ಐಸಿಸಿ ಚಾಂಪಿಯನ್ಸ್ ಟ್ರೋಫಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೇ.?: ವಾರ್ನಿಂಗ್ ಕೊಟ್ಟ ಪಾಕ್ ವೇಗಿ..!

By Naveen KodaseFirst Published Jul 22, 2024, 2:45 PM IST
Highlights

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಟೂರ್ನಿ ಆಡಲು ಪಾಕಿಸ್ತಾನಕ್ಕೆ ತೆರಳಲು ಟೀಂ ಇಂಡಿಯಾ ಹಿಂದೇಟು ಹಾಕುತ್ತಿದೆ. ಇದರ ಬೆನ್ನಲ್ಲೇ ಪಾಕ್ ವೇಗಿ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ನೆರೆಯ ಪಾಕಿಸ್ತಾನ ಆತಿಥ್ಯ ವಹಿಸಿದೆ. ಭದ್ರತೆ ಹಾಗೂ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಲು ಬಿಸಿಸಿಐ ಹಿಂದೇಟು ಹಾಕುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಅನುಭವಿ ವೇಗಿ ಹಸನ್ ಅಲಿ, ಟೀಂ ಇಂಡಿಯಾಗೆ ಎಚ್ಚರಿಕೆ ಕೊಟ್ಟಿದ್ದಾರೆ

ಬಿಸಿಸಿಐ ಹೈಬ್ರೀಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿಕೊಂಡಿದೆ. ಹೀಗಿರುವಾಗಲೇ ಹಸನ್ ಅಲಿ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ನಡೆಯಬೇಕು. ಭಾರತೀಯ ಆಟಗಾರರು ಪಾಕಿಸ್ತಾನದ ನೆಲದಲ್ಲಿ ಕ್ರಿಕೆಟ್ ಆಡಲು ಬಯಸುತ್ತಿದ್ದಾರೆ. ಆದರೆ ರಾಜಕೀಯ ಕಾರಣಗಳಿಂದಾಗಿ ಸಾಕಷ್ಟು ವರ್ಷಗಳಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಹಸನ್ ಅಲಿ ಹೇಳಿದ್ದಾರೆ.

Latest Videos

ಕೊಹ್ಲಿ, ರೋಹಿತ್ 2027ರ ಏಕದಿನ ವಿಶ್ವಕಪ್ ಆಡ್ತಾರಾ..?: ಮಹತ್ವದ ಅಪ್‌ಡೇಟ್ ಕೊಟ್ಟ ಗೌತಮ್ ಗಂಭೀರ್..!

"ನಾವು ಕ್ರಿಕೆಟ್ ಆಡಲು ಅಲ್ಲಿಗೆ(ಭಾರತ) ಹೋಗುತ್ತೇವೆ ಎಂದಾದರೇ, ಅವರೂ ಕೂಡಾ ಇಲ್ಲಿಗೆ(ಪಾಕಿಸ್ತಾನಕ್ಕೆ) ಬರಬೇಕು. ಕ್ರೀಡೆ ರಾಜಕೀಯದಿಂದ ಮುಕ್ತವಾಗಿರಬೇಕು ಎಂದು ಸಾಕಷ್ಟು ಜನ ಹಲವು ಬಾರಿ ಹೇಳಿದ್ದಾರೆ. ಆದರೆ ಮತ್ತೊಂದು ಆಯಾಮದಲ್ಲಿ ನೋಡುವುದಾದರೇ, ಟೀಂ ಇಂಡಿಯಾದ ಕೆಲವು ಆಟಗಾರರು ಸಂದರ್ಶನದಲ್ಲಿಯೇ ತಾವು ಪಾಕಿಸ್ತಾನದಲ್ಲಿ ಆಡಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಅಂದರೆ ಭಾರತ ತಂಡಕ್ಕೆ ಬರಲು ಒಲವಿದೆ ಎಂದರ್ಥ. ಆದರೆ ಅಲ್ಲಿನ ರಾಜಕೀಯ, ಕ್ರಿಕೆಟ್‌ ಬೋರ್ಡ್‌ ಇರುವುದರಿಂದ ಸಾಧ್ಯವಾಗುತ್ತಿಲ್ಲ" ಎಂದು ಹಸನ್ ಅಲಿ ಹೇಳಿದ್ದಾರೆ.

"ಈಗಾಗಲೇ ನಮ್ಮ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚೇರ್‌ಮನ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿಯೇ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ಒಂದು ವೇಳೆ ಭಾರತ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಬರದಿದ್ದರೇ, ಅವರನ್ನು ಬಿಟ್ಟೇ ನಾವು ಟೂರ್ನಿ ಆಯೋಜಿಸುತ್ತೇವೆ. ಕ್ರಿಕೆಟ್ ಈ ಬಾರಿ ಪಾಕಿಸ್ತಾನದಲ್ಲಿಯೇ ನಡೆಯಲಿದೆ. ಒಂದು ವೇಳೆ ಭಾರತ ತಂಡವು ಟೂರ್ನಿಯಲ್ಲಿ ಭಾಗವಹಿಸಿಲ್ಲಾ ಎಂದಾದರೇ, ಕ್ರಿಕೆಟ್ ಇಲ್ಲಿಗೆ ಮುಗಿದು ಹೋಗುವುದಿಲ್ಲ. ಭಾರತ ಅಲ್ಲದೇ ಹಲವಾರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ" ಎಂದು ಹಸನ್ ಅಲಿ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024: ಪದಕ ಭೇಟೆಗೆ ಹೊರಟ ಭಾರತೀಯ ಅಥ್ಲೀಟ್‌ಗಳಿಗೆ ಬಿಸಿಸಿಐ ಬಂಪರ್ ಗಿಫ್ಟ್..!

2017ರಲ್ಲಿ ಕೊನೆಯ ಬಾರಿಗೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ಎದುರಿನ ಫೈನಲ್ ಪಂದ್ಯದಲ್ಲಿ ಹಸನ್ ಅಲಿ, ಮಾರಕ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾವನ್ನು ಕಾಡಿದ್ದರು. ಫೈನಲ್‌ನಲ್ಲಿ ಹಸನ್ ಅಲಿ 6.3 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 3 ಬಲಿ ಪಡೆದಿದ್ದರು. 

click me!