
ಹೈದರಾಬಾದ್(ಡಿ.06): ಮುತ್ತಿನ ನಗರಿಯಲ್ಲಿ ಪಶು ವೈದ್ಯೆ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಪ್ರಕರಣದಿಂದ ಇಡೀ ದೇಶವೇ ಹೈದರಾಬಾದ್‌ನತ್ತ ಚಿತ್ತ ನೆಟ್ಟಿದೆ. ಮುಂಜಾನೆಯಿಂದ ಆರಂಭಗೊಂಡಿರುವ ಎನ್‌ಕೌಂಟರ್ ಚರ್ಚೆ ಇನ್ನು ಮುಗಿದಿಲ್ಲ, ಇದರ ನಡುವೆ ಹೈದರಾಬಾದ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ಮೊದಲ ಟಿ20 ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಗಂಗೂಲಿ ನೀಡಿದ್ರು ಶಾಕ್!
ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಮತ್ತೆ ಸ್ಥಾನ ಪಡೆದಿದ್ದರೆ, ಸಂಜು ಸಾಮ್ಸನ್ ಹಾಗೂ ಮನೀಶ್ ಪಾಂಡೆ ಹಾಗೂ ಕುಲ್ದೀಪ್ ಯಾದವ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಇದೇ ವೇಳೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದರಾಬಾದ್‌ನಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಸ್ಟ್ಯಾಂಡ್ ಅನಾವರಣ ಮಾಡಲಾಗಿದೆ. ಇತ್ತೀಚೆಗಷ್ಟೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗೌತಮ್ ಗಂಭೀರ್ ಸ್ಟ್ಯಾಂಡ್ ಅನಾವರಣ ಮಾಡಲಾಗಿತ್ತು.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಸರಣಿ ಇಂದಿನಿಂದ(ಡಿ.06) ಆರಂಭಗೊಂಡಿದೆ. ಡಿಸೆಂಬರ್ 8 ರಂದು ತಿರುವನಂತಪುರಂ ಹಾಗೂ ಡಿಸೆಂಬರ್ 11 ರಂದು 3ನೇ ಹಾಗೂ ಅಂತಿಮ ಟಿ20 ಪಂದ್ಯ ಮುಂಬೈನಲ್ಲಿ ಆಯೋಜಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.