ಐಪಿಎಲ್ ಆರ್‌ಸಿಬಿ ಆಫರ್‌ ರಿಜೆಕ್ಟ್‌ ಮಾಡಿದ ಸ್ಟಾರ್ ಆಟಗಾರನೀಗ ಹೊಟ್ಟೆಪಾಡಿಗಾಗಿ ಅಕೌಂಟ್ಸ್‌ ಮ್ಯಾನೇಜರ್ ಆಗಿ ಕೆಲಸ..!

By Naveen Kodase  |  First Published Sep 3, 2024, 4:04 PM IST

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗರೊಬ್ಬರು ತಮಗೆ ಬಂದ ಬಂಪರ್ ಐಪಿಎಲ್ ಆಫರ್ ಕೈಬಿಟ್ಟು ದೊಡ್ಡ ಸಂಕಷ್ಟವನ್ನೇ ಮೈಮೇಲೆ ಎಳೆದುಕೊಂಡ ಕಥೆ ಇದು. 


ಬೆಂಗಳೂರು: ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತೀಯ ಆಟಗಾರರು ಮಾತ್ರವಲ್ಲದೇ ಜಗತ್ತಿನಾದ್ಯಂತ ಇರುವ ವಿದೇಶಿ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಓರ್ವ ಸ್ಟಾರ್ ಆಟಗಾರ ಐಪಿಎಲ್ ಆಟಗಾರ, ಇದೀಗ ಹೊಟ್ಟೆಪಾಡಿಗಾಗಿ ಅಕೌಂಟ್ಸ್‌ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಾರಾತ ಎನ್ನುವ ನಿಮ್ಮ ಕುತೂಹಲವನ್ನು ಇಂದು ತಣಿಸುತ್ತೇವೆ ನೋಡಿ.

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಜನಪ್ರಿಯ ಟಿ20 ಲೀಗ್‌ಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎಂದು ಕರೆಸಿಕೊಳ್ಳುವ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಒಂದು ಐಪಿಎಲ್ ಟೂರ್ನಿಯಲ್ಲಿ ಮಿಂಚಿದರೇ, ಆ ಕ್ರಿಕೆಟಿಗನ ಬದುಕು ದಿನಬೆಳಕಾಗುವಷ್ಟರಲ್ಲಿ ಬದಲಾಗಿ ಹೋಗಿರುತ್ತದೆ. ಈಗಾಗಲೇ ಹಲವು ಆಟಗಾರರು ಐಪಿಎಲ್‌ನಲ್ಲಿ ಮಿಂಚಿ ತಮ್ಮ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ.

Latest Videos

undefined

ಐಪಿಎಲ್ 2025: ರೂಲ್ಸ್‌ನಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್..!

ಆದರೆ ಇಲ್ಲೊಬ್ಬ ಸ್ಟಾರ್ ಕ್ರಿಕೆಟಿಗ ಐಪಿಎಲ್‌ ಆಡುವ ಆಫರ್‌ ಬಂದರೂ ಅದನ್ನು ತಿರಸ್ಕರಿಸಿ ಇದೀಗ ಜೀವನ ನಿರ್ವಹಣೆಗಾಗಿ ಅಕೌಂಟ್ಸ್‌ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಮಾಡುತ್ತಿರುವ ಆಟಗಾರ ಬೇರೆ ಯಾರೂ ಅಲ್ಲ, ಆಸೀಸ್‌ ಮಾಜಿ ಎಡಗೈ ವೇಗಿ ನೇಥನ್ ಬ್ರ್ಯಾಕನ್. ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯುತ್ತಮ ಎಡಗೈ ವೇಗಿಗಳ ಪೈಕಿ ಒಬ್ಬರೆನಿಸಿಕೊಂಡಿದ್ದ ನೇಥನ್ ಬ್ರ್ಯಾಕನ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 1.3 ಕೋಟಿ ರುಪಾಯಿ ಆಫರ್ ಕೊಟ್ಟು ಖರೀದಿಸಿತ್ತು. ಆದರೆ ಆರ್‌ಸಿಬಿ ಆಫರ್‌ ತಿರಸ್ಕರಿಸಿದ ಬ್ರ್ಯಾಕನ್, ಆ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಲಭ್ಯರಾದರು. ಮೊಣಕಾಲು ಗಾಯಕ್ಕೊಳಗಾಗಿದ್ದರಿಂದ ಅನಿವಾರ್ಯವಾಗಿ ಬ್ರ್ಯಾಕನ್‌ಗೆ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ.

ಆದರೆ ಈ ಒಂದು ನಿರ್ಧಾರ ಬ್ರ್ಯಾಕನ್ ಅವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಇನ್ನು ಆ ನಂತರದ ವರ್ಷಗಳಲ್ಲಿ ಐಪಿಎಲ್‌ನ ಯಾವೊಂದು ಫ್ರಾಂಚೈಸಿಯು ನೇಥನ್ ಬ್ರ್ಯಾಕನ್ ಅವರನ್ನು ಖರೀದಿಸಲು ಮನಸ್ಸು ಮಾಡಲಿಲ್ಲ. ಸದ್ಯ ಕೆಲ ವರದಿಗಳ ಪ್ರಕಾರ, 45 ವರ್ಷದ ಬ್ರ್ಯಾಕನ್ ಇದೀಗ ಜೀವನ ನಿರ್ವಹಣೆಗಾಗಿ ಅಕೌಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

"ಎಲ್ಲಾ ಕನ್ನಡಿಗರಿಗೂ..": ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಕನ್ನಡದಲ್ಲೇ ಖುಷಿ ಹಂಚಿಕೊಂಡ ಸಮಿತ್ ದ್ರಾವಿಡ್

ಆಸೀಸ್ ಪರ ಎರಡು ವಿಶ್ವಕಪ್ ಗೆದ್ದ ಆಟಗಾರ ಬ್ರ್ಯಾಕನ್: 

ಆಸ್ಟ್ರೇಲಿಯಾ ಎಡಗೈ ಮಧ್ಯಮ ವೇಗದ ಬೌಲರ್ ನೇಥನ್ ಬ್ರ್ಯಾಕನ್, ತಾವು ಆಡುವ ಸಮಯದಲ್ಲಿ ತಮ್ಮ ಕರಾರುವಕ್ಕಾದ ಯಾರ್ಕರ್‌ಗೆ ಹೆಸರುವಾಸಿಯಾಗಿದ್ದರು. ನೇಥನ್ ಬ್ರ್ಯಾಕನ್ ಅವರು 2003 ಹಾಗೂ 2007ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯಾ ಪರ ಮೂರು ಮಾದರಿಯಲ್ಲೂ ಕಣಕ್ಕಿಳಿದ ಬ್ರ್ಯಾಕನ್ 200ಕ್ಕೂ ಅಧಿಕ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಹ್ವಾಗ್ ಕಾಡಿದ ಬ್ರ್ಯಾಕನ್:

ಅದರಲ್ಲೂ ಟೀಂ ಇಂಡಿಯಾದ ಸ್ಪೋಟಕ ಬ್ಯಾಟರ್‌ ಆಗಿದ್ದ ವಿರೇಂದ್ರ ಸೆಹ್ವಾಗ್‌ ಅವರನ್ನು ಬ್ರ್ಯಾಕನ್ ಇನ್ನಿಲ್ಲದಂತೆ ಕಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ರ್ಯಾಕನ್ ಹಾಗೂ ಸೆಹ್ವಾಗ್ 16 ಬಾರಿ ಮುಖಾಮುಖಿಯಾಗಿದ್ದರು. ಈ ಪೈಕಿ 7 ಬಾರಿ ಸೆಹ್ವಾಗ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ
 

click me!