
ಬದುಕು ಸದಾ ಅನಿಶ್ಚಿತತೆಯಿಂದಲೇ ಕೂಡಿರುತ್ತದೆ. ಅದರಲ್ಲಿ ಬಡವ ಶ್ರೀಮಂತ ಬಿಟ್ಟಿಲ್ಲ. ಮನುಷ್ಯರೂ ಕಾಲನ ಆಟಕ್ಕೆ ಕೈ ಗೊಂಬೆಗಳು ಮಾತ್ರ. ಇಲ್ಲಿ ಯಾರಿಗೆ, ಯಾವಾಗ? ಏನಾಗುತ್ತದೆ ಎಂದು ಯಾರಿಗೆ ಗೊತ್ತು, ನೀವೆ ಹೇಳಿ. ಅಂತ ಬದುಕಿನಲ್ಲಿ ಡೌನ್ ಫಾಲ್ ಬ್ರೇಕ್ ಅನುಭವಿಸಿದ ಛೋಟು ಕ್ಯಾಪ್ಟನ್ ಮತ್ತೆ ಅಬ್ಬರಿಸಿದ್ದಾನೆ. ಈಗ ಪೃಥ್ವಿ ಶಾ ಕಂಬ್ಯಾಕ್ ಮಾಡುವ ಎಲ್ಲ ಚಾನ್ಸ್ ಇದೆ ಎಂದು ಕ್ರಿಕೆಟ್ ವಲಯ ಮಾರ್ಧನಿಸುತ್ತಿದೆ.
ಭಾರತೀಯ ಕ್ರಿಕೆಟ್‌ನ ಗ್ರ್ಯಾಂಡ್ ಫಿನಾಲೆಯಾದ ರಣಜಿ ಟ್ರೋಫಿ ಆರಂಭವಾಗಿದೆ. ಈಗ ಎಲ್ಲಾ ತಂಡಗಳು ತಮ್ಮ ಪಂದ್ಯಗಳನ್ನು ಪ್ರಾರಂಭಿಸಿವೆ. ಅಂತೆಯೇ, ಮಹಾರಾಷ್ಟ್ರ ವಿರುದ್ಧದ ಸರ್ವೀಸಸ್ ಪಂದ್ಯವು ದೆಹಲಿಯಲ್ಲಿ ನಡೆಯುತ್ತಿದೆ. ಅದರಂತೆಯೇ, ಮಹಾರಾಷ್ಟ್ರದ ಹಾಲಿ ನಾಯಕ ಅದ್ಭುತ ಸೃಷ್ಟಿಸಿದ್ದಾರೆ.
ಮೊದಲ ಪಂದ್ಯದಲ್ಲಿಯೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಹಾರಾಷ್ಟ್ರ ತಂಡದ ನಾಯಕ ಪೃಥ್ವಿ ಶಾ, ಆರಂಭಿಕ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಆಟಗಾರ ಸಚಿನ್ ದಾಸ್ ಜೊತೆಗೂಡಿ ಪೃಥ್ವಿ ಶಾ ಆಕ್ರಮಣಕಾರಿ ಬ್ಯಾಟಿಂಗ್ ಆರಂಭ ನೀಡಿದರು. ವಿಕೆಟ್ ಒಂದು ಕಡೆ ಹೋಗುತ್ತಿದ್ದಾಗ, ಪೃಥ್ವಿ ಶಾ ಅದನ್ನು ಹಿಡಿದಿಟ್ಟುಕೊಂಡು ಬಿರುಸಿನ 70 ರನ್ ಗಳಿಸಿದರು. ಟೆಸ್ಟ್ ಮಾದರಿಯಲ್ಲಿ, ಪೃಥ್ವಿ ಶಾ ಇಂದು ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಪೃಥ್ವಿ ಶಾ 73 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದರು. ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದಾಗ, ಪೃಥ್ವಿ ತಮ್ಮ ಶೈಲಿ ಬದಲಾಯಿಸಲಿಲ್ಲ ಮತ್ತು ಮಹಾರಾಷ್ಟ್ರಕ್ಕೆ ಉತ್ತಮ ಆರಂಭ ನೀಡಿದರು. ಕೊನೆಯ ಸುದ್ದಿ ಬಂದಾಗ, ಮಹಾರಾಷ್ಟ್ರ ತಂಡವು 35 ಓವರ್‌ಗಳಲ್ಲಿ 117 ರನ್ ಗಳಿಸಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪ್ರಸ್ತುತ, ಅಕಿಂತ್ ಬಾವ್ನೆ ಮತ್ತು ಸಿದ್ಧಾರ್ಥ್ ವೀರ್ ಮೈದಾನದಲ್ಲಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.