
ಬೆಂಗಳೂರು(ಫೆ.28): ಐಪಿಎಲ್ ಟೂರ್ನಿ ಆರಂಭವಾದರೆ ಭರಪೂರ ಮನರಂಜನೆ. ಬ್ಯಾಟ್ಸ್‌ಮನ್‌ಗಳ ಅಬ್ಬರ, ಬೌಲರ್‌ಗಳ ಪರಾಕ್ರಮ, ಮೈದಾನದಲ್ಲಿ ಸೆಲೆಬ್ರೇಷನ್, ಅಭಿಮಾನಿಗಳ ಜೋಶ್ ಎಲ್ಲವೂ ಕೂಡ ಐಪಿಎಲ್ ಕಳೆ ಹೆಚ್ಚೆಸುತ್ತೆ. ಬೌಂಡರಿ, ಸಿಕ್ಸರ್ ಸಿಡಿಸಿ ಸ್ಥಿರ ಪ್ರದರ್ಶನ ನೀಡೋ ಬ್ಯಾಟ್ಸ್‌ಮನ್‌ಗಳು ಆರಂಜ್ ಕ್ಯಾಪ್ ಪ್ರಶಸ್ತಿಗೆ ಭಾಜನರಾಗುತ್ತಾರೆ. ಪ್ರತಿ ಆವೃತ್ತಿಯಲ್ಲಿ ಗರಿಷ್ಠ ರನ್ ಸಿಡಿದ ಬ್ಯಾಟ್ಸ್‌ಮನ್ ಈ ಪ್ರಶಸ್ತಿ ಪಡೆದುಕೊಳ್ಳುತಾರೆ. ಆದರೆ 5 ಬಾರಿ ತಂಡದ ನಾಯಕರೇ ಆರೇಂಜ್ ಕ್ಯಾಪ್ ಗೆದ್ದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: IPL 2019: ಐಸಿಸಿ ಭ್ರಷ್ಟಾರ ನಿಗ್ರಹ ದಳಕ್ಕೆ ಬ್ರೇಕ್ -3 ಕೋಟಿ ಉಳಿತಾಯ!
ಸಚಿನ್ ತೆಂಡೂಲ್ಕರ್(2011)
2011ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಅದ್ಬುತ ಪ್ರದರ್ಶನ ನೀಡಿದ್ದಾರೆ. 2011ರಲ್ಲಿ ಸಚಿನ್ 618 ರನ್ ಸಿಡಿಸಿದ್ದರು. ಈ ಆವೃತ್ತಿಯಲ್ಲಿ ಸಚಿನ್ 5 ಅರ್ಧಶತಕ ಹಾಗೂ, ಅಜೇಯ 89 ರನ್ ಬೆಸ್ಟ್ ಸ್ಕೋರ್ ಸಿಡಿಸಿದ್ದರು. ಈ ಮೂಲಕ ಆರೇಂಜ್ ಕ್ಯಾಪ್ ಪಡೆದ ಮೊದಲ ನಾಯಕ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು.
ಡೇವಿಡ್ ವಾರ್ನರ್(2015)
2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ. ಆದರೆ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಿಂದ 562 ರನ್ ಸಿಡಿಸಿ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡರು.
ಇದನ್ನೂ ಓದಿ: ಐಪಿಎಲ್ ಪ್ಲೇ-ಆಫ್ ವೇಳೆ ಮಹಿಳಾ ಪ್ರದರ್ಶನ ಪಂದ್ಯ
ವಿರಾಟ್ ಕೊಹ್ಲಿ(2016)
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ 2016ರಲ್ಲಿ ದಾಖಲೆ ಪ್ರದರ್ಶನ ನೀಡಿದ್ದಾರೆ. ಒಂದೇ ಆವೃತ್ತಿಯಲ್ಲಿ 4 ಶತಕ ಹಾಗೂ 7 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 973 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. ಗರಿಷ್ಠ ರನ್ ಸಿಡಿಸಿ ಆರೇಂಜ್ ಕ್ಯಾಪ್ ಗಿಟ್ಟಿಸಿದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡೇವಿಡ್ ವಾರ್ನರ್(2017)
2015ರ ಬಳಿಕ 2017ರಲ್ಲಿ ಸನ್ ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. 2 ಬಾರಿ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡ ಏಕೈಕ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2017ರಲ್ಲಿ ವಾರ್ನರ್ 642 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ‘ಈ ಸಲ ಕಪ್ ನಮ್ದೇ’ ಕೆಫೆ!
ಕೇನ್ ವಿಲಿಯಮ್ಸನ್(2018)
ಕಳೆದ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. 735 ರನ್ ಸಿಡಿಸಿದ ಕೇನ್ ವಿಲಿಯಮ್ಸನ್ 8 ಅರ್ಧಶತಕ ದಾಖಲಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.