ಬೆಂಗಳೂರು ಟಿ20 ಪಂದ್ಯದಲ್ಲಿ ಎಂ.ಎಸ್.ಧೋನಿ ಬ್ಯಾಟಿಂಗ್ ಇದೀಗ ಹೆಚ್ಚು ವೈರಲ್ ಆಗಿದೆ. ಧೋನಿ ಫ್ಲೆಕ್ಸಿಬಲ್ ಬ್ಯಾಟಿಂಗ್‌ನ್ನು ಬಿಸಿಸಿಐ ಕೂಡ ಶ್ಲಾಘಿಸಿದೆ. ಧೋನಿ ಕುರಿತು ಬಿಸಿಸಿ ಮಾಡಿದ ಟ್ವೀಟ್ ಏನು? ಇಲ್ಲಿದೆ.
ಬೆಂಗಳೂರು(ಫೆ.28): ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಯನ್ನ ಬಿಸಿಸಿಐ ಶ್ಲಾಘಿಸಿದೆ. ಬ್ಯಾಟಿಂಗ್ ವೇಳೆ ಧೋನಿ ಸ್ಟಂಪ್ ಔಟ್ ಆಗೋದನ್ನು ಸ್ವತಃ ತಪ್ಪಿಸಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಪಾಕ್ ಸೇನೆ ಬಗ್ಗೆ ಹೆಮ್ಮೆ ಇದೆ: ಶಾಹಿದ್ ಅಫ್ರಿದಿ
undefined
ಆ್ಯಡಮ್ ಜಂಪಾ ಎಸೆತದಲ್ಲಿ ಧೋನಿ ಫ್ರಂಟ್ ಫೂಟ್ ಹೊಡೆತಕ್ಕೆ ಮುಂದಾದರು. ಆದರೆ ಜಂಪಾ ಚಾಣಕ್ಷಣತದಿಂದ ಸ್ಟಂಪ್ ಮಾಡುವಂತೆ ಬೌಲಿಂಗ್ ಮಾಡಿದರು. ಇದನ್ನ ಅರಿತ ಧೋನಿ ತಕ್ಷಣವೇ ಕ್ರೀಸ್‌ನಲ್ಲಿ ಕಾಲಿಟ್ಟು ಸ್ಟಂಪ್ ಔಟ್ ಆಗೋದನ್ನ ತಪ್ಪಿಸಿದರು. ಈ ಮೂಲಕ ಧೋನಿ ಈ ವಯಸ್ಸಲ್ಲೂ ಫ್ಲೆಕ್ಸಿಬಲ್ ಎಂದು ವೈರಲ್ ಆಗಿದೆ.
How's that for a stretch from 😮😮
📹📹https://t.co/9hYmrJBmii pic.twitter.com/MXvXIvov0G
ಇದನ್ನೂ ಓದಿ: ಸಿಕ್ಸರ್’ನಲ್ಲಿ ಅರ್ಧಶತಕ ಸಿಡಿಸಿದ ಧೋನಿ-ಕೊಹ್ಲಿ..!
ಬಿಸಿಸಿಐ ಕೂಡ ಧೋನಿ ಫ್ಲೆಕ್ಸಿಬಲ್ ಎಂದು ಟ್ವೀಟ್ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ 2 ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಮೂಲಕ ಭಾರತ 0-2 ಅಂತರದಲ್ಲಿ ಸರಣಿ ಸೋತಿದೆ. ಇದೀಗ ಮಾರ್ಚ್ 2 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.