ಹೈದರಾಬಾದ್(ಡಿ.06):  ಕಳೆದ ತಿಂಗಳ 27 ರಂದು ಹೈದರಾಬಾದ್‌ನ ನಾಲ್ವರು ಅತ್ಯಾಚಾರಿಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರು. ಪಶು ವೈದ್ಯೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಈ ಘಟನೆ ನಡೆದ 10 ದಿನದೊಳಗೆ ಹೈದರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಕೊಂದಿದ್ದಾರೆ. ರೇಪ್ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಕನ್ನಡಿಗ IPS ಅಧಿಕಾರಿ ವಿಶ್ವನಾಥ್ ಸಜ್ಜನರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಎನ್‌ಕೌಂಟರ್ ಬಗ್ಗೆ ಪರ ವಿರೋಧವೂ ಕೇಳಿ ಬರುತ್ತಿದೆ. ಇದೀಗ ಪೊಲೀಸ್ ಎನ್‌ಕೌಂಟರ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾಪಟುಗಳು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಎಲ್ಲರನ್ನೂ ಹಿಂಗೇ ಸಾಯಿಸ್ತೀರಾ..? ಜ್ವಾಲಾ ಗುಟ್ಟಾ ಜ್ವಾಲೆ ಇದು!

ಹೈದರಾಬಾದ್ ಪೊಲೀಸರ ಎನ್‌ಕೌಂಟರ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ಸರಿ ಎಂದು ಹಲವರು ವಾದಿಸಿದ್ದರೆ, ತಪ್ಪು ಎಂದು ಕೆಲವರು ಹೇಳಿದ್ದಾರೆ. ಇದೀಗ ಕ್ರೀಡಾಪಟುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.