ಮೊದಲ ಟಿ20; ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

By Suvarna News  |  First Published Dec 6, 2019, 8:35 PM IST

ವೆಸ್ಟ್ ಇಂಡೀಸ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ವಿಂಡೀಸ್ ದೈತ್ಯರ ಅಬ್ಬರಕ್ಕೆ ಬೃಹತ್ ಮೊತ್ತ ದಾಖಲಾಗಿದೆ. ಇದೀಗ ಟಾರ್ಗೆಟ್ ಬೆನ್ನಟ್ಟುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ.


ಹೈದರಾಬಾದ್(ಡಿ.06): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ರನ್ ಸುರಿಮಳೆಯಾಗಿದೆ. ಹೈದರಾಬಾದ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕ 207 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ 208 ರನ್ ಬೃಹತ್ ಟಾರ್ಗೆಟ್ ನೀಡಿದೆ. 

ಇದನ್ನೂ ಓದಿ:  ಹರ್ಭಜನ್ to ಸೈನಾ; ರೇಪ್ ಆರೋಪಿಗಳ ಎನ್‌ಕೌಂಟರ್‌ಗೆ ಕ್ರೀಡಾಪಟುಗಳ ಪ್ರತಿಕ್ರಿಯೆ!

Latest Videos

undefined

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಲಿಂಡ್ಲ್ ಸಿಮೋನ್ಸ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ದೀಪಕ್ ಚಾಹರ್ ಎಸೆತದಲ್ಲಿ ಸಿಮೋನ್ಸ್ ರೋಹಿತ್‌ ಶರ್ಮಾಗೆ ಕ್ಯಾಚ್ ನೀಡಿ ಹೊರನಡೆದರು. ಆರಂಭಿಕ ಯಶಸ್ಸು ಗಳಿಸಿದ ಟೀಂ ಇಂಡಿಯಾ ಬಳಿಕ ಹೈರಾಣಾಯಿತು. ಇವಿನ್ ಲಿವಿಸ್ ಹಾಗೂ ಬ್ರಾಂಡನ್ ಕಿಂಗ್ ಜೊತೆಯಾಟ ಭಾರತಕ್ಕೆ ತಲೆನೋವು ತಂದಿತು.

17 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ ಲಿವಿಸ್ 40 ರನ್ ಸಿಡಿಸಿದರು. ಬ್ರಾಂಡನ್ ಕಿಂಗ್ 23 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ ಹಾಗೂ ನಾಯಕ ಕೀರನ್ ಪೊಲಾರ್ಡ್ ಜೊತೆಯಾಟದಿಂದ ವಿಂಡೀಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಹೆಟ್ಮೆಯರ್ ಅರ್ಧಶತಕ ಸಿಡಿಸಿ ಮಿಂಚಿದರು. ಹೆಟ್ಮೆಯರ್ 56 ರನ್ ಸಿಡಿಸಿ ಔಟಾದರು.

ಪೊಲಾರ್ಡ್ 19 ಎಸೆತದಲ್ಲಿ 37 ರನ್ ಸಿಡಿಸಿ ನಿರ್ಗಮಿಸಿದರು. ಜಾಸನ್ ಹೋಲ್ಡರ್ ಅಜೇಯ 24 ರನ್ ಹಾಗೂ ದಿನೇಶ್ ರಾಮ್ದಿನ್ ಅಜೇಯ 11 ರನ್ ಮೂಲಕ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು. 

click me!