ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ಮಳೆಗೆ ಬಲಿಯಾಗಿದೆ. ಮಳೆ ಬರದಿದ್ದರೆ ಪಾಕಿಸ್ತಾನ ಮತ್ತೊಂದು ಸೋಲು ಕಾಣುವ ಸಾಧ್ಯತೆಯಿತ್ತು. ಮಳೆ ಪಾಕಿಸ್ತಾನದ ಮಾನ ಕಾಪಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸಿಡ್ನಿ[ನ.04]: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಉತ್ಸಾಹದಲ್ಲಿದ್ದ ಆಸ್ಪ್ರೇಲಿಯಾ, ಪಾಕಿಸ್ತಾನ ವಿರುದ್ಧ ಭಾನುವಾರ ಆರಂಭಗೊಂಡ 3 ಪಂದ್ಯಗಳ ಸರಣಿಯಲ್ಲೂ ಶುಭಾರಂಭ ಮಾಡುವ ವಿಶ್ವಾಸದಲ್ಲಿತ್ತು. ಆದರೆ ಪಂದ್ಯ ಮಳೆಗೆ ಬಲಿಯಾದ ಕಾರಣ, ಆಸಿಸ್ ನಿರಾಸೆ ಅನುಭವಿಸಿತು.
2020ರ ಒಲಿಂಪಿಕ್ಸ್‌ಗಿಲ್ಲ ಪಾಕಿಸ್ತಾನ ಹಾಕಿ ತಂಡ!
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 15 ಓವರಲ್ಲಿ 5 ವಿಕೆಟ್‌ಗೆ 107 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದಾಗಿ ಆಸ್ಪ್ರೇಲಿಯಾಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ 15 ಓವರಲ್ಲಿ 119 ರನ್ ಗುರಿ ನೀಡಲಾಯಿತು. ಆ್ಯರೋನ್ ಫಿಂಚ್ (16 ಎಸೆತಗಳಲ್ಲಿ 37) ಸ್ಫೋಟಕ ಆಟದ ನೆರವಿನಿಂದ ಆಸೀಸ್ 3.1 ಓವರಲ್ಲಿ 41 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿದ ಕಾರಣ ಆಟ ರದ್ದುಗೊಳಿಸಲಾಯಿತು.
ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ
ಪಾಕಿಸ್ತಾನ ಇನ್ನಿಂಗ್ಸ್ ಬಳಿಕ ಮಳೆಯಿಂದಾಗಿ 1 ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತ್ತು. ಆದರೂ ಇನ್ನಿಂಗ್ಸ್ ನಡುವೆ 20 ನಿಮಿಷಗಳ ವಿರಾಮ ತೆಗೆದುಕೊಳ್ಳಲಾಯಿತು. ಆಸಿಸ್ ಇನ್ನಿಂಗ್ಸಲ್ಲಿ 5 ಓವರ್ ಪೂರ್ಣಗೊಂಡಿದ್ದರೆ ಪಂದ್ಯ ಫಲಿತಾಂಶ ಕಾಣುತಿತ್ತು. ಇನ್ನು ಎರಡನೇ ಟಿ20 ಪಂದ್ಯವು ಕ್ಯಾನ್’ಬೆರಾದಲ್ಲಿ ನವೆಂಬರ್ 05ರಂದು ನಡೆಯಲಿದೆ.