ಮತ್ತೆ ಆಯ್ಕೆ ಸಮಿತಿ ಕಾಲೆಳೆದ ಯುವರಾಜ್ ಸಿಂಗ್

By Web Desk  |  First Published Nov 5, 2019, 4:51 PM IST

ಟೀಂ ಇಂಡಿಯಾಗೆ ಉತ್ತಮ ಆಯ್ಕೆ ಸಮಿತಿಯ ಅವಶ್ಯಕತೆಯಿದೆ ಎನ್ನುವ ಮೂಲಕ ಯುವರಾಜ್ ಸಿಂಗ್, ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆಯ ಕಾಲೆಳೆದಿದ್ದಾರೆ. ವಿಜಯ್ ಶಂಕರ್ ವಿಶ್ವಕಪ್ ತಂಡದಲ್ಲಿ ಅಚ್ಚರಿಯ ಆಯ್ಕೆಯ ಬಗ್ಗೆಯೂ ತುಟಿಬಿಚ್ಚಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಮುಂಬೈ(ನ.05): ಭಾರತದ ಮಾಜಿ ಕ್ರಿಕೆ​ಟಿಗ ಯುವ​ರಾಜ್‌ ಸಿಂಗ್‌ ಸೋಮ​ವಾರ ಎಂ.ಎಸ್‌.ಕೆ.​ಪ್ರ​ಸಾದ್‌ ನೇತೃ​ತ್ವದ ಬಿಸಿ​ಸಿಐ ಆಯ್ಕೆ ಸಮಿತಿ ವಿರುದ್ಧ ಹರಿ​ಹಾಯ್ದರು.ಭಾರತ ತಂಡಕ್ಕೆ ಉತ್ತಮ ಆಯ್ಕೆಗಾರರ ಅಗ​ತ್ಯ​ವಿದೆ ಎಂದು ಯುವಿ ಅಭಿ​ಪ್ರಾ​ಯಿ​ಸಿ​ದರು. ಈ ಮೊದಲು ನಿವೃತ್ತಿ ಹೇಳುವಾಗಲೂ ಆಯ್ಕೆ ಸಮಿತಿ ವಿರುದ್ಧ ಯುವಿ ಕಿಡಿಕಾರಿದ್ದರು. ನಾನು ಯೋ ಯೋ ಟೆಸ್ಟ್ ಉತ್ತೀರ್ಣರಾದರೂ ಆಯ್ಕೆ ಸಮಿತಿ ನನಗೆ ಆಡಲು ಅವಕಾಶ ನೀಡಿರಲಿಲ್ಲ ಎನ್ನುವ ಕಟು ಸತ್ಯವನ್ನು ಹೊರಹಾಕಿದ್ದರು.

ಅದೇ ಸ್ಟೈಲ್, ಅದೇ ಸಿಕ್ಸರ್; ಈತ ಟೀಂ ಇಂಡಿಯಾದ ಜ್ಯೂ.ಯುವರಾಜ್ ಸಿಂಗ್!

Latest Videos

‘ಆಯ್ಕೆಗಾರರ ಕೆಲಸ ಸುಲ​ಭ​ವಲ್ಲ. ಆಧು​ನಿಕ ಕ್ರಿಕೆಟ್‌ನ ಗುಣಮಟ್ಟಕ್ಕೆ ಸರಿ​ಹೊಂದುವ ಆಯ್ಕೆಗಾರರು ಬೇಕಿ​ದ್ದಾರೆ. ಬಿಸಿ​ಸಿಐ ಉತ್ತಮ ವ್ಯಕ್ತಿ​ಗ​ಳನ್ನು ನೇಮಿ​ಸ​ಬೇ​ಕಿದೆ’ ಎಂದು ಯುವ​ರಾಜ್‌ ಹೇಳಿ​ದರು. ‘ಎಷ್ಟೋ ಬಾರಿ ಆಟ​ಗಾ​ರರು ಆಡಲು ಸಾಧ್ಯ​ವಿ​ಲ್ಲ​ದಿ​ದ್ದರೂ, ತಂಡ​ದಲ್ಲಿ ಸ್ಥಾನ ಕಳೆ​ದು​ಕೊ​ಳ್ಳ​ಲಿ​ದ್ದೇವೆ ಎನ್ನುವ ಭಯ​ದೊಂದಿಗೆ ಆಡು​ತ್ತಾರೆ. ಬಿಸಿ​ಸಿಐ ಅಧ್ಯಕ್ಷ ಗಂಗೂಲಿ, ಆಟ​ಗಾ​ರ​ರಲ್ಲಿ ಭಯ ಹೋಗ​ಲಾ​ಡಿ​ಸ​ಲಿ​ದ್ದಾರೆ ಎನ್ನುವ ಭರ​ವಸೆ ಇದೆ’ ಎಂದು ಯುವಿ ಹೇಳಿ​ದ​ರು.

ಹೊಸ ತಂಡ ಕೂಡಿಕೊಂಡ ಯುವಿ; ಅಬ್ಬರಿಸಲು ಸಿಕ್ಸರ್ ಕಿಂಗ್ ರೆಡಿ

ಇನ್ನು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಆಯ್ಕೆ ಎಂಬಂತೆ ವಿಜಯ್ ಶಂಕರ್ ಆಯ್ಕೆ ಹಾಗೂ ಗಾಯದಿಂದ ಚೇತರಿಸಿಕೊಂಡರೂ ತಂಡದಲ್ಲಿ ಅವಕಾಶ ನೀಡದೇ ಇರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯುವಿ, ಕೇವಲ ಮೂರು-ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿ ಆಮೇಲೆ ಕಡೆಗಣಿಸುವುದು ಸರಿಯಲ್ಲ.  ಮೂರ್ನಾಲ್ಕು ಪಂದ್ಯದ ಪ್ರದರ್ಶನದ ಆದಾರದಲ್ಲಿ ಆಟಗಾರನ ಸಾಮರ್ಥ್ಯ ಅಳೆಯುವುದು ಸರಿಯಲ್ಲ, ಇನ್ನಷ್ಟು ಅವಕಾಶ ಬೀಡಬೇಕಿತ್ತು ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವರ್ಷದ ಜೂನ್’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಇದೀಗ ಅಬುದಾಬಿಯಲ್ಲಿ ನಡೆಯಲಿರುವ ಟಿ10 ಲೀಗ್’ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ಇದೇ ನವೆಂಬರ್ 14ರಿಂದ ಟಿ10 ಟೂರ್ನಿಯು ಆರಂಭವಾಗಲಿದೆ.

 

click me!