ನಮ್ಮ ಬೆಳಗಾವೀಲಿ MS Dhoni ಕ್ರಿಕೆಟ್‌ ಅಕಾಡೆಮಿ ಆರಂಭ..!

Published : Jun 18, 2022, 10:48 AM ISTUpdated : Jun 18, 2022, 10:54 AM IST
ನಮ್ಮ ಬೆಳಗಾವೀಲಿ MS Dhoni ಕ್ರಿಕೆಟ್‌ ಅಕಾಡೆಮಿ ಆರಂಭ..!

ಸಾರಾಂಶ

* ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ ಎಂ ಎಸ್ ಧೋನಿ * ಬೆಳಗಾವಿಯ ಜೈನ್‌ ಹೆರಿಟೇಕ್‌ ಸ್ಕೂಲ್‌ನಲ್ಲಿ ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಆರಂಭ * ಈಗಾಗಲೇ ದೇಶದಾದ್ಯಂತ ವಿವಿಧ ನಗರಗಳಲ್ಲಿ 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿ ಸ್ಥಾಪನೆ

ಬೆಳಗಾವಿ(ಜೂ.18): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ (MS Dhoni) ಅವರ ಕ್ರಿಕೆಟ್‌ ಅಕಾಡೆಮಿಯೊಂದು ಬೆಳಗಾವಿಯ ಜೈನ್‌ ಹೆರಿಟೇಜ್ ಸ್ಕೂಲ್‌ನಲ್ಲಿ (JHS Belagavi) ಆರಂಭವಾಗಿದೆ. ಧೋನಿ ಹೆಸರಿನಲ್ಲಿ ಈಗಾಗಲೇ ಭಾರತದ ಹಲವು ನಗರಗಳು, ಇಂಗ್ಲೆಂಡ್‌, ಕೆನಡಾ ಸೇರಿ ವಿಶ್ವದ 60 ಕಡೆಗಳಲ್ಲಿ ಅಕಾಡೆಮಿ ಇದ್ದು, ವಿಶ್ವರ್ಜೆಯ ಕೋಚಿಂಗ್‌ ವ್ಯವಸ್ಥೆ, ಎಲ್ಲಾ ಕ್ರೀಡೆಗಳ ತರಬೇತಿ ಕೇಂದ್ರಗಳು ಒಳಗೊಂಡಿವೆ ಎಂದು ಆಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮಿಹಿರ್‌ ದಿವಾಕರ್‌ ಮಾಹಿತಿ ನೀಡಿದ್ದಾರೆ. 

ನಾವು ಈಗಾಗಲೇ ದೇಶದಾದ್ಯಂತ ವಿವಿಧ ನಗರಗಳಲ್ಲಿ 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಿದ್ದೇವೆ. ಭಾರತದೊಳಗೆ ಮಾತ್ರವಲ್ಲದೇ ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್‌ನಲ್ಲೂ ನಮ್ಮ ಅಕಾಡೆಮಿಗಳು ಆರಂಭವಾಗಿವೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಸೌಲಭ್ಯಗಳಿದ್ದು, ಅತ್ಯುತ್ತಮ ಕೋಚ್‌ಗಳನ್ನು ಹೊಂದಿದೆ. ನಾನು ನಿಧಾನವಾಗಿ ಜಾಗತಿಕ ಮಟ್ಟದಲ್ಲಿ ನಮ್ಮ ಅಕಾಡೆಮಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ ಎಂದು ಮಿಹಿರ್‌ ದಿವಾಕರ್‌ ತಿಳಿಸಿದ್ದಾರೆ. 

ಟೀಂ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ಕ್ರಿಕೆಟ್ ಅಕಾಡೆಮಿಗಳು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಅಕಾಡೆಮಿಯನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಕಾಡೆಮಿ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಈ ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್, ಆರ್ಚರಿ, ಟೇಬಲ್ ಟೆನಿಸ್ ಹಾಗೂ ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಕಾರ್ಯಚರಣೆಗಳು ಮಹೇಂದ್ರ ಸಿಂಗ್ ಧೋನಿಯವರ ಮಾರ್ಗದರ್ಶನದಲ್ಲಿಯೇ ನಡೆಯಲಿದೆ ಎಂದು ಆಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮಿಹಿರ್‌ ದಿವಾಕರ್‌ ಮಾಹಿತಿ ನೀಡಿದ್ದಾರೆ. 

ಬೆಂಗಳೂರಿಗೆ (Bengaluru) ಹೋಗಿ ಬರಲು ಕಷ್ಟವಾಗುವುದರಿಂದ ಇಲ್ಲಿನ ಸಮೀಪದ ಯುವಕರಿಗೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಬೆಳಗಾವಿಯಲ್ಲಿ (Belagavi) ಅಕಾಡೆಮಿ ತೆರೆಯಲಾಗಿದೆ. ಬೆಳಗಾವಿ ಹಾಗೂ ಇದರ ಸುತ್ತಮುತ್ತಲಿನ ಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಪ್ರತಿಭೆಯಿದ್ದು, ದೂರದ ಬೆಂಗಳೂರಿಗೆ ಹೋಗಿ ಕಲಿಯಲು ಸಾಧ್ಯವಾಗದೇ ಅವಕಾಶವಂಚಿತರಾಗುತ್ತಿದ್ದರು. ಆದರೆ ಇದೀಗ ದೇಶದ ಅತ್ಯುನ್ನತ ಕೋಚ್‌ಗಳ ಗರಡಿಯಲ್ಲಿ ಈ ಭಾಗದ ಕ್ರೀಡಾಪಟುಗಳು ತರಬೇತಿ ಪಡೆಯಲಿದ್ದಾರೆ ಎಂದು ಮಿಹಿರ್ ತಿಳಿಸಿದ್ದಾರೆ.

ಐಸಿಸಿ ಮಾಧ್ಯಮ ಹಕ್ಕು: 8 ವರ್ಷಗಳ 711 ಪಂದ್ಯಕ್ಕೆ ಶೀಘ್ರ ಹರಾಜು

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯು 2024ರಿಂದ 8 ವರ್ಷಗಳ ಅವಧಿಗೆ ಮಾಧ್ಯಮ ಹಕ್ಕು ಹರಾಜು ಮಾಡಲು ನಿರ್ಧರಿಸಿದ್ದು, ಜೂನ್‌ 20ಕ್ಕೆ ಟೆಂಡರ್‌ ಬಿಡುಗಡೆ ಮಾಡಲಿದೆ. ಐಸಿಸಿಯು ಮುಂದಿನ 8 ವರ್ಷಗಳಲ್ಲಿ ಒಟ್ಟು 711 ಪಂದ್ಯಗಳನ್ನು ಆಯೋಜಿಸಲಿದೆ. ಇದರಲ್ಲಿ ಪುರುಷರ ಏಕದಿನ, ಟಿ20 ವಿಶ್ವಕಪ್‌, ಮಹಿಳೆಯರ ವಿಶ್ವಕಪ್‌, ಅಂಡರ್‌-19 ಪುರುಷ ಹಾಗೂ ಮಹಿಳಾ ಪಂದ್ಯಗಳೂ ಇರಲಿವೆ. 

6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!

ಬಿಸಿಸಿಐ ವಿವಿಧ ಪ್ಯಾಕೇಜ್‌ಗಳ ಮೂಲಕ ಪ್ರಸಾರ ಹಕ್ಕು ಹರಾಜು ಮಾಡಿ ಯಶಸ್ವಿಯಾಗಿದ್ದರಿಂದ ಐಸಿಸಿಯೂ ಅದೇ ನಿರ್ಧಾರಕ್ಕೆ ಬಂದಿದ್ದು, 3 ಪ್ಯಾಕೇಜ್‌ಗಳಲ್ಲಿ ಹರಾಜು ನಡೆಸಲಿದೆ. ಟೀವಿ ಹಕ್ಕು, ಡಿಜಿಟಲ್‌ ಹಕ್ಕು ಹಾಗೂ ಟೀವಿ, ಡಿಜಿಟಲ್‌ ಜಂಟಿ ಹಕ್ಕು ಎಂದು 3 ಪ್ಯಾಕೇಜ್‌ಗಳಾಗಿ ವಿಂಗಡಿಸಿದೆ. ಪುರುಷರ ವಿಭಾಗದಲ್ಲಿ 4 ವರ್ಷದ ಅವಧಿ, 8 ವರ್ಷ ಅವಧಿ ಎಂದು 2 ವಿಭಾಗದಲ್ಲಿ ಹರಾಜು ನಡೆಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!