ಇನ್ಮುಂದೆ ಪ್ರತಿ ವರ್ಷ ನಡೆಯುತ್ತೆ ಡೇ ಅಂಡ್ ನೈಟ್ ಟೆಸ್ಟ್

By Web Desk  |  First Published Nov 5, 2019, 4:05 PM IST

ಇನ್ನು ಮುಂದೆ ಭಾರತದಲ್ಲಿ ಪ್ರತಿ ವರ್ಷ ಒಂದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಕೋ​ಲ್ಕ​ತಾ(ನ.05): ಬಿಸಿ​ಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ, ಭಾರತದಲ್ಲಿ ಪ್ರತಿ​ ವರ್ಷ ಹಗ​ಲು-ರಾತ್ರಿ ಟೆಸ್ಟ್‌ ನಡೆ​ಸಲು ನಿರ್ಧ​ರಿ​ಸಿ​ರು​ವು​ದಾಗಿ ತಿಳಿಸಿ​ದ್ದಾರೆ.

‘ನಾವು ಪ್ರತಿ ವರ್ಷ ಭಾರ​ತ​ದಲ್ಲಿ ಒಂದು ಹಗ​ಲು-ರಾತ್ರಿ ಪಂದ್ಯ ನಡೆ​ಸಲು ಖಂಡಿತವಾಗಿಯೂ ಸಕಲ ಪ್ರಯತ್ನ ನಡೆ​ಸ​ಲಿ​ದ್ದೇವೆ. ತಂಡ ವಿದೇಶ ಪ್ರವಾಸಗಳನ್ನು ಕೈಗೊಂಡಾಗ, ಸ್ಥಳೀಯ ಕ್ರಿಕೆಟ್‌ ಮಂಡಳಿ ಜತೆ ಮಾತು​ಕತೆ ನಡೆಸಿ ಒಂದು ಪಂದ್ಯವನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ಆಯೋ​ಜಿ​ಸು​ವಂತೆ ಕೇಳಿ​ಕೊ​ಳ್ಳು​ತ್ತೇವೆ’ ಎಂದು ಗಂಗೂಲಿ ಮಾಧ್ಯ​ಮ​ವೊಂದಕ್ಕೆ ನೀಡಿರುವ ಸಂದ​ರ್ಶ​ನ​ದಲ್ಲಿ ತಿಳಿ​ಸಿದ್ದಾರೆ.

Tap to resize

Latest Videos

ಡೇ ಅಂಡ್ ನೈಟ್ ಟೆಸ್ಟ್: ಕೇವಲ 3 ಸೆಕೆಂಡ್ ದಾದಾ ಮಾತಿಗೆ ಓಕೆ ಎಂದ ಕೊಹ್ಲಿ..!

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ನ.22ರಂದು ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಇದು ಭಾರತದ ಚೊಚ್ಚಲ ಐತಿಹಾಸಿಕ ಹಗಲು-ರಾತ್ರಿಯ ಟೆಸ್ಟ್ ಪಂದ್ಯವಾಗಲಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಡೇ ಅಂಡ್ ನೈಟ್ ಪಂದ್ಯವನ್ನಾಡಲು ಕೇವಲ 3 ಸಕೆಂಡ್’ಗಳಲ್ಲಿ ಒಪ್ಪಿಸಿದ್ದರು.  

ಭಾರತ vs ಬಾಂಗ್ಲಾದೇಶ ಡೇ & ಟೆಸ್ಟ್ ಪಂದ್ಯಕ್ಕೆ ಮೋದಿ, ಸಚಿನ್?

ಇದೇ ವೇಳೆ ಮುಂದಿನ ವರ್ಷ ಟಿ20 ವಿಶ್ವ​ಕಪ್‌ ಬಗ್ಗೆಯೂ ಗಂಗೂಲಿ ಮಾತ​ನಾ​ಡಿದ್ದು, ‘ತಂಡ ಸಕಲ ಸಿದ್ಧತೆಯೊಂದಿಗೆ ಆಸ್ಪ್ರೇ​ಲಿ​ಯಾಕ್ಕೆ ತೆರ​ಳ​ಲಿದೆ. ಐಪಿ​ಎಲ್‌ ಟೂರ್ನಿ ಭಾರ​ತೀಯ ಆಟ​ಗಾ​ರ​ರ ಅಭ್ಯಾಸಕ್ಕೆ ನೆರ​ವಾ​ಗ​ಲಿದೆ’ ಎಂದಿ​ದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದಾದ ಬಳಿಕ ಇದುವರೆಗೂ ಎರಡನೇ ಕಪ್ ಜಯಿಸಲು ಭಾರತ ತಂಡಕ್ಕೆ ಸಾಧ್ಯವಾಗಿಲ್ಲ. ಈ ಬಾರಿ ಆ ಕನಸು ನನಸಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ....

 

click me!