Food: ಹಾಲನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಡುವುದು ಆರೋಗ್ಯಕ್ಕೆ ಸೂಕ್ತವೇ? ಎಷ್ಟು ದಿನ ಇಡಬಹುದು?

Published : Oct 11, 2026, 08:32 PM IST
Milk

ಸಾರಾಂಶ

ಫ್ರಿಡ್ಜ್‌ನಲ್ಲಿಟ್ಟ ಹಾಲನ್ನು ಇಡುವುದು ಆರೋಗ್ಯಕ್ಕೆ ಒಳ್ಳೆಯದಾ? ಹೆಚ್ಚು ದಿನ ಇಟ್ಟರೆ ಏನಾಗುತ್ತದೆ? ಹಾಲನ್ನು ಎಷ್ಟು ದಿನ ಫ್ರಿಡ್ಜ್‌ಲ್ಲಿ ಇಡಬಹುದು. ಅದು ಸೇವಿಸಲು ಯೋಗ್ಯವೇ? ಈ ಕುರಿತು ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಹಸುವಿನ ಹಾಲು ಅಮೃತಕ್ಕೆ ಸಮ ಎನ್ನುತ್ತಾರೆ. ಹಾಲು ಕುಡಿಯುವುದನ್ನು ಮಕ್ಕಳು ಮಾತ್ರವಲ್ಲ, ಪ್ರತಿಯೊಬ್ಬರೂ ಪ್ರತಿದಿನ ಹಾಲು ಅಭ್ಯಾಸ ಮಾಡಿಕೊಳ್ಳಬೇಕು. ಇದು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ, ಅದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಆದರೆ ಪ್ರಿಡ್ಜ್‌ ಅಲ್ಲಿಟ್ಟ ಹಾಲನ್ನು ಎರಡೂ ಅಥವಾ 3 ದಿನದ ನಂತರ ಸೇವಿಸಬಹುದಾ? ಅಷ್ಟಕ್ಕೂ ಅದೂ ಕೆಡುವುದಾದರೂ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಗಮನಿಲೇಬೇಕಾದ ಅಂಶ!

ಹೆಚ್ಚಿನ ಜನರು ಡೈರಿ ಫಾರ್ಮ್ ಅಥವಾ ಅಂಗಡಿಯಿಂದ ಎರಡು ಮೂರು ದಿನಗಳವರೆಗೆ ಸಾಕಾಗುವ ಹಾಲು, ಅಥವಾ ಹಾಲಿನ ಪ್ಯಾಕೆಟ್ ಖರೀದಿಸಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾದ ಹಾಲು ಎಷ್ಟು ಕಾಲ ಉಳಿಯುತ್ತದೆ ಎಂದು ಗೊತ್ತಾ? ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕೆಲವು ಮಾಹಿತಿಗಳಿವೆ.

ಹಾಲನ್ನು ರೆಫ್ರಿಜರೇಟರ್‌ನಲ್ಲಿ ಎಷ್ಟು ದಿನ ಇಡಬಹುದು?

ಪ್ಯಾಕೇಟ್‌ ತೆರೆದ ನಂತರದ ಹಾಲು ಅಥವಾ ಬಿಸಿ ಮಾಡಿದ ಹಾಲನ್ನು ಎರಡು ಅಥವಾ ಮೂರು ದಿನಗಳಿಗಿಂತ ಹೆಚ್ಚು ಕಾಲ ರೆಫ್ರಿಜರೇಟರ್‌ನಲ್ಲಿ ಇಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಲು ಅಮೃತದಂತೆ ಇದ್ದರೂ, ಅದನ್ನು ಒಂದು ಅಥವಾ ಎರಡು ದಿನಗಳಲ್ಲಿ ಸೇವಿಸಬೇಕು. ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇಟ್ಟರೆ, ಹಾಲಿನ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಅಂತಹ ಹಾಲು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು ಎನ್ನಲಾಗಿದೆ. ಪ್ಯಾಕೆಟ್ ಹಾಲು ಅವಧಿ ಮುಗಿದ ನಂತರ 2 ರಿಂದ 5 ದಿನಗಳವರೆಗೆ ರೆಫ್ರಿಜರೇಟರ್‌ನಲ್ಲಿ ಚೆನ್ನಾಗಿ ಉಳಿಯುತ್ತದೆ. ಪ್ಯಾಕೆಟ್ ತೆರೆದಿದ್ದರೆ, 2-3 ದಿನಗಳಲ್ಲಿ ಬಳಸಿ. ಇಲ್ಲದಿದ್ದರೆ, ಹಾಲು ಹಾಳಾಗುತ್ತದೆ.

ಫ್ರಿಡ್ಜ್‌ಲ್ಲಿ ಎಷ್ಟು ದಿನ ಇಡಬಹುದು?

ನೀವು ಹಾಲನ್ನು ಪ್ಯಾಕೆಟ್‌ನಿಂದ ತೆಗೆದು ಕುದಿಸಿದರೆ, ನೀವು ಅದನ್ನು ರೆಫ್ರಿಜರೇಟರ್‌ನಲ್ಲಿ 2 ದಿನಗಳವರೆಗೆ ಇಡಬಹುದು ಮತ್ತು ಆ 2 ದಿನಗಳಲ್ಲಿ ಅದನ್ನು ಬಳಸಬಹುದು. ನೀವು ಅದನ್ನು ಹೆಚ್ಚು ಸಮಯ ಇಟ್ಟರೆ, ಬ್ಯಾಕ್ಟೀರಿಯಾಗಳು ವೃದ್ಧಿಸುತ್ತವೆ. ಈ ಅವಧಿಯಲ್ಲಿ ನೀವು ಆ ಹಾಲನ್ನು ಚಹಾ ಮತ್ತು ಕಾಫಿಗೆ ಬಳಸುವುದು ಸೂಕ್ತ.

ಹಾಲು ಏಕೆ ಕೆಡುತ್ತದೆ?

ರೆಫ್ರಿಜರೇಟರ್‌ನಲ್ಲಿರುವ ಹಾಲು ಸ್ವಲ್ಪ ಹುಳಿಯಾಗಿದ್ದರೆ ಅಥವಾ ವಿಚಿತ್ರವಾದ ವಾಸನೆಯನ್ನು ಹೊಂದಿದ್ದರೆ, ಅದು ಪಕ್ಕಾ ಕೆಟ್ಟಂತೆ. ಅಂತಹ ಹಾಲನ್ನು ಬಳಸಬೇಡಿ. ಹಾಲು ಮುದ್ದೆಯಾಗಿದ್ದರೆ ಅಥವಾ ಮೊಸರಿನಂತೆ ದಪ್ಪವಾಗಿದ್ದರೆ, ಅದು ಕೂಡ ಕೆಟ್ಟ ಸೂಚನೆ. ಹಾಲು ಬಿಳಿ ಬಣ್ಣಕ್ಕೆ ಬದಲಾಗಿ ತಿಳಿ ಹಳದಿ ಬಣ್ಣದಲ್ಲಿದ್ದರೆ, ಅದು ಕೆಡುತ್ತದೆ.

ಹಾಲು ಏಕೆ ಕೆಡುತ್ತದೆ?

ರೆಫ್ರಿಜರೇಟರ್‌ನಲ್ಲಿರುವ ಹಾಲು ಸ್ವಲ್ಪ ಹುಳಿಯಾಗಿದ್ದರೆ ಅಥವಾ ವಿಚಿತ್ರವಾದ ವಾಸನೆಯನ್ನು ಹೊಂದಿದ್ದರೆ, ಅದು ಕೆಡುತ್ತದೆ. ಅಂತಹ ಹಾಲನ್ನು ಬಳಸಬೇಡಿ. ಹಾಲು ಮುದ್ದೆಯಾಗಿದ್ದರೆ ಅಥವಾ ಮೊಸರಿನಂತೆ ದಪ್ಪವಾಗಿದ್ದರೆ, ಅದು ಕೆಡುತ್ತದೆ. ಹಾಲು ಬಿಳಿ ಬಣ್ಣಕ್ಕೆ ಬದಲಾಗಿ ತಿಳಿ ಹಳದಿ ಬಣ್ಣದಲ್ಲಿದ್ದರೆ, ಅದು ಕೆಡುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: 4, 4, 6, 4, 4, 4 ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್; ಪ್ರೀತಿಯಲ್ಲಿ ಸೋತರು, ಮೈದಾನದಲ್ಲಿ ಗೆದ್ದ ಛೋಟು ಕ್ಯಾಪ್ಟನ್‌!
ವಿರಾಟ್ ಕೊಹ್ಲಿಗೆ ಪೈಪೋಟಿ ನೀಡಲು ಹಾರ್ದಿಕ್ ಪಾಂಡ್ಯ ಸಜ್ಜು? 33ನೇ ಹುಟ್ಟುಹಬ್ಬಕ್ಕೆ SG ಜೊತೆ ಹೊಸ ಸರ್ಪ್ರೈಸ್!