
ಬೆಂಗಳೂರು(ಜೂ.18): 2022ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ (Ranji Trophy Semi Final) ಅಮೋಘ ಪ್ರದರ್ಶನ ಮುಂದುವರೆಸಿರುವ 41 ಬಾರಿಯ ಚಾಂಪಿಯನ್ ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳು ಫೈನಲ್‌ನತ್ತ ದಾಪುಗಾಲಿಡಲಾರಂಭಿಸಿದೆ. ಉತ್ತರ ಪ್ರದೇಶ ಎದುರು ಮುಂಬೈ ಪ್ರಾಬಲ್ಯ ಮರೆದಿದ್ದರೇ, ಬೆಂಗಾಲ್ ಎದುರು ಮಧ್ಯಪ್ರದೇಶ ಗೆಲುವಿನತ್ತ ಮುಖ ಮಾಡಿದೆ. ಪವಾಡ ನಡೆದರೇ ಮಾತ್ರ ಬೆಂಗಾಲ್ ತಂಡವು ಫೈನಲ್ ಪ್ರವೇಶಿಸಲು ಸಾಧ್ಯ. ಕಠಿಣ ಸವಾಲನ್ನು ಬೆಂಗಾಲ್ ಮೆಟ್ಟಿ ನಿಲ್ಲಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಮುಂಬೈಗೆ 662 ರನ್ ಬೃಹತ್ ಮುನ್ನಡೆ
2022ರ ಸಾಲಿನ ರಣಜಿ ಟ್ರೋಫಿ 2ನೇ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಬೃಹತ್ ಮುನ್ನಡೆ ಸಾಧಿಸಿದ್ದು, ಫೈನಲ್ ಪ್ರವೇಶದ ನಿರೀಕ್ಷೆಯಲ್ಲಿದೆ. ತಂಡ ಸದ್ಯ 4 ವಿಕೆಟ್‌ಗೆ 449 ರನ್ ಕಲೆ ಹಾಕಿದ್ದು, 662 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.
3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 133 ರನ್ ಕಲೆ ಹಾಕಿದ್ದ ತಂಡ ಶುಕ್ರವಾರವೂ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಮೊದಲ ಇನ್ನಿಂಗ್‌್ಸನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಸತತ 2ನೇ ಶತಕ ಬಾರಿಸಿದ್ದು, 181ಕ್ಕೆ ವಿಕೆಟ್ ಒಪ್ಪಿಸಿದರು. ಅಮನ್ ಜಾಫರ್ 127 ರನ್ ಸಿಡಿಸಿದರು. ಯುಪಿಯ 9 ಆಟಗಾರರು ಬೌಲಿಂಗ್ ಮಾಡಿದರೂ ಮುಂಬೈ ಓಟಕ್ಕೆ ನಿಯಂತ್ರಣ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು ಮುಂಬೈನ ಮೊದಲ ಇನ್ನಿಂಗ್‌್ಸನ 393 ರನ್‌ಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಉ.ಪ್ರದೇಶ ಕೇವಲ 180ಕ್ಕೆ ಆಲೌಟಾಗಿತ್ತು. ಮೊದಲ ಇನ್ನಿಂಗ್‌್ಸನಲ್ಲಿ 213 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು.
ಬೆಂಗಾಲ್ 350 ರನ್ ಗುರಿ, 96ಕ್ಕೆ 4 ವಿಕೆಟ್
ಬೆಂಗಳೂರು: 2022ರ ಸಾಲಿನ ರಣಜಿ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಬೆಂಗಾಲ್ ಸೋಲಿನ ಸುಳಿಗೆ ಸಿಲುಕಿದೆ. ಗೆಲುವಿಗೆ 350 ರನ್ ಗುರಿ ಪಡೆದಿರುವ ಬೆಂಗಾಲ್ 4 ವಿಕೆಟ್‌ಗೆ 96 ರನ್ ಕಲೆ ಹಾಕಿದ್ದು, ಪಂದ್ಯದ ಕೊನೆ ದಿನವಾದ ಶನಿವಾರ ಇನ್ನೂ ಇನ್ನೂ 254 ರನ್ ಗಳಿಸಬೇಕಿದೆ. ಅಭಿಮನ್ಯು ಈಶ್ವರನ್ ಅಜೇಯ 52 ರನ್ ಗಳಿಸಿದ್ದು, ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಹೋರಾಡುತ್ತಿದ್ದಾರೆ.
Ranji Trophy: ಬೆಂಗಾಲ್ 273ಕ್ಕೆ ಆಲೌಟ್, ಮಧ್ಯಪ್ರದೇಶ ಸ್ಪಷ್ಟ ಮೇಲುಗೈ
ಇದಕ್ಕೂ ಮೊದಲು 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 163 ರನ್ ಗಳಿಸಿದ್ದ ಮ.ಪ್ರದೇಶ ಶುಕ್ರವಾರ 281ಕ್ಕೆ ಆಲೌಟ್ ಆಯಿತು. ಶ್ರಿವಾತ್ಸವ 82 ರನ್ ಸಿಡಿಸಿದರು. ಮೊದಲ ಇನ್ನಿಂಗ್‌್ಸನಲ್ಲಿ ಶತಕ ಸಿಡಿಸಿದ್ದ ಶಾಬಾಜ್ ಬೌಲಿಂಗ್‌ನಲ್ಲೂ ಮಿಂಚಿ 5 ವಿಕೆಟ್ ಕಿತ್ತರೆ, ಪ್ರಮಾಣಿಕ್ 4 ವಿಕೆಟ್ ಪಡೆದರು. ಈ ಮೊದಲು ಮಧ್ಯಪ್ರದೇಶ ಮೊದಲ ಇನ್ನಿಂಗ್‌್ಸನಲ್ಲಿ 341 ರನ್ ಕಲೆ ಹಾಕಿದ್ದರೆ, ಬೆಂಗಾಲ್ 273ಕ್ಕೆ ಆಲೌಟಾಗಿ 68 ರನ್ ಹಿನ್ನಡೆ ಅನುಭವಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.