ಪ್ರಾಕ್ಟೀಸ್‌ಗಾಗಿ 12 ಕೋಟಿ ಕಾರಿನಲ್ಲಿ ಬಿಸಿಸಿಐ ಎಕ್ಸಲೆನ್ಸಿ ಕೇಂದ್ರಕ್ಕೆ ಬಂದ ಹಾರ್ದಿಕ್ ಪಾಂಡ್ಯ

Published : Aug 30, 2026, 10:51 PM IST
Hardik Pandya Rs 12 Crore Car

ಸಾರಾಂಶ

ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಅಭ್ಯಾಸಕ್ಕಾಗಿ ತಮ್ಮ 12 ಕೋಟಿ ರೂಪಾಯಿ ಫೆರಾರಿ ಕಾರಿನಲ್ಲಿ ಆಗಮಿಸಿದ್ದಾರೆ. ಪಾಂಡ್ಯ ಕಾರಿಗೆ ಹಲವರು ಫಿದಾ ಆಗಿದ್ದಾರೆ. ವಿಶೇಷ ಅಂದರೆ ಕಾರಿನ ಬ್ಯೂಟಿಗೆ ಸ್ವತಃ ಹಾರ್ದಿಕ್ ಪಾಂಡ್ಯ ಮಾರುಹೋಗಿದ್ದಾರೆ.

ಬೆಂಗಳೂರು (ಆ.30) ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸದ್ಯ ಬಿಸಿಸಿಐ ಎಕ್ಸಲೆನ್ಸಿ ಕೇಂದ್ರದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಫಿಟ್ನೆಸ್, ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಸದ್ದು ಮಾಡುತ್ತಿದ್ದಾರೆ. ಅಭ್ಯಾಸಕ್ಕಾಗಿ ಹಾರ್ದಿಕ್ ಪಾಂಡ್ಯ ಬರೋಬ್ಬರಿ 12 ಕೋಟಿ ರೂಪಾಯಿ ಕಾರಿನಲ್ಲಿ ಆಗಮಿಸಿದ್ದಾರೆ. ವಿಶೇಷ ಅಂದರೆ ಕಾರಿನ ಬ್ಯೂಟಿಗೆ ಸ್ವತಃ ಹಾರ್ದಿಕ್ ಪಾಂಡ್ಯ ಮಾರು ಹೋಗಿದ್ದಾರೆ.

ಅಭ್ಯಾಸ ಮುಗಿಸಿ ಬಂದು ಕಾರಿನ ಫೋಟೋ ಕ್ಲಿಕ್ಕಿಸಿದ ಪಾಂಡ್ಯ

ಹಾರ್ದಿಕ್ ಪಾಂಡ್ಯ 12 ಕೋಟಿ ರೂಪಾಯಿ ಫೆರಾರಿ 12ಸಿಲಿಂಡ್ರಿ ಕಾರಿನಲ್ಲಿ ಬಿಸಿಸಿಐ ಎಕ್ಸಲೆನ್ಸಿ ಸೆಂಟರ್‌ಗೆ ಆಗಮಿಸಿದ್ದಾರೆ. ಅಭ್ಯಾಸದ ಮರಳಿ ಕಾರಿನತ್ತ ಬಂದಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ಜೊತೆಗಿದ್ದ ಕೆಲವರು ಕಾರಿನ ಫೋಟೋ ತೆಗೆದಿದ್ದಾರೆ. ವಿಶೇಷ ಅಂದರೆ ಅವರ ಜೊತೆ ಹಾರ್ದಿಕ್ ಪಾಂಡ್ಯ ಕೂಡ ನಿಂತು ಫೋಟೋ ಕ್ಲಿಕ್ಕಿಸಿದ್ದಾರೆ. ಬಳಿಕ ಫೆರಾರಿ 12ಸಿಲಿಂಡ್ರಿ ಕಾರಿನಲ್ಲಿ ತೆರಳಿದ್ದಾರೆ.

ಫೆರಾರಿ 12ಸಿಲಿಂಡ್ರಿ ಅತ್ಯಂತ ಆಕರ್ಷಕ ಸ್ಪೋರ್ಟ್ಸ್ ಕಾರು. ಅತ್ಯುತ್ತಮ ಪರ್ಫಾಮೆನ್ಸ್ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. V12 ಎಂಜಿನ್, ವಿಶಿಷ್ಟ ವಿನ್ಯಾಸ ಹೊಂದಿದೆ. ಇದರ ಬೆಲೆ 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕಾರು ಇದೀಗ ಭಾರಿ ಸದ್ದು ಮಾಡುತ್ತಿದೆ. ಹಾರ್ದಿಕ್ ಪಾಂಡ್ಯ ಬಳಿಕ ಲ್ಯಾಂಬೋರ್ಗಿನಿ, ರೇಂಜ್ ರೋವರ್, ಬೆಂಜ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಪಾಂಡ್ಯ 12 ಸಿಲಿಂಡ್ರಿ ಫೆರಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಾರು ವೈರಲ್

ಹಾರ್ದಿಕ್ ಪಾಂಡ್ಯ ಹಾಗೂ ಫೆರಾರಿ 12ಸಿಲಿಂಡ್ರಿ ಕಾರಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಐಷಾರಾಮಿ ಲೈಫ್‌ಸ್ಟೈಲ್, ಸ್ವಾಗ್ ಮೂಲಕವೇ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಇದೀಗ ಬಲು ದುಬಾರಿ ಹಾಗೂ ಅತ್ಯಾಕರ್ಷಕ ಕಾರಿನ ಮೂಲಕ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಇಂಜುರಿ, ಫಿಟ್ನೆಸ್, ಫಾರ್ಮ್ ಸಮಸ್ಯೆಯಿಂದ ಬಳಲಿದ ಹಾರ್ದಿಕ್ ಪಾಂಡ್ಯ ಕಳೆದ ಹಲವು ದಿನಗಳಿಂದ ಬೆಂಗಳೂರಿನ ಬಿಸಿಸಿಐ ಎಕ್ಸಲೆನ್ಸ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ ಮನೆ ಬಾಡಿಗೆ ಪಡೆದಿದ್ದಾರೆ. ಟೀಂ ಇಂಡಿಯಾಗೆ ಆಯ್ಕೆ ಬಿಸಿಸಿಐ ಕೆಲ ಕಠಿಣ ಮಾನದಂಡ ಪಾಲಿಸುತ್ತಿದೆ. ಈ ಪೈಕಿ ಫಿಟ್ನೆಸ್ ಪ್ರಮುಖ ಆದ್ಯತೆಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನಾ; ಈ ಸಾಧನೆ ಮಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್!
ಒಂದೇ ಓವರ್‌ನಲ್ಲಿ 6, 6, 6, 6, 6, 6! 26 ಎಸೆತಗಳಲ್ಲಿ 77 ರನ್ ಚಚ್ಚಿದ ಅಭಿಷೇಕ್ ಶರ್ಮಾ..!