ಕಾಮೆಂಟೇಟರ್ ಬ್ಯಾಟ್ ಮಾಡಬಲ್ಲರು..! ದಿನೇಶ್ ಕಾರ್ತಿಕ್ ಗುಣಗಾನ ಮಾಡಿದ ವಾಸೀಂ ಜಾಫರ್

Published : Jun 18, 2022, 12:05 PM IST
ಕಾಮೆಂಟೇಟರ್ ಬ್ಯಾಟ್ ಮಾಡಬಲ್ಲರು..! ದಿನೇಶ್ ಕಾರ್ತಿಕ್ ಗುಣಗಾನ ಮಾಡಿದ ವಾಸೀಂ ಜಾಫರ್

ಸಾರಾಂಶ

* ದಕ್ಷಿಣ ಆಫ್ರಿಕಾ ಎದುರು 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ * ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ದಿನೇಶ್ ಕಾರ್ತಿಕ್ * ದಿನೇಶ್ ಕಾರ್ತಿಕ್ ಪ್ರದರ್ಶನವನ್ನು ಕೊಂಡಾಡಿದ ವಾಸೀಂ ಜಾಫರ್

ಮುಂಬೈ(ಜೂ.18): ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟಿ20 ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ (Wasim Jaffer) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡವು ಸರಣಿಯಲ್ಲಿ 1-2ರ ಹಿನ್ನೆಡೆಯಲ್ಲಿತ್ತು. ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ರಿಷಭ್ ಪಂತ್ ಪಡೆಗೆ ಗೆಲುವು ಅನಿವಾರ್ಯ ಎನಿಸಿತ್ತು. ಮಹತ್ವದ ಪಂದ್ಯದಲ್ಲಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕಾರ್ತಿಕ್‌ ಕುರಿತಂತೆ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಕೂಡಾ ಬ್ಯಾಟ್ ಮಾಡಬಲ್ಲರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದಾಗಿ ದಿನೇಶ್ ಕಾರ್ತಿಕ್‌ (Dinesh Karthik) ಟಿವಿ ವಾಹಿನಿಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಗಮನ ಸೆಳೆದಿದ್ದರು. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾಗೆ (Team India) ಕಮ್‌ಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್‌ಗೆ ಮೊದಲ 3 ಪಂದ್ಯಗಳಲ್ಲಿ ಮಿಂಚಲು ಸೂಕ್ತ ಅವಕಾಶ ಲಭಿಸಿರಲಿಲ್ಲ. ಆದರೆ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 13 ಓವರ್‌ಗೆ 81 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದ ತಮಿಳುನಾಡು ಮೂಲದ ವಿಕೆಟ್ ಕೀಪರ್‌ ಬ್ಯಾಟರ್‌, ಮೊದಲ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ಐಪಿಎಲ್‌ನ ಫಾರ್ಮ್‌ ಮುಂದುವರೆಸಿದ ದಿನೇಶ್ ಕಾರ್ತಿಕ್, ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ದಿನೇಶ್ ಕಾರ್ತಿಕ್‌ಗೆ ಉತ್ತಮ ಸಾಥ್ ನೀಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕೇವಲ 31 ಎಸೆತಗಳಲ್ಲಿ 46 ರನ್ ಬಾರಿಸಿದರು. ಪರಿಣಾಮ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ ಕೇವಲ 6 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 87 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 82 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿತು.

ಕಾಕಾತಾಳೀಯ ಎನ್ನುವಂತೆ ದಿನೇಶ್ ಕಾರ್ತಿಕ್, ಭಾರತ ತಂಡವು 2006ರಲ್ಲಿ ಆಡಿದ ಚೊಚ್ಚಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಇದಾದ ಬಳಿಕ 16 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ದ ಚೊಚ್ಚಲ ಟಿ20 ಅರ್ಧಶತಕ ಸಿಡಿಸಿ ಎರಡನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. 

IND vs SA ಡಿಕೆ, ಎಕೆ ಆಟ ಸೂಪರ್, ಭಾರತ ಜಯದ ದರ್ಬಾರ್!

ಇನ್ನು ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಪ್ರದರ್ಶನ ಹಾಗೂ ಫಿಟ್ನೆಸ್ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ESPNcricinfo ಜತೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ ತಂಡವು ಆಡಿದ ಚೊಚ್ಚಲ ಟಿ20 ಪಂದ್ಯವು ನನಗಿನ್ನೂ ನೆನಪಿದೆ. ಯಾಕೆಂದರೇ ನಾನೂ ಕೂಡಾ ಭಾರತ ತಂಡದಲ್ಲಿದ್ದೆ. ಆ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿತ್ತು. ಸಾಕಷ್ಟು ವರ್ಷಗಳ ಬಳಿಕ ಕಾರ್ತಿಕ್ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಅರ್ಧಶತಕ ಸಿಡಿಸಿದ್ದಾರೆ. ಅವರ ಫಿಟ್ನೆಸ್ ಹಾಗೂ ಫಾರ್ಮ್‌ ಜತೆಗೆ ಕ್ರಿಕೆಟ್ ಮೇಲಿನ ಒಲವು ಮತ್ತು ಕೊನೆಯ ಕ್ಷಣದವರೆಗೂ ಹೋರಾಡುವ ಗುಣ ಇಷ್ಟವಾಗುತ್ತದೆ. ವಯಸ್ಸನ್ನು ಗಮನದಲ್ಲಿಟ್ಟು ತಮಗೆ ಎರಡನೇ ಅವಕಾಶ ಸಿಗುವುದು ಸುಲಭವಲ್ಲ ಎನ್ನುವುದು ಅವರಿಗೂ ಗೊತ್ತಿದೆ. ಹೀಗಿದ್ದೂ ಕೊನೆಯ ಕ್ಷಣದವರೆಗೂ ಹೋರಾಡುವ ಅವರ ಗುಣ ನನಗೆ ಇಷ್ಟವಾಗುತ್ತದೆ ಎಂದು ಜಾಫರ್ ಹೇಳಿದ್ದಾರೆ.

ಅವರು ತಂಡದೊಳಗೆ ಹಾಗೂ ತಂಡದ ಹೊರಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಕಾರ್ತಿಕ್ 360 ಡಿಗ್ರಿಯಲ್ಲಿ ಚೆಂಡನ್ನಟ್ಟುವ ಮೂಲಕ ಮಿಂಚಿದ್ದಾರೆ. ಭಾರತ ತಂಡವು ಮೊದಲ 10 ಓವರ್‌ಗಳಲ್ಲಿ ಹಿನ್ನೆಡೆ ಅನುಭವಿಸಿತ್ತು. ಅದರೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಿಂದಾಗಿಯೇ ಟೀಂ ಇಂಡಿಯಾ 170ರ ಆಸುಪಾಸು ತಲುಪಲು ಸಾಧ್ಯವಾಯಿತು. ಅವರು ಕಾಮೆಂಟೇಟರ್‌ ಕೂಡಾ ಬ್ಯಾಟ್ ಮಾಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅವರು ಬ್ಯಾಟಿಂಗ್ ಮಾಡದಿದ್ದಾಗ ಕಾಮೆಂಟೇಟರಿ ಮಾಡುತ್ತಿದ್ದರು. ಆದರೆ ಈಗ ಅವರ ಬ್ಯಾಟ್ ಮಾತಾಡುತ್ತಿದೆ. ಅವರ ಪ್ರದರ್ಶನ ನನಗಂತೂ ಖುಷಿಕೊಟ್ಟಿದೆ ಎಂದು ಜಾಫರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?