Cricket: ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನಾ; ಈ ಸಾಧನೆ ಮಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್!

Published : Aug 30, 2026, 10:37 PM IST
Smriti Mandana!

ಸಾರಾಂಶ

ಮಹಿಳಾ ಏಷ್ಯಾ ಕಪ್ 2026ರಲ್ಲಿ, ಸ್ಮೃತಿ ಮಂಧಾನಾ ಥೈಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಅವರನ್ನು ಹಿಂದಿಕ್ಕಿ, ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ.

ಬೆಂಗಳೂರು: ಮಹಿಳಾ ಏಷ್ಯಾ ಕಪ್ ೨೦೨೬ರ ಮೂರನೇ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ ಭಾರತದ ಉಪನಾಯಕಿ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಐತಿಹಾಸಿಕ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ. ಎಡಗೈ ಬ್ಯಾಟಿಂಗ್ ಧನ್ವಂತರಿ ಮಂಧಾನಾ, ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ದಂತಕಥೆ ಸುಜಿ ಬೇಟ್ಸ್ ಅವರನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ.

10 ಎಸೆತಗಳಲ್ಲಿ ನಿರ್ಮಾಣವಾಯ್ತು ವಿಶ್ವ ದಾಖಲೆ!

ಥೈಲ್ಯಾಂಡ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ ೧೦ ಎಸೆತಗಳನ್ನು ಎದುರಿಸಿದ ೩೦ ವರ್ಷದ ಸ್ಮೃತಿ ಮಂಧಾನಾ, ೪ ಬೌಂಡರಿಗಳ ನೆರವಿನಿಂದ ೧೯ ರನ್ ಗಳಿಸಿದರು. ಈ ಪುಟ್ಟ ಇನ್ನಿಂಗ್ಸ್‌ನೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಒಟ್ಟು ರನ್‌ಗಳ ಸಂಖ್ಯೆ ೧೦,೭೫೬ಕ್ಕೆ ಏರಿಕೆಯಾಯಿತು. ಈ ಮೂಲಕ ೧೦,೭೪೦ ರನ್ ಗಳಿಸಿದ್ದ ಸುಜಿ ಬೇಟ್ಸ್ ಅವರನ್ನು ಹಿಂದಿಕ್ಕಿದ ಸ್ಮೃತಿ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಟಾಪ್ ೫ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ:

ಮಿಥಾಲಿ ರಾಜ್ (ಭಾರತ); 10,868 ರನ್‌ಗಳು (ಅಗ್ರಸ್ಥಾನ)

ಸ್ಮೃತಿ ಮಂಧಾನಾ (ಭಾರತ); 10,756 ರನ್‌ಗಳು

ಸುಜಿ ಬೇಟ್ಸ್ (ನ್ಯೂಜಿಲೆಂಡ್); 10,740 ರನ್‌ಗಳು

ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್): 10,273 ರನ್‌ಗಳು

ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್); 10,007 ರನ್‌ಗಳು

ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಸ್ಮೃತಿ ಮಂಧಾನಾಗೆ ಈಗ ಕೇವಲ ೧೧೩ ರನ್‌ಗಳ ಅಗತ್ಯವಿದೆ!

ಮಂಧಾನಾ ಕ್ರಿಕೆಟ್ ಪಯಣದ ಅಂಕಿ-ಅಂಶಗಳು!

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಸ್ಮೃತಿ ಅವರ ಅಂತಾರಾಷ್ಟ್ರೀಯ ಸಾಧನೆ ಇಲ್ಲಿದೆ:

ಟೆಸ್ಟ್ ಕ್ರಿಕೆಟ್: 9 ಪಂದ್ಯಗಳಲ್ಲಿ 2 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 788 ರನ್.

ಏಕದಿನ (ODI): 120 ಪಂದ್ಯಗಳಲ್ಲಿ 14 ಶತಕ ಮತ್ತು 35 ಅರ್ಧಶತಕಗಳ ನೆರವಿನಿಂದ ೫,೪೧೧ ರನ್.

ಟಿ20 ಅಂತರರಾಷ್ಟ್ರೀಯ; 4,557 ರನ್ (1 ಶತಕ ಮತ್ತು 35 ಅರ್ಧಶತಕಗಳು).

ಪಂದ್ಯದ ಪಾದಾರ್ಪಣೆ ಹಾಗೂ ಟಾಸ್ ವಿವರ!

2026ರ ಮಹಿಳಾ ಏಷ್ಯಾ ಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದ ಥೈಲ್ಯಾಂಡ್ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತ ತಂಡದ ಪರ ಪ್ರತೀಕಾ ರಾವಲ್ ಅವರು ಅಂತಾರಾಷ್ಟ್ರೀಯ ಟಿ೨೦ ಕ್ರಿಕೆಟ್‌ಗೆ ಚೊಚ್ಚಲ ಪಾದಾರ್ಪಣೆ (Debut) ಮಾಡಿದರು.

ಇನ್ನೊಂದೆಡೆ, ಥೈಲ್ಯಾಂಡ್ ತಂಡದ ಕಾಯಂ ನಾಯಕಿ ನರುಮೋಲ್ ಚೈವೈ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರಿಂದ, ಹಂಗಾಮಿ ನಾಯಕಿ ತಿಪ್ಚಾ ಪುಟ್ಟವಾಂಗ್ ತಂಡವನ್ನು ಮುನ್ನಡೆಸಿದರು.

ಎರಡೂ ತಂಡಗಳ ಆಡುವ 11ರ ಬಳಗ!

ಟೀಮ್ ಇಂಡಿಯಾ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಫಾಲಿ ವರ್ಮಾ, ಸ್ಮೃತಿ ಮಂಧಾನಾ, ಪ್ರತೀಕಾ ರಾವಲ್, ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಎನ್. ಶ್ರೀ ಚರಣಿ, ಕ್ರಾಂತಿ ಗೌಡ್ ಮತ್ತು ನಂದಿನಿ ಶರ್ಮಾ.

ಥೈಲ್ಯಾಂಡ್ ತಂಡ: ತಿಪ್ಚಾ ಪುಟ್ಟವಾಂಗ್ (ನಾಯಕಿ), ನತ್ತಕನ್ ಚಂತಮ್, ನನ್ನಪತ್ ಕೊಂಚರೊಯೆಂಕೈ (ವಿಕೆಟ್‌ಕೀಪರ್), ಚನಿದಾ ಸುಟ್ಟಿರುವಾಂಗ್, ಸುಲೀಪೋರ್ನ್ ಲಾವೊಮಿ, ಒನ್ನಿಚಾ ಕಮ್‌ಚೊಂಫು, ಫನ್ನಿತಾ ಮಾಯಾ, ಅಫಿಸಾರ ಸುವಾಂಚೊಂರಾಥೀ, ಸುನಿದಾ ಚತುರೊಂಗಟನಾನ್, ಕೆಶಿನ್ಯಾ ಫೊಂಗ್ಪಾಪಾಟ್ ಮತ್ತು ಚಾರ್ಯವೇಟ್ ಬೂನ್ಸುಖ್.

ಏಷ್ಯಾ ಕಪ್ ಆರಂಭದಲ್ಲೇ ಮಂಧಾನಾ ಬರೆದಿರುವ ಈ ವಿಶ್ವ ದಾಖಲೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು, ಭಾರತ ತಂಡವು ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಓವರ್‌ನಲ್ಲಿ 6, 6, 6, 6, 6, 6! 26 ಎಸೆತಗಳಲ್ಲಿ 77 ರನ್ ಚಚ್ಚಿದ ಅಭಿಷೇಕ್ ಶರ್ಮಾ..!
ಕ್ಯಾಪ್ಟನ್ ವೈಭವ್ ಸೂರ್ಯವಂಶಿ! ದುಲೀಪ್ ಟ್ರೋಫಿಯಲ್ಲಿ ಶಮಿ, ಮುಕೇಶ್‌ ಅಂತಹ ದಿಗ್ಗಜರಿಗೇ ಬಾಸ್