!
ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಖ್ತರ್, ‘ನಾನು 21 ಎದುರಾಳಿಗಳ ವಿರುದ್ಧ ಆಡುತ್ತಿದ್ದೆ. 10 ಜನ ನಮ್ಮ ತಂಡದವರು. ಉಳಿದ 11 ಮಂದಿ ಎದುರಾಳಿ ತಂಡದವರು. ನಾನು ಯಾವುತ್ತಿಗೂ ಮೋಸದಾಟದಲ್ಲಿ ಭಾಗಿಯಾಗುವುದಿಲ್ಲ ಎನ್ನುವ ದೃಢ ನಂಬಿಕೆ ಇತ್ತು. ಆದರೆ ಪಾಕಿಸ್ತಾನ ತಂಡದಲ್ಲಿ ನನ್ನ ಸುತ್ತ ಮ್ಯಾಚ್ ಫಿಕ್ಸರ್‌ಗಳೇ ತುಂಬಿದ್ದರು’ ಎಂದಿದ್ದಾರೆ.
ಫಿಕ್ಸಿಂಗ್: ಪಾಕ್ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆಟಿಗರು ಬ್ಯಾನ್!
ಕಾರ್ಯಕ್ರಮದಲ್ಲಿ 2010ರ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ನೆನಪಿಸಿಕೊಂಡ ಅಖ್ತರ್, ‘ನನಗೆ ತುಂಬಾ ಕೋಪ ಬಂದಿತ್ತು. ಸಿಟ್ಟಿನಲ್ಲಿ ಮುಷ್ಠಿಯಿಂದ ಗೋಡೆಗೆ ಗುದ್ದಿದ್ದೆ. ಹಣಕ್ಕಾಗಿ ಆಟಗಾರರು ತಮ್ಮನ್ನೇ ಮಾರಿಕೊಂಡಿದ್ದು ಬೇಸರ ಉಂಟು ಮಾಡಿತ್ತು’ ಎಂದರು.
2011ರಲ್ಲಿ ಇಂಗ್ಲೆಂಡ್’ನಲ್ಲಿ ಪಾಕಿಸ್ತಾನದ ಕ್ರಿಕೆಟಿಗರಾದ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಹಾಗೂ ಸಲ್ಮಾನ್ ಬಟ್ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಅಲ್ಪ ಮೊತ್ತಕ್ಕೆ ತಮ್ಮನ್ನು ತಾವು ಮಾರಿಕೊಳ್ಳುವ ಮೂಲಕ ಇಬ್ಬರು ಪ್ರತಿಭಾನ್ವಿತ ವೇಗಿಗಳ ಸೇವೆಯನ್ನು ಪಾಕಿಸ್ತಾನ ಕಳೆದುಕೊಳ್ಳಬೇಕಾಯಿತು. ಈ ಮೂವರ ಪೈಕಿ ಮೊಹಮ್ಮದ್ ಆಮಿರ್ ಮಾತ್ರ ಯಶಸ್ವಿ ಕಮ್’ಬ್ಯಾಕ್ ಮಾಡುವಲ್ಲಿ ಸಫಲರಾಗಿದ್ದರು. ಅಲ್ಲದೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.