ಹಗಲು-ರಾತ್ರಿ ಟೆಸ್ಟ್‌ಗೆ ಕೋಲ್ಕ​ತಾ​ದಲ್ಲಿ ಸಿದ್ಧತೆ!

By Web Desk  |  First Published Nov 18, 2019, 1:37 PM IST

ಭಾರತ-ಬಾಂಗ್ಲಾದೇಶ ನಡುವಿನ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳು ಬಾಕೀ ಉಳಿದಿವೆ. ಹೀಗಿರುವಾಗಲೇ ಈ ಕುರಿತಾಗಿ ಭರ್ಜರಿ ಪ್ರಚಾರ ಆರಂಭವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಕೋಲ್ಕತಾ(18): ನ.22ರಿಂದ 26ರ ವರೆಗೆ ಇಲ್ಲಿನ ನಡೆಯಲಿರುವ ಭಾರತದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್‌ಗೆ ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಭಾರೀ ಸಿದ್ಧತೆ ನಡೆಸಿದೆ. ಭಾನುವಾರ ಈಡನ್‌ ಗಾರ್ಡನ್ಸ್‌ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪಿಂಕ್‌ ಬಾಲ್‌ ಟೆಸ್ಟ್‌ನ ಅಧಿಕೃತ ಮ್ಯಾಸ್ಕಟ್‌ಗಳಾದ ‘ಪಿಂಕು-ಟಿಂಕು’ಗಳನ್ನು ಅನಾವರಣಗೊಳಿಸಿದರು. ಜತೆಗೆ ಮ್ಯಾಚ್‌ ಟಿಕೆಟ್‌ ಅನ್ನು ಸಹ ಪ್ರದ​ರ್ಶಿ​ಸಿ​ದರು. 

Latest Videos

undefined

ಪಿಂಕ್‌ ಬಾಲ್‌ ಟೆಸ್ಟ್‌ಗೆ ಇಂದೋರ್‌ನಲ್ಲೇ ಅಭ್ಯಾ​ಸ

ಪಂದ್ಯ​ವನ್ನು ಅವಿ​ಸ್ಮ​ರ​ಣೀ​ಯ​ಗೊ​ಳಿ​ಸ​ಲು ಹಾಗೂ ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ಕೈಗೊ​ಳ್ಳ​ಲಾ​ಗಿ​ದೆ. ಪಿಂಕ್‌ ಬಾಲ್‌ ಟೆಸ್ಟ್‌ ಆರಂಭದಿಂದ ಮುಕ್ತಾಯದ ವರೆಗೂ ಗುಲಾಬಿ ಬಣ್ಣದ ಬಲೂನ್‌ ಒಂದ​ನ್ನು ಮೈದಾನದ ಮೇಲೆ ಹಾರಿಸಲಾಗುತ್ತದೆ. ನಗರದ ಅತಿ ಎತ್ತರದ ಶಾಹಿದ್‌ ಮಿನಾರ್‌, ‘42’ ಕಟ್ಟಡ ಹಾಗೂ ವಿವಿಧ ಪಾರ್ಕ್’ಗಳಲ್ಲಿ ಗುಲಾಬಿ ಬಣ್ಣದ ಲೈಟ್‌ಗಳ​ನ್ನು ಹಾಕಲಾಗಿದೆ. ನ.20ರಿಂದ ಟಾಟಾ ಸ್ಟೀಲ್‌ ಕಟ್ಟಡದಲ್ಲಿ 3ಡಿ ಮ್ಯಾಪಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮೈದಾನ, ರಸ್ತೆ ಬದಿ ಗೋಡೆಗಳ ಮೇಲೆ ಚಿತ್ತಾರ ಮಾಡ​ಲಾ​ಗಿದೆ. ಹೂಗ್ಲಿ ನದಿಯಲ್ಲಿ ಪಿಂಕ್‌ ಲೈಟಿಂಗ್‌ವುಳ್ಳ ದೋಣಿ ಓಡಿಸಲಾಗುತ್ತಿದೆ.

ಪಿಂಕ್ ಬಾಲ್‌ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್!

ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ರೆಡಿಯಾಗಿದ್ದು, ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಬಾಂಗ್ಲಾದೇಶ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಲು ರೆಡಿಯಾಗಿದೆ. ಈಗಾಗಲೇ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಆಡಿದ 6 ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿರುವ ವಿರಾಟ್ ಪಡೆ, ಇದೀಗ ಮತ್ತೊಂದು ಗೆಲುವಿನ ಕನವರಿಕೆಯಲ್ಲಿದೆ.     
 

click me!