ಅಯ್ಯೋ ವಿಧಿಯೇ... ಅರ್ಧ ಶತಕ ಬಾರಿಸಿ ಪ್ರಾಣಬಿಟ್ಟ ಕ್ರಿಕೆಟಿಗ..!

Published : Nov 18, 2019, 02:33 PM ISTUpdated : Nov 18, 2019, 04:57 PM IST
ಅಯ್ಯೋ ವಿಧಿಯೇ... ಅರ್ಧ ಶತಕ ಬಾರಿಸಿ ಪ್ರಾಣಬಿಟ್ಟ ಕ್ರಿಕೆಟಿಗ..!

ಸಾರಾಂಶ

ಕ್ರಿಕೆಟ್‌ನಲ್ಲಿ ಏನೂ ಬೇಕಾದರೂ ಸಂಭವಿಸಬಹುದು, ಅದೃಷ್ಟ ಕೆಟ್ಟರೇ ಪ್ರಾಣವೂ ಹೋಗಬಹುದು ಎನ್ನುವುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಜೀವ ನೀರ ಮೇಲಿನ ಗುಳ್ಳೆ ಎನ್ನುವುದಕ್ಕೆ ಹೈದರಬಾದ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯ ಇನ್ನೊಂದು ಸಾಕ್ಷಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಬೆಂಗಳೂರು[ನ.18]: ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಗಾಯಕ್ಕೆ ತುತ್ತಾಗುವುದು ಹೊಸದೇನಲ್ಲ. ಹಲವಾರು ವರ್ಷಗಳಿಂದಲೂ ಇಂತಹ ಅವಘಡಗಳನ್ನು ನೋಡುತ್ತಲೇ ಬಂದಿದ್ದೇವೆ. ಅತಿ ಅಪರೂಪಕ್ಕೆ ಎಂಬಂತೆ ಕೆಲವರು ಮೈದಾನದಲ್ಲಿ ಪ್ರಾಣ ಬಿಟ್ಟಂತಹ ಹೃದಯವಿದ್ರಾವಕ ಘಟನೆಗಳಿಗೂ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. 2014ರಲ್ಲಿ ಸೀನ್ ಅಬೋಟ್ ಬೌನ್ಸರ್ ಆಸ್ಟ್ರೇಲಿಯಾ ಕ್ರಿಕೆಟಿಗ್ ಫಿಲ್ ಹ್ಯೂಸ್ ತಲೆಗೆ ಬಡಿದು ಮೃತಪಟ್ಟಿದ್ದರು. 

ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು!

ಫಿಲ್ ಹ್ಯೂಸ್ ಘಟನೆಯ ಬಳಿಕ ಕ್ರಿಕೆಟ್ ಆಯೋಜಕರು ಇಂತಹ ಅವಘಡಗಳಾಗದಂತೆ ತಡೆಯಲು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿವೆ. ಇದೀಗ ಅಂತಹದ್ದೇ ಘಟನೆಯೊಂದು ಹೈದರಾಬಾದ್’ನಲ್ಲಿ ನಡೆದಿದೆ. A-3 ಡಿವಿಷನ್ ಏಕದಿನ ಸರಣಿಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಮರೇದ್’ಪಲ್ಲಿ ಸ್ಫೋರ್ಟಿಂಗ್ ಕ್ಲಬ್ ಹಾಗೂ ಮರೇದ್’ಪಲ್ಲಿ ಬ್ಲೂ ತಂಡಗಳು ಮುಖಾಮುಖಿಯಾಗಿದ್ದವು. 41 ವರ್ಷದ ವಿರೇಂದ್ರ ನಾಯ್ಕ್ ಮರೇದ್’ಪಲ್ಲಿ ಸ್ಫೋರ್ಟಿಂಗ್ ಕ್ಲಬ್ ಪರ  ಬ್ಯಾಟಿಂಗ್ ನಡೆಸುತ್ತಿದ್ದರು. ಅರ್ಧಶತಕ ಸಿಡಿಸಿದ ಕೆಲ ಹೊತ್ತಿನಲ್ಲೇ ಕುಸಿದು ಬಿದ್ದರು ಎಂದು ಕ್ರೀಡಾ ವೆಬ್’ಸೈಟ್’ವೊಂದು ವರದಿ ಮಾಡಿದೆ.

ಧೋನಿಯಿಂದಲೇ ವಿಶ್ವಕಪ್ ಶತಕ ಕೈತಪ್ಪಿತು; ಗಂಭೀರ್ ಹೇಳಿಕೆಗೆ ಫ್ಯಾನ್ಸ್ ಗರಂ!

ಸಾವಿಗೆ ಕಾರಣವೇನು..?
ಪ್ರಾಥಮಿಕ ಮಾಹಿತಿಯ ಪ್ರಕಾರ ವಿರೇಂದ್ರ ನಾಯ್ಕ್’ಗೆ ಹೃದಯಸ್ತಂಭನವಾಗಿದೆ ಎನ್ನಲಾಗುತ್ತಿದೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಖರವಾದ ಮಾಹಿತಿ ಸಿಗಲಿದೆ. 
ವಿರೇಂದ್ರ ನಾಯ್ಕ್ 66 ರನ್ ಬಾರಿಸಿದ್ದಾಗ ಅಂಪೈರ್ ನೀಡಿದ ತಪ್ಪು ನಿರ್ಧಾರಕ್ಕೆ ಪೆವಿಲಿಯನ್ ಸೇರಬೇಕಾಯಿತು. ಅಂಪೈರ್ ತೀರ್ಪಿಂದ ಬೇಸತ್ತು, ಪೆವಿಲಿಯನ್’ಗೆ ಬರುತ್ತಿದ್ದಂತೆ ಗೂಡೆಗೆ ತಲೆ ಚಚ್ಚಿಕೊಂಡು ಕುಸಿದು ಬಿದ್ದರು ಎಂದು ನಾಯಕ ತ್ರಿಪ್ಟ್ ಸಿಂಗ್ ತಿಳಿಸಿದ್ದಾರೆ. ಆ ಬಳಿಕ ವಿರೇಂದ್ರ ನಾಯ್ಕ್ ಅವರನ್ನು ಸಹಪಾಠಿಗಳು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿ ಹೋಗಿದೆ. 

ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?