ಕೊಹ್ಲಿ ಹುಟ್ಟು ಹಬ್ಬಕ್ಕೆ ಭೂತಾನ್‌ನಲ್ಲಿ ಟ್ರಕ್ಕಿಂಗ್; ರೋಚಕ ಕತೆ ಬಿಟ್ಟಿಟ್ಟ ಅನುಷ್ಕಾ!

Published : Nov 05, 2019, 03:19 PM IST
ಕೊಹ್ಲಿ ಹುಟ್ಟು ಹಬ್ಬಕ್ಕೆ ಭೂತಾನ್‌ನಲ್ಲಿ ಟ್ರಕ್ಕಿಂಗ್; ರೋಚಕ ಕತೆ ಬಿಟ್ಟಿಟ್ಟ ಅನುಷ್ಕಾ!

ಸಾರಾಂಶ

ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ ವಿರುಷ್ಕಾ ಜೋಡಿ ಭೂತಾನ್‌ಗೆ ತೆರಳಿದೆ. ಇಲ್ಲಿ ಟ್ರಕ್ಕಿಂಗ್ ಹೊರಟ ಈ ಜೋಡಿ ವಿಶೇಷ ಅನುಭವವನ್ನು ಹಂಚಿಕೊಂಡಿದೆ. ಬರೋಬ್ಬರಿ 8.5 ಕಿ.ಮೀ ನಡಿಗೆ ಮೂಲಕ ತೆರಳಿದ ಕೊಹ್ಲಿ ಹಾಗೂ ಅನುಷ್ಕಾ ದಣಿವಾದಾಗ ಬೆಟ್ಟದ ತುದಿಯಲ್ಲಿದ್ದ ಮನಗೆ ತೆರಳಿದ್ದಾರೆ. ಈ ಕುರಿತು ಅನುಷ್ಕಾ ಶರ್ಮಾ ರೋಚಕ ಕತೆಯೊಂದನ್ನು ತೆರೆದಿಟ್ಟಿದ್ದಾರೆ.

ಭೂತಾನ್(ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭಾರತದೆಲ್ಲೆಡೆ ಆಚರಿಸುತ್ತಿದ್ದಾರೆ. ಸೌತ್ ಆಫ್ರಿಕಾ ಸರಣಿ ಬಳಿಕ ವಿಶ್ರಾಂತಿ ಜಾರಿರುವ ಕೊಹ್ಲಿ, ಬಾಂಗ್ಲಾದೇಶ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದಾರೆ. ಇಂದು(ನ.05) 31ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಟ್ರೆಕ್ಕಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.

 

ಇದನ್ನೂ ಓದಿ: ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಹುಟ್ಟು ಹಬ್ಬದ ಸಂಭ್ರದಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಭೂತಾನ್‌ಗೆ ತೆರಳಿದ್ದಾರೆ. ಇಲ್ಲಿ ಟ್ರೆಕ್ಕಿಂಗ್ ತೆರಳಿದ ಕೊಹ್ಲಿ ಹಾಗೂ ಅನುಷ್ಕಾ, ದಣಿವಾರಿಸಿಕೊಳ್ಳಲು ಅದೇ ದಾರಿಯಲ್ಲಿದ್ದ ಮನೆಯೊಂದಕ್ಕೆ ತೆರಳಿದ್ದಾರೆ. ಬಳಿಕ ದಣಿವಾಗಿದ್ದು, ಕೆಲ ಕಾಲ ವಿಶ್ರಾಂತಿ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಟೀ ಬೇಕೆಂದು ಕೇಳಿದ್ದಾರೆ.

 

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬ; ಶುಭಕೋರಿದ ಟೀಂ ಇಂಡಿಯಾ ಕ್ರಿಕೆಟರ್ಸ್

ತಮ್ಮ ಮನೆಗೆ ಆಗಮಿಸಿರುವುದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅನ್ನೋ ಅರಿವು ಅವರಿಗಿರಲಿಲ್ಲ. ದಣಿದ ಪ್ರವಾಸಿಗರನ್ನು ಅಷ್ಟೇ ಉತ್ತಮವಾಗಿ ನೋಡಿಕೊಂಡ ಮನೆಯವರ ಜೊತೆ ವಿರುಷ್ಕಾ ಜೋಡಿ ಕೆಲ ಹೊತ್ತು ಕಳೆದಿದ್ದಾರೆ. 

4 ತಿಂಗಳ ಹಿಂದೆಯಷ್ಟೇ ಹುಟ್ಟಿದ ದನದ ಕರು ಹಾಗೂ ತಮ್ಮ ಪ್ರಯಾಣದ ಕುರಿತು ಅನುಷ್ಕಾ ಶರ್ಮಾ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. 

 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!